Advertisement
ಕಾಸರಗೋಡಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಕೇಂದ್ರ ಪ್ರವಾಸೋದ್ಯಮ ಇಲಾಖೆ ಸಚಿವ ಅಲೊ#àನ್ಸ್ ಕಣ್ಣಂತಾನಂ ನೇತೃತ್ವದಲ್ಲಿ ಇತ್ತೀಚೆಗೆ ಕಾಸರಗೋಡಿನಲ್ಲಿ ಜರಗಿದ ವಿಶೇಷ ಸಭೆಯಲ್ಲಿ ಯೋಜನೆಯ ಸಮಗ್ರ ಮಾಹಿತಿಯನ್ನು ಜೋಸ್ ಕೊಚ್ಚಿಕುನ್ನಿಲ್ ಅವರು ಸಚಿವರಿಗೆ ಸಲ್ಲಿಸಿದ್ದಾರೆ.
Related Articles
Advertisement
ಈ ಸ್ಕೈಬಸ್ ಯೋಜನೆಗೆ ಹೆದ್ದಾರಿ ಯನ್ನು ನಿರ್ಮಿಸುವ ಅರ್ಧದಷ್ಟು ಮಾತ್ರ ವೆಚ್ಚ ತಗಲುವುದಾಗಿದೆ. ಅದಲ್ಲದೆ ಭೂಸ್ವಾಧೀನದ ಅಗತ್ಯವೂ ಇರುವುದಿಲ್ಲ ಎಂಬುದಾಗಿ ಎಂಜಿನಿಯರ್ ಜೋಸ್ ಕೊಚ್ಚಿಕುನ್ನಿಲ್ ಹೇಳಿದ್ದಾರೆ. ಮಾತ್ರವಲ್ಲದೆ ಗಂಟೆಗೆ 500 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲು ಸಾಧ್ಯವಾಗುವ ರೀತಿಯಲ್ಲಿ ಸೌರ ವಿದ್ಯುತ್ ಉಪಯೋಗಿಸುವಂತಹ ಯೋಜನೆಯ ಪ್ರತ್ಯೇಕತೆಯನ್ನು ಈ ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.
ಈ ಯೋಜನೆಯ ಮೂಲಕ ರಸ್ತೆಯ ವಾಹನ ದಟ್ಟಣೆ ಕಡಿಮೆ ಮಾಡಲು ಸಾಧ್ಯವಾಗುವುದು. ಪ್ರಸ್ತುತ ಜಿಲ್ಲೆಗೆ ಆಗಮಿಸುವ ಪ್ರವಾಸಿಗಳು ಕೇವಲ ಬೇಕಲಕೋಟೆಗೆ ಮಾತ್ರ ಭೇಟಿ ನೀಡಿ ಹಿಂದಿರುಗುತ್ತಾರೆ. ರಾಣಿಪುರಕ್ಕೆ ತೆರಳಲು ಸಮಯದ ಅಭಾವವಿರುವುದರಿಂದ ಅಲ್ಲಿಗೆ ಯಾರೂ ಸಂದರ್ಶಿಸುವುದಿಲ್ಲ.
ಪ್ರಕೃತಿ ಸೌಂದರ್ಯ ವೀಕ್ಷಣೆ ನೂತನ ಸ್ಕೈಬಸ್ ವ್ಯವಸ್ಥೆಯನ್ನು ಸಜ್ಜುಗೊಳಿಸುವ ಮೂಲಕ ಪ್ರಕೃತಿಯ ಸೃಷ್ಟಿಯಾದ ರಾಣಿಪುರದ ಸೌಂದರ್ಯವನ್ನು ಸವಿಯಲು ಮತ್ತು ಕಾಸರಗೋಡು ಜಿಲ್ಲೆಯ ಸೌಂದರ್ಯವನ್ನು ಸ್ಕೈಬಸ್ ಪ್ರಯಾಣದ ಸಂದರ್ಭದಲ್ಲಿ ವೀಕ್ಷಿಸಲು ಸಾಧ್ಯವಾಗುವುದು. ಇದು ಜಿಲ್ಲೆಯ ಪ್ರವಾಸೋದ್ಯಮಕ್ಕೆ ದೊಡ್ಡ ಕೊಡುಗೆಯನ್ನು ನೀಡಬಲ್ಲುದು. ಈ ಯೋಜನೆಯ ಬಗ್ಗೆ ಕೇಂದ್ರ ಸಚಿವ ಅಲೊ#àನ್ಸ್ ಕಣ್ಣಂತಾನಂ ಅವರು ಅನುಕೂಲಕರವಾದ ನಿಲುವು ಹೊಂದಿದ್ದಾರೆ. ಆದ್ದರಿಂದ ಯೋಜನೆಯು ಆದಷ್ಟು ಬೇಗನೇ ಜಾರಿಗೆ ಬರುವ ನಿರೀಕ್ಷೆ ಇರಿಸಲಾಗಿದೆ. ಈ ಮೂಲಕ ಕಾಸರಗೋಡು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವು ಸಮಗ್ರ ಅಭಿವೃದ್ಧಿ ಹೊಂದಬಹುದು.