ಪಿರಿಯಾಪಟ್ಟಣ: ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಮೊದಲು ಕೆರೆಗಳ ಹೂಳೆತ್ತಿ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಸ್.ಮಂಜುನಾಥ್ ಆಗ್ರಹಿಸಿದರು. ಪಿರಿಯಾಪಟ್ಟಣದ ಮಂಜುನಾಥ್ ಅಭಿಮಾನಿ ಬಳಗದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
275 ಕೋಟಿ ರೂಗಳ ಯೋಜನೆಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು, ಇನ್ನು ಈ ನಿಟ್ಟಿನಲ್ಲಿ ಕಾಮಗಾರಿ ಪ್ರಾರಂಭಿಸದೇ ಕಾಟಾಚಾರದ ಕಾಮಗಾರಿ ನಡೆಸಿದ್ದಾರೆ ಎಂದು ಆರೋಪಿಸಿದರು. ಹಿಂದೆ ಕರಡಿಲಕ್ಕನ ಕೆರೆ ಏತನೀರಾವರಿ ಯೋಜನೆಯನ್ನು 20 ಕೋಟಿ ರೂಗಳ ಯೋಜನೆಯೆಂದು ರೂಪಿಸಲಾಗಿತ್ತು.
ಆದರೆ, ಕಾಮಗಾರಿ ಮುಗಿದಾಗ 175 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿತ್ತು ಅಲ್ಲದೇ ಕಾಮಗಾರಿ ಕೂಡ ವರ್ಷನುಗಟ್ಟಲೆ ನಡೆದಿದ್ದು, ಇದು ಕೂಡ ಅಂತಹದೆ ಕಾಮಗಾರಿಯಾಗದೆ ಶೀಘ್ರ ರೈತರಿಗೆ ನೀರು ದೊರೆಯುವಂತಾಗಬೇಕು ಎಂದು ತಿಳಿಸಿದರು.
ಸಾಂಕ್ರಾಮಿಕ ರೋಗ ಭೀತಿ: ತಾಲೂಕಿನಲ್ಲಿ ಡೆಂಘೀ, ಚಿಕೂನ್ ಗೂನ್ಯ ಮಲೇರಿಯಾದಂತಹ ರೋಗಗಳು ಸಾರ್ವಜನಿಕರಿಗೆ ತೀವ್ರವಾಗಿ ಕಾಡತೊಡಗಿದ್ದು ಪಟ್ಟಣದ ವ್ಯಾಪ್ತಿಯಲ್ಲಿ ಸ್ವತ್ಛತೆಯು ಇಲ್ಲದೆ, ಸಾಂಕ್ರಾಮಿಕ ರೋಗ ಹರಡುವ ಬೀತಿ ಇದೆ. ಡೆಂ àಗೆ ಸೂಕ್ತ ಚಿಕಿತ್ಸೆ ದೊರಕದಿರುವ ಈ ಪರಿಸ್ಥಿತಿಯಲ್ಲಿ ತಾಲೂಕಿನಲ್ಲಿ ಸಾವುಗಳು ಉಂಟಾಗಿವೆ. ತಾಲೂಕಿನ ಆರೋಗ್ಯ ಇಲಾಖೆ ರೋಗ ಯಡೆಯುವಲ್ಲಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ದೂರಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಕೊರಲೆಹೊಸಳ್ಳಿ ಗ್ರಾಮದ ದೇವಮ್ಮರಾಜು ದಂಪತಿಗಳ ಪುತ್ರಿ ನಯನಾ ಎಂಬ ವಿದ್ಯಾರ್ಥಿನಿಗೆ ಡಿಪ್ಲಮೋ ವಿದ್ಯಾಭ್ಯಾಸಕ್ಕಾಗಿ ಮಂಜುನಾಥ್ ಧನಸಾಹಯ ನೀಡಿದರು. ಈ ವೇಳೆ ಮುಖಂಡರಾದ ರಾಮೇಗೌಡ , ಜಯಣ್ಣ, ಮಹದೇವ್, ತೇಜಸ್ವಿದಾಸ್, ಮಾಯಿಗೌಡ, ನಾಗೇಶ್, ರಾಜೇಗೌಡ, ಸೋಮಶೇಖರ್, ಮಾದಪ್ಪ, ಮಣಿ, ರಾಮು, ಸೇರಿದಂತೆ ಮತ್ತಿತರರು ಹಾಜರಿದ್ದರು.