Advertisement

ಸಾಧನೆಯ ಹಿಂದಿದೆ ಪರಿಶ್ರಮದ ಪಯಣ: ಸಾಹಿತ್ಯ

04:22 PM Jun 07, 2022 | Team Udayavani |

ಬೆಳಗಾವಿ: ಜ್ಞಾನ, ಕೌಶಲ್ಯ, ಸೃಜನಶೀಲತೆ, ಓದಿನ ನಿರಂತರತೆ, ದೃಢ ನಿರ್ಧಾರ ಸಾಧನೆಯ ಶಿಖರದ ಮೆಟ್ಟಿಲುಗಳು. ಇವು ಶಿಕ್ಷಣದ ಜೊತೆಗೆ ಬಂದಾಗ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಸಾಮರ್ಥ್ಯ ಒದಗಿಸುತ್ತವೆ ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬೈಲಹೊಂಗಲದ ಸಾಹಿತ್ಯ ಆಲದಕಟ್ಟಿ ಅಭಿಪ್ರಾಯಪಟ್ಟರು.

Advertisement

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಅವರು ವಿಶೇಷ ಉಪನ್ಯಾಸ ನೀಡಿದರು.

ಶಿಕ್ಷಣ ನಮ್ಮ ಆಸ್ತಿಯಾಗಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಸಾಧನೆಯಲ್ಲಿ ವಿದ್ಯಾರ್ಥಿಗಳ ಶಿಸ್ತಿನ ಜೀವನ ಮತ್ತು ಶಿಕ್ಷಕರ ಪಾತ್ರ ಮುಖ್ಯವಾದುದು. ಸಾಧನೆ ಮಾಡಿದಾಗ ಸಿಗುವ ಗೌರವ ಸೋತಾಗ ಸಿಗುವುದಿಲ್ಲ. ಯಶಸ್ಸಿನ ಹಿಂದೆ ಪರಿಶ್ರಮದ ಪಯಣವಿರುತ್ತದೆ. ಯಾವುದೇ ಕಾರ್ಯಕ್ಷೇತ್ರಕ್ಕೆ ನಾವು ಹೋದರೂ ಅದರಲ್ಲಿ ನಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಬೇಕು ಎಂದು ಹೇಳಿದರು. ರಾಚವಿ ಪಿ.ಎಂ.ಇ.ಬಿ ನಿರ್ದೇಶಕ ಪ್ರೊ. ಅಶೋಕ ಡಿಸೋಜಾ ಮಾತನಾಡಿ, ವಿದ್ಯಾರ್ಥಿಗಳು ಏನೂ ಇಲ್ಲವೆಂದು ಕೊರಗುವುದಕ್ಕಿಂತ ತಮಗೆ ಸಿಕ್ಕ ಅವಕಾಶ, ವ್ಯವಸ್ಥೆಯನ್ನು ತಮ್ಮದಾಗಿಸಿಕೊಳ್ಳಬೇಕು. ತಮ್ಮಲ್ಲಿರುವ ದೌರ್ಬಲ್ಯವನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಂಡಲ್ಲಿ ಎಲ್ಲವೂ ಸಾಧ್ಯ ಎಂದರು.

ಆಶಾ ಯಮನಕರಡಿ ಮಾತನಾಡಿ, ಕೊರತೆಗಳು ನಮ್ಮ ಮುಂದಿಟ್ಟಾಗ ಯಶಸ್ಸು ನಮ್ಮ ಹಿಂದೆ ಹೋಗುತ್ತದೆ. ಸಾಧನೆಯು ಸದ್ದಿಲ್ಲದೇ ಇರಲಿ. ಆದರೆ ಸಾಧನೆ ಸದ್ದಾಗಿರಲಿ ಎಂದರು.

ರಾಚವಿ ಮೌಲ್ಯಮಾಪನ ಕುಲಸಚಿವ ಪ್ರೊ. ವೀರನಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಆಲದಕಟ್ಟಿಯವರು ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ. ನಮ್ಮ ವಿದ್ಯಾರ್ಥಿಗಳಿಗೆ ಅವರ ಸಾಧನೆಯ ದಾರಿ ಮಾರ್ಗದರ್ಶನವಾಗಿದೆ ಎಂದರು.

Advertisement

ಮಹಿಳಾ ಸಬಲೀಕರಣ ಘಟಕದ ಸಂಯೋಜಕರಾದ ಪೂಜಾ ಹಲ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಹಾವಿದ್ಯಾಲಯದ ಪ್ರಭಾರ ಪ್ರಾಚಾರ್ಯ ಆದಿನಾಥ ಉಪಾಧ್ಯೆ, ಮಹಾವಿದ್ಯಾಲಯದ ಸಾಂಸ್ಕೃತಿಕ ಸಂಯೋಜಕ ಡಾ. ಸುಮನ ಮುದ್ದಾಪುರ ಇದ್ದರು.

ಹುಲಮನಿ ಪ್ರಾರ್ಥಿಸಿದರು. ಉಪನ್ಯಾಸಕಿ ಅಶ್ವಿ‌ನಿ ಜವಳಿಮಠ ನಿರೂಪಿಸಿದರು, ಡಾ. ಬಿ.ಆರ್‌. ರಾಧಾ ವಂದಿಸಿದರು. ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next