ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ಸಾಗಿದ್ದಾರೆ.
Advertisement
ಬೆಳಗಾವಿಯ ಸುವರ್ಣ ವಿಧಾನಸೌಧದ ಒಳಗೆ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸರಕಾರಕ್ಕೆ ಬಿಸಿಮುಟ್ಟಿಸಲು ಐದು ದಿನಗಳ ಅವಧಿಯಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಪ್ರತಿಭಟನೆಗಳು ನಡೆದವು. ಇಡೀ
ಸರಕಾರವೇ ಬೆಳಗಾವಿಯಲ್ಲಿ ಇದ್ದಿದ್ದರಿಂದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿಭಟನಾಕಾರರಿಗೆ ಕೇವಲ ಭರವಸೆಗಳೇ ಸಿಕ್ಕಿವೆ. ಸರಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆಯೇ ಹೊರತು ಗಟ್ಟಿಯಾಗಿ ಯಾವುದಕ್ಕೂ ಸ್ಪಂದಿಸಿಲ್ಲ.
ಗುಡ್ಡದಲ್ಲಿರುವ ಕೊಂಡಸಕೊಪ್ಪದಲ್ಲಿ ಪ್ರತಿಭಟನೆಗೆ ಸ್ಥಳ ನಿಗದಿ ಮಾಡಲಾಗಿತ್ತು. ಆದರೆ, ಬೇಡಿಕೆ
ಈಡೇರಿಸಬೇಕೆಂಬ ಕೂಗಿಗೆ ಬೆರಳೆಣಿಕೆಯಷ್ಟು ಮಾತ್ರ ಸ್ಪಂದನೆ ಸಿಕ್ಕಿದ್ದು, ಇನ್ನುಳಿದಂತೆ ಅಧಿಕಾರಿಗಳು ಹಾಗೂ ಪೊಲೀಸರ ಭರವಸೆ ನಂಬಿ ಜನ ವಾಪಸ್ಸಾಗಿದ್ದಾರೆ. ರೈತರು-ನೌಕರರಿಗೆ ಸಿಎಂ ಅಭಯ: ಕಬ್ಬಿನ ಬಿಲ್ ಬಾಕಿ ಹಾಗೂ ಎಫ್‌ಆರ್‌ಪಿ ದರಕ್ಕಾಗಿ ನಡೆದ ಅಹೋರಾತ್ರಿ ಧರಣಿ ಹಾಗೂ ಸುವರ್ಣ ಸೌಧದ ಎದುರು ನಡೆದ ಪ್ರತಿಭಟನಾ ಸ್ಥಳಕ್ಕೆ ಸಕ್ಕರೆ ಸಚಿವ ಕೆ.ಜೆ.ಜಾರ್ಜ್ ಬಂದು ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಹೊಸ ಪಿಂಚಣಿ ರದ್ದತಿಗೆ ಆಗ್ರಹಿಸಿ ರಾಜ್ಯ ಸರಕಾರಿ ನೌಕರರ ಬೃಹತ್ ಪ್ರತಿಭಟನೆಗೆ ಸ್ಪಂದಿಸಿ ಸಚಿವರಾದ ಡಿ.ಕೆ. ಶಿವಕುಮಾರ, ಬಂಡೆಪ್ಪ ಖಾಶೆಂಪುರ, ನಾಡಗೌಡ ಹಾಗೂ 12ಕ್ಕೂ ಹೆಚ್ಚು ಶಾಸಕರು ಬಂದಿದ್ದರು. ನಂತರ, ಮುಖ್ಯಮಂತ್ರಿಗಳ ಬಳಿ ನಾಲ್ಕೆçದು ಮುಖಂಡರನ್ನು ಕರೆಸಿ, ಚರ್ಚಿಸಿ ಸೂಕ್ತ ಭರವಸೆ ನೀಡಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಹೊತ್ತುಕೊಂಡು ಬಂದಿದ್ದ ಪ್ರತಿಭಟನಾಕಾರರನ್ನು ಸಚಿವೆ ಜಯಮಾಲಾ ಭೇಟಿಯಾಗಿ ದ್ದಾರೆ. ಇನ್ನುಳಿದಂತೆ ಯಾವೊಬ್ಬ ಸಚಿವರೂ ಪ್ರತಿಭಟನಾ ಸ್ಥಳಕ್ಕೆ ಬಂದಿಲ್ಲ. ಸಮಸ್ಯೆಗಳನ್ನು ಹೊತ್ತು ಬಂದಿದ್ದ ಶಿಕ್ಷಕರನ್ನು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಭೇಟಿಯಾದರು. ಇದಕ್ಕೆ ಪರ್ಯಾಯವಾಗಿ ಬಹುತೇಕ ಪ್ರತಿಭಟನೆಗಳಿಗೆ ವಿರೋಧ ಪಕ್ಷದ ಶಾಸಕರು ಭೇಟಿ ನೀಡಿ ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು.
Related Articles
Advertisement
ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲು ಸಂಘ-ಸಂಸ್ಥೆಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಐದು ದಿನಗಳಲ್ಲಿ ಸುಮಾರು 35ಕ್ಕೂ ಹೆಚ್ಚು ಪ್ರತಿಭಟ ನೆಗಳು ಆಗಿವೆ. ನಿಗದಿಪಡಿಸಿದ ಪೆಂಡಾಲ್‌ನಲ್ಲಿ ಧರಣಿ, ಪ್ರತಿಭಟನೆಗಳು ನಡೆದಿವೆ. ಆದರೆ, ರ್ಯಾಲಿ, ರಸ್ತೆ ತಡೆ, ಘೇರಾವ್, ಪಾದಯಾತ್ರೆ ಹಾಗೂ ಪಥಸಂಚಲನಗಳಿಗೆ ಅವಕಾಶವಿಲ್ಲ.ಮಹಾಂತೇಶ್ವರ ಜಿದ್ದಿ, ಎಸಿಪಿ ಅಪರಾಧ ವಿಭಾಗ ಭೈರೋಬಾ ಕಾಂಬಳೆ