Advertisement

Belagavi; ಅಭಯ್ ಪಾಟೀಲ್ ‘ಕೇಂದ್ರದ ಮೊಬೈಲ್’ ಹೇಳಿಕೆಗೆ ಸಚಿವೆ ಹೆಬ್ಬಾಳ್ಕರ್ ಗರಂ

05:36 PM Jul 02, 2024 | Team Udayavani |

ಬೆಳಗಾವಿ: ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಮೊಬೈಲ್ ಕೇಂದ್ರ ಸರಕಾರದ್ದು ಎನ್ನುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರ ಹೇಳಿಕೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ಷೇಪ ವ್ಯಕ್ತಪಡಿಸಿದರು.

Advertisement

ರಾಜ್ಯದ ತೆರಿಗೆಯಲ್ಲಿ ಕೇಂದ್ರ ಪಾಲು ಪಡೆಯುವುದಿಲ್ಲವೇ? ಇದು ರಾಜಕೀಯ ಮಾಡುವ ವಿಷಯವೇ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನೆ ಮಾಡಿದರು.

ಇಂತಹ ಯೋಜನೆಗಳು ಯಾವತ್ತೂ ಕೇಂದ್ರ ಮತ್ತು ರಾಜ್ಯ ಸರಕಾರದ 60:40ರ ಅನುಪಾತದಲ್ಲಿರುತ್ತವೆ. ಹಾಗೆಯೇ ರಾಜ್ಯ ಸರಕಾರದ ತೆರಿಗೆಯಲ್ಲೂ ಕೇಂದ್ರ ಸರಕಾರಕ್ಕೆ ಪಾಲು ಹೋಗುತ್ತದೆ. ರಾಜ್ಯ ಮತ್ತು ಕೇಂದ್ರದಲ್ಲಿ ಯಾವುದೇ ಪಕ್ಷದ ಸರಕಾರಗಳು ಅಧಿಕಾರದಲ್ಲಿರಲಿ, ಇಂತಹ ಯೋಜನೆಗಳಿಗೆ ಅವುಗಳು ತಮ್ಮದೇ ಆದ ಪಾಲನ್ನು ಭರಿಸುವುದು ಒಕ್ಕೂಟ ವ್ಯವಸ್ಥೆಯಲ್ಲಿ ನಡೆದು ಬಂದಿರುವ ಪದ್ಧತಿ ಎಂದರು.

ರೈಲ್ವೆ ಯೋಜನೆಗಳು, ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಕೇಂದ್ರ ಸರಕಾರದ ಯೋಜನೆಗಳೆಂದು ಹೇಳಲಾಗುತ್ತದೆ. ಹಾಗಂತ ಪೂರ್ಣ ಹಣವನ್ನು ಕೇಂದ್ರವೇ ಭರಿಸುವುದಿಲ್ಲ. ರಾಜ್ಯ ಸರಕಾರ ತನ್ನ ಪಾಲಿನ ಹಣವನ್ನೂ ನೀಡುತ್ತದೆ. ಹಾಗೆಯೇ ರಾಜ್ಯ ಸರಕಾರದ ಅನೇಕ ಯೋಜನೆಗಳಿಗೆ ಕೇಂದ್ರ ಸರಕಾರ ನೆರವು ನೀಡುತ್ತದೆ. ಹಾಗಂತ ಇದು ಕೇಂದ್ರ ಸರಕಾರದ ಯೋಜನೆ ಎನ್ನಲಾಗದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟು ನೀಡಿದರು.

ಕೇಂದ್ರ ಸರಕಾರ ಪೋಷಣ್ ಅಭಿಯಾನದ ಅಡಿಯಲ್ಲಿ ಅನುದಾನ ನೀಡಿದೆಯೇ ವಿನಃ ಇದೇನೂ ವಿಶೇಷ ಅನುದಾನವಲ್ಲ. ಇಷ್ಟು ವರ್ಷ ಶಾಸಕರಾಗಿರುವವರು ಯೋಜನೆಗಳ ಕುರಿತು ಮಾಹಿತಿ ಹೊಂದಿರಬೇಕಾಗುತ್ತದೆ ಎಂದು ಹೆಬ್ಬಾಳಕರ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next