Advertisement

ಬೀಡಾಡಿ ಗೋವು ದತ್ತು ಪಡೆದರೆ ಸಮ್ಮಾನ

12:50 AM Jan 15, 2019 | Team Udayavani |

ಜೈಪುರ: ರಾಜಸ್ಥಾನದಲ್ಲಿ ಬೀಡಾಡಿ ಜಾನುವಾರುಗಳ ಸಂಖ್ಯೆ ವಿಪರೀತವಾಗಿದ್ದು, ಬೀಡಾಡಿ ಗೋವುಗಳನ್ನು ದತ್ತು ತೆಗೆದು ಕೊಳ್ಳುವವರನ್ನು ಆಗಸ್ಟ್‌ 15, ಜನವರಿ 26ರಂದು ಸಮ್ಮಾನಿಸಲಾಗುತ್ತದೆ ಎಂದು ರಾಜಸ್ಥಾನ ಸರಕಾರ ಹೇಳಿದೆ.

Advertisement

ಜಾನುವಾರುಗಳನ್ನು ದತ್ತು ತೆಗೆದು ಕೊಳ್ಳುವ ನಿಟ್ಟಿನಲ್ಲಿ ಎನ್‌ಜಿಒಗಳು, ದಾನಿಗಳು, ಸಾಮಾಜಿಕ ಕಾರ್ಯ ಕರ್ತರನ್ನು ಉತ್ತೇಜಿಸುವಂತೆ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಗೋಪಾಲನಾ ನಿರ್ದೇಶನಾಲಯ ನೋಟಿಸ್‌ ನೀಡಿದೆ. 

“ಹಿಂದಿನ ಬಿಜೆಪಿ ಸರಕಾರ ಜಾನುವಾರುಗಳ ವಿಷಯ ಹಿಡಿದು ದ್ವೇಷ ರಾಜಕಾರಣ ಮಾಡಿತು. ನಮ್ಮ ಸರಕಾರ ಎಲ್ಲರನ್ನೂ ಒಗ್ಗೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ’ ಎಂದು ರಾಜಸ್ಥಾನ ಉಪ ಮುಖ್ಯ ಮಂತ್ರಿ ಸಚಿನ್‌ ಪೈಲಟ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next