ಬೆಳಗಾವಿ: ಮಾಸ್ಕ್ ಧರಿಸದೇ ವಾಹನದಲ್ಲಿ ಸಂಚರಿಸುತ್ತಿದ್ದ ಬೆಳಗಾವಿ ತಹಶೀಲ್ದಾರ ಆರ್.ಕೆ. ಕುಲಕರ್ಣಿ ಅವರಿಗೆ ಪೊಲೀಸರು ಇಂದು(ಶುಕ್ರವಾರ, ಮೇ 28) 250 ರೂ. ದಂಡ ವಿಧಿಸಿದ್ದಾರೆ.
ಇಲ್ಲಿಯ ನಗರದ ಚನ್ನಮ್ಮ ವೃತ್ತದಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ತಹಶೀಲ್ದಾರರು ತಮ್ಮ ವಾಹನದಲ್ಲಿ ತೆರಳುತ್ತಿದ್ದರು. ಆಗ ಖಡೇ ಬಜಾರ ಪೊಲೀಸರು ವಾಹನ ನಿಲ್ಲಿಸಿ ವಿಚಾರಣೆ ನಡೆಸಿದಾಗ ತಹಶೀಲ್ದಾರ ಕುಲಕರ್ಣಿ ಅವರು ಮಾಸ್ಕ್ ಧರಿಸದಿರುವುದನ್ನು ಗಮನಿಸಿ ಪೊಲೀಸರು ದಂಡ ವಿಧಿಸಿದ್ದಾರೆ.
ಇದನ್ನೂ ಓದಿ : ನಳೀನ ಕುಮಾರ್ ಕಟೀಲ್ ಜೊತೆ ಸಿಟಿ ರವಿ ರಹಸ್ಯ ಮಾತುಕತೆ
ತಹಶೀಲ್ದಾರ ಕುಲಕರ್ಣಿ ಅವರು ಸರ್ಕಾರಿ ವಾಹನದಲ್ಲಿ ಕಚೇರಿಗೆ ತೆರಳುತ್ತಿದ್ದರು. ಈ ವೇಳೆ ಮಾಸ್ಕ್ ಧರಿಸಿರಲಿಲ್ಲ. ಚನ್ನಮ್ಮ ವೃತ್ತಕ್ಕೆ ವಾಹನ ಬರುತ್ತಿದ್ದಂತೆ ಪೊಲೀಸರು ನಿಲ್ಲಿಸಿದಾಗ ಕೋವಿಡ್ ಸರ್ಕಾರಿ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ತಹಶೀಲ್ದಾರರು ದಂಡ ಕಟ್ಟಿ ಕಚೇರಿಗೆ ತೆರಳಿದ್ದಾರೆ. ಇದೇ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೊಬ್ಬರು ತಹಶೀಲ್ದಾರರ ವಾಹನವನ್ನು ಚಲಾಯಿಸುತ್ತಿದ್ದರು, ಮಾಧ್ಯಮದವರ ಕ್ಯಾಮರಾ ಕಂಡ ಕೂಡಲೇ ತಹಶೀಲ್ದಾರರು ಮಾಸ್ಕ್ ಧರಿಸಿರುವುದಾಗಿ ಸುದ್ದಿ ಮೂಲ ತಿಳಿಸಿದೆ.
ಇದನ್ನೂ ಓದಿ : ಬೆಳಗಾವಿ: ಕಬ್ಬಿನ ಬಾಕಿ ಬಿಲ್ ಪಾವತಿಗೆ ಜಿಲ್ಲಾಧಿಕಾರಿ ಸೂಚನೆ