ಕುದೂರು: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯವನ್ನು ಗರಿಷ್ಟ ಮಟ್ಟದಲ್ಲಿ ಕಲ್ಪಿಸುವಂತೆ ಮಾಡಿ, ಮಾದರಿ ಪಂಚಾಯತಿಯಾಗಿಸುವುದೇ ನನ್ನ ಗುರಿ ಎಂದು ಮೋಟಗೊಂಡನಹಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆ ಎಂ.ಎನ್.ಮಂಜುಳ ಕುಮಾರ್ ಹೇಳಿದರು.
ಸೋಲೂರು ಹೋಬಳಿಯ ಮೋಟಾಗನಹಳ್ಳಿ ಗ್ರಾಮ ಪಂಚಾಯತಿ ಮುಂದಿನ ಅವಧಿಗೆ ಬಿಸಿಎಂ ಎ ಮೀಸಲಾತಿಯಿಂದ ಅವಿರೋಧವಾಗಿ ಆಯ್ಕೆಯಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಓಟ್ಟು 17 ಸದಸ್ಯ ಬಲವಿರುವ ಪಂಚಾಯತಿಯಲ್ಲಿ ಕಮಲಮ್ಮ ಪರಮೇಶ ಮೊದಲ ಅವಧಿಯಲ್ಲಿ ಅಧ್ಯಕ್ಷೆಯಾಗಿದ್ದರು, ಇದೀಗ ಎರಡನೇ ಅವಧಿಗೆ ನನ್ನನ್ನು ಅವಿರೋಧವಾಗಿ ಆಯ್ಕೆಮಾಡಿದ್ದಾರೆ, ವಿಧಾನ ಪರಿಷತ್ ನ ನೂತನ ಸದಸ್ಯರಾದ ಎಸ್.ರವಿಯವರು ಸೋಲೂರು ಹೋಬಳಿಗೆ 5 ಕೋಟಿ ಅನುದಾನ ನೀಡುವ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು, ನಮ್ಮ ಮೋಟಗಾನಹಳ್ಳಿಗೆ ಈ ಅನುದಾನದಲ್ಲಿ ಒಂದು ಕೋಟಿ ದೊರೆಯಲಿದೆ ಎಂಬುದು ಸಂತಸ ತಂದಿದೆ, ಎಲ್ಲಾ ಸದಸ್ಯರ ಮತ್ತು ಅಧಿಕಾರಿಗಳ ಸಹಕಾರದಿಂದ ಉತ್ತಮ ಆಡಳಿತ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕಾವ್ಯ ವರದರಾಜು, ಸದಸ್ಯರಾದ ಮೃತ್ಯಂಜಯ, ಶಾರದ, ಎಂ.ಆರ್.ಶಿವಕುಮಾರ್, ಚಿತ್ರಾ, ಪದ್ಮಾವತಿ , ಆಂಜಿನಪ್ಪ, ಎಂ.ಆರ್.ರತ್ನಮ್ಮ, ಜಗದೀಶ್, ಕಾಂತಮ್ಮ, ಎಂ.ಭಾಗ್ಯವತಿ, ಕುಮಾರಸ್ವಾಮಿ.ಬಿ.ಸಿ.ಶುಭ ಕೋರಿದರು.
ಇದನ್ನೂ ಓದಿ : ಒಬ್ಬ ಅಧಿಕಾರಿಯನ್ನು ಎಲ್ಲರೂ ಹೊಗಳುತ್ತಾರೆ ಎಂದರೆ ಅವರು ಸರಿಯಿಲ್ಲ ಎಂದೇ ಅರ್ಥ : ಗೃಹ ಸಚಿವ