ಬೆಳಗಾವಿ: ಶಿವಾಜಿ ಮಹಾರಾಜರ ಮೂರ್ತಿಗೆ ಕಪ್ಪು ಮಸಿ ಬಳಿದಿರುವುದನ್ನು ಖಂಡಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕಿಯರು, ಬಿಜೆಪಿ ಮುಖಂಡ ಕಿರಣ ಜಾಧವ ಸೇರಿದಂತೆ ಅನೇಕರು ಶನಿವಾರ ಬೆಳಗ್ಗೆ ಶಹಾಪುರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಿದ್ದಾರೆ.
144 ಕಲಂ ನಿಷೇಧಾಜ್ಞೆ ಮಧ್ಯೆಯೂ ಶಿವಾಜಿ ಮಹಾರಾಜರ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿದರು. ಹಾಲಿನ ಅಭಿಷೇಕ, ಪೂಜೆ ಮಡುವ ನೆಪ ಮಾಡಿ ಗುಂಪು ಕಟ್ಟಿಕೊಂಡು ಬಂದು ಶಾಂತಿ ಕದಡಿಸಲು ಯತ್ನಿಸುತ್ತಿದ್ದಾರೆ.
ಇದನ್ನೂ ಓದಿ :ಬೆಳಗಾವಿಯಲ್ಲಿ ಉದ್ವಿಗ್ನಗೊಂಡ ಪರಿಸ್ಥಿತಿ: ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ
ಎಂಇಎಸ್ ನಾಯಕಿಯರಾದ ಮಾಜಿ ಮೇಯರ್ ಸರಿತಾ ಪಾಟೀಲ, ಮಾಜಿ ಉಪಮೇಯರ್ ರೇಣು ಕಿಲ್ಲೇಕರ, ಮಧುಶ್ರೀ ಪೂಜಾರಿ, ಸುಧಾ ಭಾತಖಾಂಡೆ ಸೇರಿದಂತೆ ಎಂಇಎಸ್ ಕಾರ್ಯಕರ್ತೆಯರು ಭಾಗವಹಿಸಿದ್ದರು. ಕಲ್ಲು ತೂರಾಟ ಪ್ರಕರಣದಲ್ಲಿ ಬಂಧಿತ ಅಮಾಯಕ ಯುವಕರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಶಿವಾಜಿ ಮಹಾರಾಜರ ಉದ್ಯಾನವನ ಬಳಿ ಸೇರಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಚದುರಿಸಿ ವಾಪಸ್ ಕಳುಹಿಸಿದ್ದಾರೆ.