Advertisement

Vijay Eshwar; ತೆರೆ ಹಿಂದಿನ ಹೀರೋ: ಗೀತೆ ರಚನೆಕಾರ ವಿಜಯ್‌ ಈಶ್ವರ್‌

05:32 PM Sep 15, 2023 | Team Udayavani |

ಸಿನಿಮಾವೊಂದರ ಮೊದಲ ಆಮಂತ್ರಣ ಪತ್ರಿಕೆ ಎಂದರೆ ಆ ಸಿನಿಮಾದ ಹಾಡುಗಳು. ಹಾಡುಗಳು ಚೆನ್ನಾಗಿದ್ದು, ಕೇಳುಗರ ಬಾಯಲ್ಲಿ ನಲಿದಾಡಿದರೆ ಅರ್ಧ ಸಿನಿಮಾ ಗೆದ್ದಂತೆ ಎಂಬ ಮಾತಿದೆ. ಹಾಗಾಗಿಯೇ ಸಿನಿಮಾ ನಿರ್ದೇಶಕರು ಒಳ್ಳೆಯ ಹಾಡುಗಳನ್ನು ಬರೆಸುವಲ್ಲಿ ಹೆಚ್ಚು ತಲೆಕೆಡಿಸಿಕೊಂಡಿರುತ್ತಾರೆ. ಸದ್ಯ ಆ ತರಹ ಒಂದಷ್ಟು ಒಳ್ಳೆಯ ಹಾಡುಗಳನ್ನು ನೀಡಿ, ಚಿತ್ರರಂಗದಲ್ಲಿ ಓಡಾಡುತ್ತಿರುವ ಹೊಸ ಹೆಸರು ವಿಜಯ್‌ ಈಶ್ವರ್‌.

Advertisement

ಯಾರು ಈ ವಿಜಯ್‌ ಈಶ್ವರ್‌ ಎಂದರೆ ಕನ್ನಡ ಚಿತ್ರರಂಗದ ನವ ಬರಹಗಾರ. ಸಿನಿಮಾದ ಸ್ಕ್ರಿಪ್ಟ್, ಡೈಲಾಗ್‌ ಹಾಗೂ ಲಿರಿಕ್ಸ್‌ನಲ್ಲಿ ತೊಡಗಿಕೊಂಡಿರುವ ವಿಜಯ್‌ ಈಶ್ವರ್‌, ತಮ್ಮ ಹಾಡುಗಳ ಮೂಲಕ ಸ್ವಲ್ಪ ಸದ್ದು ಮಾಡುತ್ತಿದ್ದಾರೆ. ಪ್ರೇಮ್‌ ನಿರ್ದೇಶನದ “ಏಕ್‌ಲವ್‌ಯಾ’ ಚಿತ್ರದ “ಮೀಟ್‌ ಮಾಡೋಣ ಇಲ್ಲ ಡೇಟ್‌ ಮಾಡೋಣ…’ ಹಾಡನ್ನು ನೀವು ಕೇಳಿರಬಹುದು. ಆ ಹಾಡಿನ ಹಿಂದಿನ ಪೆನ್ನು ನಲಿದಾಡಿದ್ದು ಇದೇ ವಿಜಯ್‌ ಈಶ್ವರ್‌. ಇದರ ಜೊತೆಗೆ ಅದೇ ಚಿತ್ರದ “ಮತ್ತೆ ನೋಡಬೇಡ’ ಹಾಡು ಕೂಡಾ ಇವರೇ ಬರೆದಿದ್ದು.

ಇನ್ಫೋಸಿಸ್‌ನಲ್ಲಿ ಉದ್ಯೋಗದಲ್ಲಿದ್ದ ವಿಜಯ್‌ಗೆ ತಾನು ಬೇರೇನೋ ಮಾಡಬೇಕು, ಈ ರೆಗ್ಯುಲರ್‌ ಕೆಲಸ ತನಗಲ್ಲ ಎಂಬುದು ಕೊರೆಯುತ್ತಲೇ ಇತ್ತಂತೆ. ಅದೊಂದು ಶುಭದಿನ ಒಂದು ನಿರ್ಧಾರಕ್ಕೆ ಬಂದ ವಿಜಯ್‌, ರಾತ್ರೋರಾತ್ರಿ ಮ್ಯಾನೇಜರ್‌ ಕೈಗೆ ಐಡಿ ಕಾರ್ಡ್‌ ಕೊಟ್ಟು ನಾಳೆಯಿಂದ ನಾನು ಕೆಲಸಕ್ಕೆ ಬರುವುದಿಲ್ಲ ಎಂದರಂತೆ. ಅಲ್ಲಿಂದ ವಿಜಯ್‌ ಜರ್ನಿ ಶುರು.

“ಲೌಡ್‌ ಸ್ಪೀಕರ್‌’ ಚಿತ್ರಕ್ಕೆ ಹಾಡು, ಡೈಲಾಗ್‌ನಿಂದ ಆರಂಭವಾದ ವಿಜಯ್‌ ಸದ್ಯ ಬಿಝಿ ಬರಹಗಾರ. ಸಿನಿಮಾದ ಸಾಹಿತ್ಯದ ಜೊತೆಗೆ ಸಂಭಾಷಣೆ, ಚಿತ್ರಕಥೆಯಲ್ಲೂ ತೊಡಗಿಕೊಂಡಿದ್ದಾರೆ. ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ನಟನೆಯ “ಕೆಡಿ’ ಚಿತ್ರಕ್ಕೂ ಇವರೇ ಸಂಭಾಷಣೆ ಬರೆದಿದ್ದಾರೆ. ಇದರ ಜೊತೆಗೆ “ಸೂತ್ರಧಾರಿ’, “ಛೂ ಮಂತರ್‌’ ಸೇರಿದಂತೆ ಹಲವು ಸಿನಿಮಾಗಳ ಟೈಟಲ್‌ ಟ್ರ್ಯಾಕ್‌ನಲ್ಲಿ ವಿಜಯ್‌ ಹೆಸರು ನಲಿದಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next