Advertisement

BEL- ರಕ್ಷಣಾ ಸಚಿವಾಲಯ 5,300 ಕೋಟಿ ಒಪ್ಪಂದ

08:39 PM Dec 15, 2023 | Pranav MS |

ನವದೆಹಲಿ: ಯುದ್ಧ ಸಾಮಗ್ರಿ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುತ್ತಿರುವ ರಕ್ಷಣಾ ಸಚಿವಾಲಯ ಸರ್ಕಾರಿ ಸ್ವಾಮ್ಯದ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ನೊಂದಿಗೆ 5,300 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ.

Advertisement

ಭಾರತೀಯ ಸೇನೆಗೆ ಎಲೆಕ್ಟ್ರಾನಿಕ್‌ ಫ್ಯೂಸ್‌ ಖರೀದಿಗಾಗಿ ಪುಣೆಯ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಜತೆ 10 ವರ್ಷಗಳ ಅವಧಿಗೆ ಶುಕ್ರವಾರ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ. ಎಲೆಕ್ಟ್ರಾನಿಕ್‌ ಫ್ಯೂಸ್‌ಗಳನ್ನು ಬಿಇಎಲ್‌, ಪುಣೆ ಹಾಗೂ ಮುಂದೆ ಸ್ಥಾಪನೆಯಾಗಲಿರುವ ನಾಗ್ಪುರ ಘಟಕದಲ್ಲಿ ತಯಾರಿಸುತ್ತದೆ. ಈ ಯೋಜನೆ 1.5 ಲಕ್ಷ ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸುತ್ತದೆ.

ಎಲೆಕ್ಟ್ರಾನಿಕ್‌ ಫ್ಯೂಸ್‌, ಭಾರೀ ಕ್ಯಾಲಿಬರ್‌ ಫಿರಂಗಿ ಗನ್‌ಗಳ ಅವಿಭಾಜ್ಯ ಅಂಗವಾಗಿದೆ. ಇದು ಮಿಲಿಟರಿ ಕಾರ್ಯಾಚರಣೆಗಳಿಗೆ ನಿರಂತರ ಗುಂಡು ಹಾರಿಸುವ ಶಕ್ತಿ ಒದಗಿಸುತ್ತದೆ. “ಆತ್ಮನಿರ್ಭರ್‌ ಭಾರತ್‌’ ಭಾಗವಾಗಿ 10 ವರ್ಷಗಳ ದೀರ್ಘಾವಧಿಯ ಅಗತ್ಯತೆಯ ಗಮನದಲ್ಲಿಟ್ಟುಕೊಂಡು “ಭಾರತೀಯ ಉದ್ಯಮದಿಂದ ಭಾರತೀಯ ಸೇನೆಗೆ ಮದ್ದುಗುಂಡುಗಳ ತಯಾರಿಕೆ’ ಅಡಿಯಲ್ಲಿ ಯುದ್ಧಸಾಮಗ್ರಿ ಖರೀದಿಗೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next