Advertisement

ಕಲಾಮಂದಿರದಲ್ಲಿ ಗೋಮಾಂಸ ಸೇವನೆ: ಜಿಲ್ಲಾಡಳಿತ ನೋಟಿಸ್‌

03:45 AM Jun 27, 2017 | |

ಮೈಸೂರು: ನಗರದ ಕಲಾ ಮಂದಿರದ ಮನೆಯಂಗಳದಲ್ಲಿ ಚಾರ್ವಾಕ ಸೋಶಿಯಲ್‌ ಆ್ಯಂಡ್‌ ಕಲ್ಚರಲ್‌ ಟ್ರಸ್ಟ್‌, ಎವಿಎಸ್‌ಎಸ್‌ ಸಂಸ್ಥೆ ವತಿಯಿಂದ ಭಾನುವಾರ ಆಯೋಜಿಸಿದ್ದ “ಆಹಾರದ ಹಕ್ಕು-ವ್ಯಕ್ತಿ ಸ್ವಾತಂತ್ರ್ಯ ವಿಷಯ 
ಸಂವಾದವನ್ನು ಗೋಮಾಂಸ ಸೇವಿಸಿ ಉದ್ಘಾಟಿಸಿದ್ದಲ್ಲದೇ, ಸಭಿಕರಿಗೂ ವಿತರಿಸಿರುವುದು ತೀವ್ರ ವಿವಾದಕ್ಕೀಡಾಗಿದೆ.

Advertisement

ಸಾಹಿತಿ ಕೆ.ಎಸ್‌.ಭಗವಾನ್‌, ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ. ಮಹೇಶಚಂದ್ರ ಗುರು, ಮಾಜಿ ಮೇಯರ್‌ ಪುರುಷೋತ್ತಮ್‌, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌.ಶಿವರಾಮ್‌ ಇನ್ನಿತರರು ಕನ್ನಡ ಮತ್ತು
ಸಂಸ್ಕೃತಿ ಇಲಾಖೆಗೆ ಸಂಬಂಧಿಸಿದ ನಗರದ ಕಲಾಮಂದಿರದಲ್ಲಿ ಗೋಮಾಂಸ ಸೇವನೆ ಮಾಡಿದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆಯೋಜಕರು ಹಾಗೂ ಸಭಾಂಗಣದ ಉಸ್ತುವಾರಿಗಳಿಗೆ ಜಿಲ್ಲಾಡಳಿತ ನೋಟಿಸ್‌ ಜಾರಿ ಮಾಡಿದೆ.

“ಸರ್ಕಾರದ ಯಾವುದೇ ಸಭಾಂಗಣದಲ್ಲಿ ಮಾಂಸಾಹಾರ ಸೇವನೆಗೆ ಅವಕಾಶವಿಲ್ಲ. ಆದ್ದರಿಂದ ಕಲಾಮಂದಿರದ ಮನೆಯಂಗಳದಲ್ಲಿ ಗೋಮಾಂಸ ಸೇವನೆ ಕಾನೂನು ಉಲ್ಲಂಘನೆಯಾಗಿದೆ’ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್‌
ತಿಳಿಸಿದ್ದಾರೆ.

ಸಂಘಟನೆ ಕಪ್ಪು ಪಟ್ಟಿಗೆ: ಚಾರ್ವಾಕ
ಸಂಸ್ಥೆಯವರು 3 ದಿನಗಳ ಕಾರ್ಯ ಕ್ರಮಕ್ಕಾಗಿ ಆನ್‌ಲೈನ್‌ ಮೂಲಕ ಮನೆಯಂಗಳ ಸಭಾಂಗಣವನ್ನು ಬಾಡಿಗೆಗೆ ಪಡೆದಿದ್ದರು. ಕೊನೇ ದಿನ ಗೋಮಾಂಸ ಸೇವಿಸಿದ್ದಾರೆ. ಇದು ಕಾನೂನು ಉಲ್ಲಂಘನೆಯಾಗಿದೆ. ಕಾರ್ಯಕ್ರಮ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಸಂಬಂಧಪಟ್ಟ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕ ೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ತಿಳಿಸಿದ್ದಾರೆ.

ಗಂಜಲ ಸಿಂಪಡಿಸಿ ಸ್ವತ್ಛಗೊಳಿಸಿದರು
ಕಲಾಮಂದಿರದ ಮನೆಯಂಗಳದಲ್ಲಿ ಗೋಮಾಂಸ ಸೇವನೆ ಖಂಡಿಸಿರುವ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು, ಸೋಮವಾರ ಕಲಾಮಂದಿರದ ಮುಖ್ಯದ್ವಾರ, ಮನೆಯಂಗಳ ಸಭಾಂಗಣಕ್ಕೆ ಗೋಮೂತ್ರವನ್ನು ಮಾವಿನ ಸೊಪ್ಪಿನಿಂದ ಪ್ರೋಕ್ಷಣೆ ಮಾಡಿ ಸ್ವತ್ಛಗೊಳಿಸಿದರು. ಸರ್ಕಾರಿ ಸಭಾಂಗಣದಲ್ಲಿ ಗೋಮಾಂಸ, ಮಾಂಸಾಹಾರ ಸೇವನೆಗೆ ಅವಕಾಶ ನೀಡಿದ್ದನ್ನು ಖಂಡಿಸಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ಜೊತೆ ವಾಗ್ವಾದ ನಡೆಸಿದರು. ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

Advertisement

ಗೋಮಾಂಸ, ಕುರಿ ಮಾಂಸ ಎಲ್ಲಾ ಒಂದೇ. ಸಂಸತ್‌ ಭವನ ಹಾಗೂ ವಿಧಾನಸೌಧದ ಔತಣಕೂಟದಲ್ಲಿ ಮಾಂಸ ಸೇವನೆ ತಪ್ಪಲ್ಲ ಎಂದಾದರೆ ಕಲಾಮಂದಿರದಲ್ಲಿ ನಾವು ತಿಂದಿದ್ದರಲ್ಲೂ ತಪ್ಪಿಲ್ಲ. ಸಂವಿಧಾನದಲ್ಲಿ ಗೋಮಾಂಸವನ್ನು ನಿಷೇಧಿಸಿಲ್ಲ.ನಮ್ಮ ನಡೆಗೆ ಬದಟಛಿರಾಗಿದ್ದೇವೆ.
ಪ್ರೊ.ಕೆ.ಎಸ್‌.ಭಗವಾನ್‌

ಗೋಮಾಂಸ ಸೇವನೆಯನ್ನು ಸಂವಿಧಾನದಲ್ಲಿ ನಿಷೇಧಿಸಿಲ್ಲ. ಆದ್ದರಿಂದ ಗೋ ಮಾಂಸ ತಿಂದಿದ್ದು ಸರಿ. ನಿಷೇಧವಿದ್ದರೂ ಸೇವಿಸಲು ನಾವೇನು ಪೆದ್ದರೇ? ನಾವು ಗೋಮಾಂಸ ತಿಂದರೆ ನಿಮ್ಮ ಮಾನ ಮಾರ್ಯಾದೆಗೆ ಸಮಸ್ಯೆಯೇ? 
– ಪ್ರೊ. ಮಹೇಶ್‌ ಚಂದ್ರಗುರು,
ಮೈಸೂರು ವಿವಿ ಪ್ರಾಧ್ಯಾಪಕ

Advertisement

Udayavani is now on Telegram. Click here to join our channel and stay updated with the latest news.

Next