Advertisement

ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸಿದ ಪುದುಚೇರಿ ರಾಜ್ಯಪಾಲೆ ಬೇಡಿ

12:09 PM Jan 13, 2018 | udayavani editorial |

ಪುದುಚೇರಿ : ಸರಕಾರದ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವ ಕ್ರಮದ ಅಂಗವಾಗಿ ಪುದುಚೇರಿ ರಾಜ್ಯಪಾಲೆಯಾಗಿರುವ ಕಿರಣ್‌ ಬೇಡಿ ಇಂದು ಶನಿವಾರ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸಿ ನೆರೆಯ ತಮಿಳು ನಾಡಿನ ಜಿಲ್ಲೆಗೆ ತೆರಳಿ ಅಲ್ಲಿ ಎನ್‌ಜಿಓಗಳು ಪರಿಸರ ಸಂರಕ್ಷಣೆ ಸಂಬಂಧ ನಡೆಸುತ್ತಿರುವ ಫಾರ್ಮ್ ಪ್ರಾಜೆಕ್ಟ್ ವೀಕ್ಷಿಸಿದರು. 

Advertisement

2016ರ ಮೇ ತಿಂಗಳಲ್ಲಿ  ಪುದುಚೇರಿಯ ಲೆ| ಗವರ್ನರ್‌ ಆಗಿ ಅಧಿಕಾರ ಸ್ವೀಕರಿಸಿದಂದಿನಿಂದ ಪ್ರತೀ ವಾರಾಂತ್ಯ ಕಿರಣ್‌ ಬೇಡಿ ಅವರು ಪುದುಚೇರಿಯ ಮೂಲೆ ಮೂಲೆಗೆ ಭೇಟಿ ನೀಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. 

ಬೇಡಿ ಅವರಿಂದು ಭೇಟಿ ನೀಡಿದ್ದು ತಮಿಳು ನಾಡಿನ ವಿಳ್ಳುಪುರ ಜಿಲ್ಲೆಯ ತಳುತ್ತಳಿ ಎಂಮ ಗ್ರಾಮದಲ್ಲಿ ಸೃಷ್ಟಿ ಎನ್‌ಜಿಓ ನಡೆಸುತ್ತಿರುವ ಪರಿಸರ ರಕ್ಷಣೆ ಪ್ರಾಜೆಕ್ಟ್ ತಾಣಕ್ಕೆ. ಬೇಡಿ ಅವರ ಜತೆಗೆ 20 ಸದಸ್ಯರ ತಂಡವಿದ್ದು ಅದರಲ್ಲಿ ರಾಜ್‌ ನಿವಾಸದ ಅಧಿಕಾರಿಗಳು, ಬಿಡಿಓ, ಮುನಿಸಿಪಲ್‌ ಕಮಿಷನರರು ಮತ್ತು ಗ್ರಾಮ ಮಟ್ಟದ ಕಾರ್ಯಕರ್ತರು ಮತ್ತು ಓರ್ವ ಐಎಎಸ್‌ ಅಧಿಕಾರಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next