Advertisement

ನಾನು ನಗಲು ಚಿರು ಕಾರಣ

09:46 AM Jul 10, 2020 | Lakshmi GovindaRaj |

ನಟ ಚಿರಂಜೀವಿ ಸರ್ಜಾ ದೂರವಾಗಿ ಒಂದು ತಿಂಗಳು ಕಳೆದಿದೆ. ಅವರ ಕುಟುಂಬ ವರ್ಗ ಪ್ರತಿ ನಿತ್ಯವೂ ಚಿರು ನೆನಪಿಸಿಕೊಳ್ಳುತ್ತಲೇ ಇದೆ. ಅತ್ತ ಮೇಘನಾರಾಜ್‌ ಅವರು ಕೂಡ ಪ್ರೀತಿಯ ಪತಿ ದೂರವಾಗಿದ್ದರೂ, ಭಾವುಕತೆ ತುಂಬಿದ್ದರೂ,  ಅವರು ಮಾತ್ರ, ನಗು ಹಂಚುವ ಕೆಲಸದಲ್ಲಿ ನಿರತರಾಗಿದ್ದಾರೆ. ಅದಕ್ಕೆ ಕಾರಣ, ಚಿರಂಜೀವಿ ಸರ್ಜಾ. ಹೌದು, ಸದಾ ನಗುತ್ತಿರಬೇಕು ಎನ್ನುತ್ತಲೇ ಇದ್ದ ಚಿರು ಅವರಿಗೆ ನಾವು ನಗುವಿನಿಂದ ಇದ್ದರೆ ಮಾತ್ರ ನಾವೆಲ್ಲರೂ ಅವರಿಗೆ ಕೊಡುವ  ಗೌರವ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

ಇತ್ತೀಚೆಗೆ ಮೇಘನಾ ನೋವಿನಲ್ಲೂ ನಗು ಹೊರ ಹಾಕಿದ್ದಾರೆ. ಭಾವುಕತೆಯಲ್ಲೂ ಅವರು ಒಂದು ಮನಮುಟ್ಟುವಂತಹ ಬರಹ ಹಂಚಿಕೊಂಡಿದ್ದಾರೆ. ಅವರು ತಮ್ಮ ಇನ್ಸ್‌ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸಾಲುಗಳಿವು. ನಾನು ನಗಲು ಚಿರು ಕಾರಣ: ನನ್ನ ಪ್ರೀತಿಯ ಚಿರು.. ಚಿರು ಒಂದು ಸಂಭ್ರಮ. ಯಾವಾಗಲೂ.. ಈಗಲೂ ಮತ್ತು ಮುಂದೆಯೂ.. ಬೇರೆ ಯಾವ ರೀತಿಯನ್ನೂ ನೀನು ಇಷ್ಟಪಡುವುದಿಲ್ಲ ಎಂದು ನನಗೆ ತಿಳಿದಿದೆ. ನಾನು ನಗಲು ಕಾರಣ ಚಿರು.. ಆತ ನನಗೆ  ನೀಡಿರುವುದು ಅತಿ ಅಮೂಲ್ಯ. ನನ್ನ ಕುಟುಂಬ ನಾವು ಮಾತ್ರವೇ.. ನಮ್ಮ ಶಾಶ್ವತ ಪ್ರೀತಿಗಾಗಿ ಎಲ್ಲರೂ ಎಂದಿಗೂ ಜತೆಯಾಗಿರುತ್ತೇವೆ.

ನೀನು ಇಷ್ಟಪಟ್ಟಂತೆಯೇ ಪ್ರತಿದಿನವೂ ಇರಲಿದೆ.  ಪ್ರೀತಿ, ನಗು, ತಮಾಷೆ, ಪ್ರಾಮಾಣಿಕತೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಜತೆಯಾಗಿರುವಿಕೆಯಿಂದ ಕೂಡಿರುತ್ತದೆ. ಲವ್‌ ಯೂ ಬೇಬಿ ಮಾ… ಹೀಗೆ ಭಾವನಾತ್ಮಕ ಸಂಗತಿಗಳನ್ನು ಬರೆದುಕೊಂಡು ಪೋಸ್ಟ್‌ ಮಾಡಿದ್ದಾರೆ ಮೇಘನರಾಜ್.‌  ಇವೆಲ್ಲದರ ಜೊತೆಯಲ್ಲಿ ಮೈ ಮಿಸ್ಟರ್‌ ಹಸ್ಬೆಂಡ್‌ ಎಂದು ಹೂವಿನ ಅಲಂಕಾರ ನಡುವೆ ಚಿರಿ ನಗುತ್ತಿರುವ ಪೋಟೋವನ್ನು ಪೋಸ್ಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next