ಬೀಜಿಂಗ್: ಕೋವಿಡ್ 19 ಸಂಬಂಧಿತ ಪ್ರಕರಣದಲ್ಲಿ ಆಫ್ರಿಕನ್ನರ ಮೇಲೆ ತಾರತಮ್ಯ ತೋರಿಸುತ್ತಿದೆ ಎಂಬ ಆರೋಪಕ್ಕೆ ಗುರಿಯಾಗಿರುವ ಚೀನಾವೀಗ ಆಫ್ರಿಕಾದೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.
ದಕ್ಷಿಣ ಚೀನಾದ ನಗರವಾದ ಗುವಾಂಗ್ ಹೂ ನಲ್ಲಿ ಆಫ್ರಿಕನ್ ವಿದ್ಯಾರ್ಥಿಗಳು ಮತ್ತು ವಲಸಿಗರು ಬಲವಂತವಾಗಿ ಕೋವಿಡ್ 19 ಪರೀಕ್ಷೆಗೆ ಒಳಪಟ್ಟಿದ್ದರು. ಅನಿಯಂತ್ರಿತ 14 ದಿನಗಳ ಸ್ವಯಂ ಸಂಪರ್ಕ ತಡೆಗೆ ಒಳಪಟ್ಟಿದ್ದರು. ಸೋಂಕು ಹರಡುವ ಭೀತಿಯಿಂದ ಭೂಮಾಲಿಕರಿದ ಹೊರ ಹಾಕಲ್ಪಟ್ಟರು. ಜತೆಗೆ ಹೊಟೇಲುಗಳಿಂದ ತಿರಸ್ಕರಿಸಲ್ಪಟ್ಟು ನಿರಾಶ್ರಿತರಾಗಿದ್ದಾರೆ ಎಂಬ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.
ಆಫ್ರಿಕನ್ನರು ಪೊಲೀಸರಿಂದ ಕಿರುಕುಳಕ್ಕೊಳಗಾಗುತ್ತಿದ್ದಾರೆ. ಬೀದಿಗಳಲ್ಲಿ ಮಲಗುತ್ತಿದ್ದಾರೆಂಬ ವಿಡಿಯೋಗಳು ಎಲ್ಲೆಡೆ ಪ್ರಸಾರವಾಗುತ್ತಿರುವುದು ಚೀನೀಯರಲ್ಲಿ ವಿದೇಶಿ ವಿರೋಧಿ ಮನೋಭಾವ ಹೆಚ್ಚಲು ಕಾರಣವಾಗಿದೆ. ಇದರಿಂದ ಆಫ್ರಿಕಾದಲ್ಲಿನ ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆಯಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆಫ್ರಿಕಾದ ರಾಷ್ಟ್ರಗಳು ಬೀಜಿಂಗ್‌ಗೆ ಪ್ರಮುಖ ವ್ಯಾಪಾರ ಪಾಲುದಾರರಾಗಿದ್ದು, 2019ರಲ್ಲಿ ಇವರಿಬ್ಬರ ವ್ಯಾಪಾರದ ಮೌಲ್ಯ 8208 ಶತಕೋಟಿ ಆಗಿದೆ ಎಂದು ಚೀನದ ಅಡ್ಮಿನಿಸ್ಟ್ರೇಷನ್ ಆಫ್ ಕಸ್ಟಮ್‌ನ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಈ ಸಂಬಂಧ ಹೇಳಿಕೆ ನೀಡಿದ್ದು, ಚೀನಾ ವಿದೇಶಿಯರ ಮೇಲೆ ತಾರತಮ್ಯ ಅನುಸರಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಗಡಿಭಾಗದಿಂದ ಆಗಮಿಸುತ್ತಿರುವ ವಲಸೆ ಕಾರ್ಮಿಕರಿಂದ ಈ ಪ್ರಕರಣಗಳು ಹೆಚ್ಚುತ್ತಿದ್ದು ಈ ಒತ್ತಡಕ್ಕೆ ಕಾರಣವಾಗುತ್ತಿದೆ ಎಂದಿದ್ದರು.
ಬೀಜಿಂಗ್‌ನ ದ್ವಿಪಕ್ಷೀಯ ಸಂಬಂಧಗಳಲ್ಲಿ ಆಫ್ರಿಕಾ ದುರ್ಬಲ ಎಂದು ನಿರೂಪಿಸಲಾಗಿದೆ ಮತ್ತು ರಾಜತಾಂತ್ರಿಕ ಆಡಳಿತಕ್ಕೆ ಒಳಪಟ್ಟಿದೆ.
ಚೀನಾದ ಪ್ರತಿಕ್ರಿಯೆ
ಚೀನಾದ ವಿದೇಶಾಂಗ ಸಚಿವ ಈ ಬಿಕ್ಕಟ್ಟಿಗೆ ಪ್ರತಿಕ್ರಿಯಿಸಿ, ಪ್ರಾಂತೀಯ ಅಧಿಕಾರಿಗಳು ಕೆಲವು ಆಫ್ರಿಕನ್ ದೇಶಗಳ ಕಳವಳಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಾರೆ ಎಂದಿದ್ದರು.