Advertisement

ಸಂತ್ರಸ್ತರಿಗಾಗಿ ಮಠಾಧೀಶರ ಅನಿರ್ದಿಷ್ಟ ಧರಣಿ ಆರಂಭ

11:02 PM Sep 27, 2019 | Lakshmi GovindaRaju |

ಬಾಗಲಕೋಟೆ: ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವುದು ಸೇರಿ ಸಂತ್ರಸ್ತರ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲೆಯ ವಿವಿಧ ಮಠಾಧೀಶರು ಶುಕ್ರವಾರದಿಂದ ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ. ನಗರ ಹೊರವಲಯದ ಗದ್ದನಕೇರಿ ಕ್ರಾಸ್‌ ಬಳಿ ಇರುವ ಮುಗಳಖೋಡ ಯಲ್ಲಾಲಿಂಗ ಮಹಾರಾಜರ ಶಾಖಾ ಮಠ ಶ್ರೀ ಸಂಗಮನಾಥ ಮಹಾರಾಜರ ಮಠದಲ್ಲಿ ಜಿಲ್ಲೆಯ ವಿವಿಧ 13ಕ್ಕೂ ಹೆಚ್ಚು ಮಠಾಧೀಶರು, ಹಲವು ಪ್ರಗತಿಪರ ಸಂಘಟನೆಗಳ ಪ್ರಮುಖರು ಧರಣಿ ನಡೆಸುತ್ತಿದ್ದಾರೆ.

Advertisement

ಮುಖ್ಯಮಂತ್ರಿ ಇಲ್ಲವೇ ಕಂದಾಯ ಸಚಿವರು ಧರಣಿ ಸ್ಥಳಕ್ಕೆ ಬಂದು ಸ್ಪಷ್ಟ ಭರವಸೆ ನೀಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಶಿರೋಳದ ಶ್ರೀ ಶಂಕರಾರೂಢ ಸ್ವಾಮೀಜಿ ಧರಣಿಯಲ್ಲಿ ಹೇಳಿದರು. ಗಲಗಲಿಯ ಶ್ರೀ ಗುರುಲಿಂಗ ಸ್ವಾಮೀಜಿ, ಕುಂಚನೂರು ಕಮರಿಮಠದ ಶ್ರೀ ಸಿದ್ದಲಿಂಗ ದೇವರು, ಆಲಗೂರಿನ ಶಾಂತಮೂರ್ತಿ ಲಕ್ಷ್ಮಣಮೂರ್ತಿ, ಹುಬ್ಬಳ್ಳಿಯ ಶಿವಶಂಕರ ಸ್ವಾಮೀಜಿ,

ಉಪ್ಪಾರಹಟ್ಟಿಯ ನಾಗೇಶ್ವರ ಸ್ವಾಮೀಜಿ, ಜಮಖಂಡಿಯ ಕೃಷ್ಣಾನಂದ ಸ್ವಾಮೀಜಿ, ಲಿಂಗನೂರಿನ ಶಿವಪುತ್ರ ಅವಧೂತರು, ಚಿಕ್ಕಶೆಲ್ಲಿಕೇರಿಯ ಅಡವೇಶ್ವರ ಸ್ವಾಮೀಜಿ, ಗದ್ದನಕೇರಿಯ ಕರಬಸವೇಶ್ವರ ಸ್ವಾಮೀಜಿ, ಗಣಿಯ ಚಿನ್ಮಯಾನಂದ ಸ್ವಾಮೀಜಿ, ಅಡವೇಶ್ವರ ಶಾಸ್ತ್ರಿಗಳು, ಕರವೇ ಅಧ್ಯಕ್ಷ ರಮೇಶ ಬದೂ°ರ, ಪ್ರಮುಖರಾದ ಡಾ|ಗವಿಮಠ, ನಾಗೇಶ ಗೋಲಶೆಟ್ಟಿ ಹಾಗೂ ರೈತ ಸಂಘದ ಪ್ರಮುಖರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next