Advertisement

ಆರಂಭವಾಗಿದೆ ಚಳಿಗಾಲ ಆಹಾರದಲ್ಲಿರಲಿ ಅಧಿಕ ನೀರಿನಾಂಶ

11:38 AM Nov 05, 2020 | Nagendra Trasi |

ಬೇಸಗೆಯಲ್ಲಿ ನಾವು ಹೆಚ್ಚು ನೀರು ಕುಡಿಯುತ್ತೇವೆ. ಹೀಗಾಗಿ ನಿರ್ಜಲೀಕರಣವಾಗುವುದು ಕಡಿಮೆ. ಆದರೆ ಚಳಿಗಾಲದಲ್ಲಿ ನೀರು ಕುಡಿಯುವುದೇ ಮರೆತುಹೋಗುತ್ತದೆ. ಹೀಗಾಗಿ ಒಣ ತ್ವಚೆ, ನಿರ್ಜಲೀಕರಣ ಮಾತ್ರವಲ್ಲದೇ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ, ದೇಹದ
ಉಷ್ಣತೆ ಹೆಚ್ಚುತ್ತದೆ, ಕೀಲು ನೋವು ಬಾಧಿಸುತ್ತದೆ.

Advertisement

ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಆಹಾರದಲ್ಲಿ ಒಂದಷ್ಟು ಬದಲಾವಣೆಗಳನ್ನು ನಾವು ಮಾಡಿಕೊಳ್ಳಲೇಬೇಕು. ಮುಖ್ಯವಾಗಿ ದೇಹದಲ್ಲಿ ನೀರಿನಾಂಶವನ್ನು
ಸಮತೋಲನದಲ್ಲಿರಿಸಿಕೊಳ್ಳಲು ಬೇಕಾಗುವ ಪದಾರ್ಥಗಳು ನಮ್ಮ ಆಹಾರದಲ್ಲಿರಬೇಕು.

ಸೊಪ್ಪು
ಅತ್ಯಂತ ಪೌಷ್ಟಿಕ ಆಹಾರವಾಗಿರುವ ಬಸಳೆ ಅಥವಾ ಪಾಲಕ್‌ ಸೊಪ್ಪು ನಮ್ಮ ಆಹಾರದಲ್ಲಿರಲಿ. ಇದು ದೇಹದಲ್ಲಿ ನೀರಿನಾಂಶ ಉಳಿಸಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿ ಲ್ಯೂಟೀನ್‌, ಪೊಟ್ಯಾಶಿಯಂ, ನಾರಿನಾಂಶ, ಫೋಲೇಟ್‌, ವಿಟಮಿನ್‌ ಇ ಜತಗೆ ಕಬ್ಬಿಣಾಂಶವೂ ಅಧಿಕವಾಗಿದ್ದು ಚಳಿಗಾಲದಲ್ಲಿ ಸೇವಿಸಲು ಸೂಕ್ತವಾಗಿದೆ.

ದೊಣ್ಣೆ ಮೆಣಸು
ಖಾರವಿಲ್ಲದ ಮೆಣಸು ಇದಾಗಿದ್ದು ಇದರಲ್ಲಿ ಬಹುತೇಕ ನೀರಿನಾಂಶವಿದೆ. ಜತೆಗೆ ವಿಟಮಿನ್‌ ಸಿ, ಬಿ6, ಬೀಟಾ ಕ್ಯಾರೋಟೀನ್‌, ಫೋಲಿಕ್‌ ಆಮ್ಲ ಹಾಗೂ ಥಿಯಾಮಿನ್‌ ಅಂಶಗಳೂ ಇದ್ದು ದೇಹಕ್ಕೆ ಬೇಕಾದ ಬಹುತೇಕ ಪೋಷಕಾಂಶಗಳನ್ನು ಪೂರೈಸುತ್ತದೆ.

ಟೊಮಾಟೋ
ಇದರಲ್ಲಿ ಶೇ. 90ರಷ್ಟು ನೀರಿನಾಂಶವಿದ್ದು, ಚಳಿಗಾಲದಲ್ಲಿ ಇದರ ಸೇವನೆ ಅತ್ಯಂತ ಉಪಯುಕ್ತವಾಗಿದೆ.

Advertisement

ಆಲಿವ್‌ ಆಯಿಲ್‌
ವಿಟಮಿನ್‌ ಇ ಮತ್ತು ಉತ್ತಮ ಕೊಬ್ಬು ಹೊಂದಿರುವ ಆಲಿವ್‌ ಆಯಿಲ್‌ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನೂ ಒದಗಿಸುತ್ತದೆ. ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.

ಹೂಕೋಸು
ಇದು ಕೂಡ ದೇಹದಲ್ಲಿ ನಿರ್ಜಲೀಕರಣವಾಗುವುದನ್ನು ತಪ್ಪಿಸುತ್ತದೆ. ಸಂಶೋಧನೆಯೊಂದರ ಪ್ರಕಾರ ಒಂದು ಕಪ್‌ ಹೂಕೋಸಿನಲ್ಲಿ 50 ಮಿಲಿಗಿಂತ ಹೆಚ್ಚು ನೀರಿನಾಂಶವಿರುತ್ತದೆ. ಹೀಗಾಗಿ ಚಳಿಗಾಲಕ್ಕೆ ಇದು ಸೂಕ್ತ ತರಕಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next