Advertisement

ವರ್ಷದಲೇ ವಿಮಾನ ಹಾರಾಟ ತರಬೇತಿ ಶುರು

04:51 PM Jun 20, 2021 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲೇ ಪ್ರಪ್ರಥಮ ಬಾರಿಗೆ ವಿಮಾನ ಹಾರಾಟ ತರಬೇತಿ ಅಕಾಡೆಮಿಗಳ ಆರಂಭಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿರುವುದರಿಂದ ಕಲಬುರಗಿ ಮತ್ತು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮುಂದಿನ ಒಂದು ವರ್ಷದೊಳಗೆ ತರಬೇತಿ ಕಾರ್ಯ ಶುರುವಾಗಲಿದೆ.

Advertisement

ರಾಜ್ಯದ ಕಲಬುರಗಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ತಲಾ ಎರಡು ವಿಮಾನ ಹಾರಾಟ ತರಬೇತಿ ಸಂಸ್ಥೆಗಳ ಆರಂಭಕ್ಕೆ ಮೇ 31ರಂದು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಹೈದ್ರಾಬಾದ್‌ನ ಏಷ್ಯಾ ಪೆಸಿμಕ್‌ ಫ್ಲೆ$çಟ್‌ ಟ್ರೈನಿಂಗ್‌ ಅಕಾಡೆಮಿ ಮತ್ತು ದೆಹಲಿಯ ರೆಡ್‌ಬರ್ಡ್‌ ಏವಿಯೇಷನ್‌ ಅಕಾಡೆಮಿ ತಮ್ಮ ಕೇಂದ್ರಗಳನ್ನು ಸ್ಥಾಪಿಸಲಿವೆ. ಈ ಎರಡೂ ಸಂಸ್ಥೆಗಳಿಗೆ ಒಂದು ತಿಂಗಳಲ್ಲಿ ಅಂದರೆ ಜೂ.30ರೊಳಗೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಅಂತಿಮ ಕರಾರು ಪ್ರಕ್ರಿಯೆ ಮುಗಿಸಬೇಕೆಂದು ವಿಮಾನಯಾನ ಸಚಿವಾಲಯ ಸೂಚಿಸಿದೆ. ಹೀಗಾಗಿ ಎರಡೂ ಸಂಸ್ಥೆಯವರು ಶೀಘ್ರವೇ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರರಾವ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ತಲಾ 5000 ಚದರ ಮೀಟರ್‌ ಭೂಮಿ: ವಿಮಾನ ನಿಲ್ದಾಣದೊಳಗೆ ಎರಡೂ ವಿಮಾನ ಹಾರಾಟ ತರಬೇತಿ ಅಕಾಡೆಮಿಗಳು ತಲೆ ಎತ್ತಲಿವೆ. ಇದಕ್ಕಾಗಿ ಏಷ್ಯಾ ಪೆಸಿμಕ್‌ ಫ್ಲೆ$çಟ್‌ ಟ್ರೈನಿಂಗ್‌ ಅಕಾಡೆಮಿ ಮತ್ತು ರೆಡ್‌ಬರ್ಡ್‌ ಏವಿಯೇಷನ್‌ ಅಕಾಡೆಮಿಗೆ ತಲಾ ಐದು ಸಾವಿರ ಚದರ ಮೀಟರ್‌ ಜಾಗ ಹಂಚಿಕೆ ಮಾಡಲಾಗಿದೆ. ಸರ್ಕಾರದ ಅನುಮತಿ ಸಿಗುವ ಪೂರ್ವದಲ್ಲೇ ಸಂಸ್ಥೆಯವರು ಒಮ್ಮೆ ವಿಮಾನ ನಿಲ್ದಾಣಕ್ಕೆ ಭೇಟಿ ಕೊಟ್ಟು ಹೋಗಿದ್ದಾರೆ.

ಈಗ ಅಧಿಕೃತವಾಗಿ ಒಪ್ಪಿಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಈ ಬಾರಿಯ ಭೇಟಿ ಸಂದರ್ಭದಲ್ಲಿ ಆಯಾ ಸಂಸ್ಥೆಗಳಿಗೆ ತಲಾ ಐದು ಸಾವಿರ ಚದರ ಮೀಟರ್‌ನಂತೆ ಹತ್ತು ಸಾವಿರ ಚದರ ಮೀಟರ್‌ ಸ್ಥಳವನ್ನು ಹಸ್ತಾಂತರ ಮಾಡಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ. ಒಂದು ವರ್ಷದ ಗಡುವು: ವಿಮಾನ ಹಾರಾಟ ತರಬೇತಿ ಸಂಸ್ಥೆಗಳಿಗೆ ಭೂಮಿ ಹಸ್ತಾಂತರ ಪ್ರಕ್ರಿಯೆ ಮುಗಿಸಿದ ನಂತರ ಒಂದು ವರ್ಷದೊಳಗೆ ತರಬೇತಿ ಆರಂಭಿಸಬೇಕೆಂದು ಗುಡುವು ವಿಧಿಸಲಾಗಿದೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಶೀಘ್ರವೇ ಸಂಸ್ಥೆಗಳ ನಿರ್ಮಾಣ ಕಾಮಗಾರಿ ಆರಂಭವಾಗಲಿದ್ದು, ಒಂದು ವರ್ಷದಲ್ಲಿ ವಿಮಾನ ಹಾರಾಟ ತರಬೇತಿ ಆರಂಭದ ನಿರೀಕ್ಷೆಗಳು ಸ್ಪಷ್ಟವಾಗಿವೆ.

ಒಟ್ಟು 10 ಸಾವಿರ ಚದರ ಮೀಟರ್‌ ಜಾಗದಲ್ಲಿ ಏಷ್ಯಾ ಪೆಸಿμಕ್‌ ಫ್ಲೆ$çಟ್‌ ಟ್ರೈನಿಂಗ್‌ ಅಕಾಡೆಮಿ ಹಾಗೂ ರೆಡ್‌ಬರ್ಡ್‌ ಏವಿಯೇಷನ್‌ ಅಕಾಡೆಮಿಯು ಪ್ರತ್ಯೇಕವಾಗಿ ತಮ್ಮ ಕಚೇರಿ ಸೇರಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕು. ಕಟ್ಟಡದ ವಿನ್ಯಾಸ, ನಿರ್ಮಾಣ, ತರಗತಿ ಕೊಠಡಿಗಳು, ಪಾರ್ಕಿಂಗ್‌ ಬೇಸ್‌ ಮತ್ತು ಅಗತ್ಯವಾದ ಸೌಕರ್ಯಗಳನ್ನು ಸಂಸ್ಥೆಯವರೇ ನೋಡಿಕೊಳ್ಳಬೇಕು. ಒಂದು ವರ್ಷದಲ್ಲಿ ಹಾರಾಟ ತರಬೇತಿ ಶುರು ಮಾಡಬೇಕೆಂಬ ಷರತ್ತನ್ನು ಎರಡೂ ಸಂಸ್ಥೆಗಳಿಗೆ ವಿಮಾನಯಾನ ಸಚಿವಾಲಯ ನೀಡಿದೆ ಎನ್ನುತ್ತಾರೆ ಜ್ಞಾನೇಶ್ವರರಾವ್‌.

Advertisement

ಮೂರು ಸಾವಿರ ಗಂಟೆ ಟ್ರೈನಿಂಗ್‌: ವಿಮಾನ ಹಾರಾಟ ತರಬೇತಿಯನ್ನು ಕನಿಷ್ಟ ಇಷ್ಟು ಗಂಟೆಗಳ ಕಾಲ ಕೊಡಲೇಬೇಕೆಂಬ ನಿಯಮ ಮಾಡಲಾಗಿದೆ. ಪ್ರತಿ ಸಂಸ್ಥೆಯು ಒಂದು ವರ್ಷಕ್ಕೆ ಮೂರು ಸಾವಿರ ಗಂಟೆ ಹಾರಾಟ ನಡೆಸಬೇಕು. ತರಬೇತಿ ನೀಡಲು ಬಳಸುವ ಎಲ್ಲ ಏರ್‌ಕ್ಯಾಪ್ಟರ್‌ಗಳು ಸೇರಿ ಹಾರಾಟ ಅವಧಿ ಮೂರು ಸಾವಿರ ಗಂಟೆಗಳ ಕಾಲ ಆಗಲೇಬೇಕೆಂದು ವಿಮಾನಯಾನ ಸಚಿವಾಲಯದ ಹೇಳಿದೆ ಎಂದು ಜ್ಞಾನೇಶ್ವರರಾವ್‌ ತಿಳಿಸಿದ್ದಾರೆ. ಕಮರ್ಷಿಯಲ್‌ ಪೈಲಟ್‌ ಲೈಸೆನ್ಸ್‌, ಪ್ರೈವೇಟ್‌ ಪೈಲಟ್‌ ಲೈಸೆನ್ಸ್‌, ಮಲ್ಟಿ ಎಂಜಿನ್‌ ರೇಟಿಂಗ್‌, ಫ್ಲೆ$çಟ್‌ ಇನ್‌ಸ್ಟ್ರಕ್ಟರ್‌ ರೇಟಿಂಗ್‌, ಟೈಪ್‌ ರೇಟಿಂಗ್‌ ಸೇರಿದಂತೆ ಇತರ ಕೋರ್ಸ್‌ಗಳನ್ನು ಕಲಿಸಿಕೊಡಲಾಗುತ್ತದೆ ಎನ್ನಲಾಗಿದೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಈ ಎರಡೂ ಅಕಾಡೆಮಿಗಳು 30 ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next