Advertisement

ಬೀಡಿ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿ: ವಿ.ಎಸ್‌. ಬೇರಿಂಜ

10:17 AM Jun 13, 2018 | Team Udayavani |

ಮಹಾನಗರ : ಬೀಡಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಬೀಡಿ ಕಟ್ಟಿದ ಮಜೂರಿ ಕೂಡ ಸಮರ್ಪಕವಾಗಿ ಸಿಗುತ್ತಿಲ್ಲ. ಸರಿಯಾದ ಕಾನೂನು ಜಾರಿ ಮಾಡಬೇಕಾದ ಕಾರ್ಮಿಕ ಇಲಾಖೆ ಮೌನವಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಈಗಾಗಲೇ ಸಭೆ ನಡೆದಿದೆ. ಈ ಸಭೆ ಯಲ್ಲಿದ್ದ ಬೀಡಿ ಮಾಲಕರು ನಮ್ಮ
ಬೇಡಿಕೆ ಈಡೇರಿಕೆಗೆ ಒಪ್ಪಿದ್ದಾರೆ. ಆದರೆ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ವಿಳಂಬ ನೀತಿ ತೋರುತ್ತಿದ್ದಾರೆ ಎಂದು ಎಸ್‌.ಕೆ. ಬೀಡಿ ವರ್ಕರ್ ಫೆಡರೇಶನ್‌ (ಎಐಟಿ ಯುಸಿ) ಪ್ರಧಾನ ಕಾರ್ಯದರ್ಶಿ ವಿ.ಎಸ್‌. ಬೇರಿಂಜ ಹೇಳಿದರು.

Advertisement

ಬೀಡಿ ಕಾರ್ಮಿಕರ ವಿವಿಧ ಬೇಡಿಕೆಯ ಈಡೇರಿಕೆಗೆ ಆಗ್ರಹಿಸಿ ಎಸ್‌.ಕೆ. ಬೀಡಿ ವರ್ಕರ್ ಫೆಡರೇಶನ್‌ (ಎಐಟಿಯುಸಿ) ನೇತೃತ್ವದಲ್ಲಿ ನಗರದ ಪಿವಿಎಸ್‌ ವೃತ್ತದಿಂದ ಕಾರ್ಮಿಕ ಆಯುಕ್ತರ ಕಚೇರಿಯವರೆಗೆ ಮಂಗಳವಾರ ನಡೆದ ಬೀಡಿ ಕಾರ್ಮಿಕರ ಪ್ರತಿಭಟನೆ ಪ್ರದರ್ಶನದಲ್ಲಿ ಅವರು ಮಾತನಾಡಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್‌, ಎಸ್‌.ಕೆ. ಬೀಡಿ ವರ್ಕರ್ ಫೆಡರೇಶನ್‌ ಸುರೇಶ್‌ ಕುಮಾರ್‌ ಬಂಟ್ವಾಳ್‌, ಎಂ. ಕರುಣಾಕರ ಭಾಗವಹಿಸಿದ್ದರು.

ತುಟ್ಟಿ ಭತ್ತೆಗೆ ಒತ್ತಾಯ
ಎಸ್‌.ಕೆ. ಬೀಡಿ ವರ್ಕರ್ ಫೆಡರೇಶನ್‌ (ಎಐಟಿಯುಸಿ) ಪ್ರಧಾನ ಕಾರ್ಯದರ್ಶಿ ವಿ.ಎಸ್‌. ಬೇರಿಂಜ ಮಾತನಾಡಿ, 2018 ಎಪ್ರಿಲ್‌ನಿಂದಲೇ 210 ರೂ. ಕನಿಷ್ಠ ಕೂಲಿ ಮತ್ತು 10.52 ರೂ. ತುಟ್ಟಿ ಭತ್ತೆ ಜಾರಿ ಮತ್ತು 2015ರಿಂದ 2018ರ ವರೆಗಿನ 12.75 ರೂ. ಬಾಕಿ ತುಟ್ಟಿ ಭತ್ತೆಯನ್ನು ಶೀಘ್ರ ಪಾವತಿ ಮಾಡಲು ಸರಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next