ಹೈದರಾಬಾದ್: ಕನ್ನಡದ ಕುವರಿ, ಶ್ರೀಲೀಲಾ (Actress Sreeleela) ಬಹುಭಾಷಾ ಬೆಡಗಿಯಾಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ತೆಲುಗು ಸಿನಿಮಾವಲಯದಲ್ಲಿ ಶ್ರೀಲೀಲಾ ಅವರಿಗೆ ಹೆಚ್ಚಿನ ಅಭಿಮಾನಿಗಳಿದ್ದಾರೆ.
ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರುವ ʼಕಿಸ್ʼ ಬೆಡಗಿಯ ವೈಯಕ್ತಿಕ ಜೀವನದ ಕುರಿತ ಸುದ್ದಿಯೊಂದು ಹರಿದಾಡಿದೆ. ತೆಲುಗು ನಟರೊಬ್ಬರ ಜತೆ ಶ್ರೀಲೀಲಾ ಸೀಕ್ರೆಟ್ ಆಗಿ ಡೇಟಿಂಗ್ ನಲ್ಲಿದ್ದಾರೆ ಎನ್ನಲಾಗುತ್ತಿದೆ.
ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಕುಟುಂಬದವರಾದ ನಟ ಪಂಜಾ ವೈಷ್ಣವ್ ತೇಜ್ (ಸಾಯಿ ಧರಂ ತೇಜ್ ಕಿರಿಯ ಸಹೋದರ) ಅವರ ಜತೆ ಶ್ರೀಲೀಲಾ ರಿಲೇಷನ್ ಶಿಪ್ ನಲ್ಲಿದ್ದಾರೆ ಎನ್ನುವ ಮಾತುಗಳು ಟಾಲವುಡ್ ವಲಯದಲ್ಲಿ ಹರಿದಾಡಿದೆ.
ಶ್ರೀಲೀಲಾ ಹಾಗೂ ವೈಷ್ಣವ್ (Vaishnav Tej) ಜತೆ ʼಆದಿಕೇಶವʼ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಸಂದರ್ಭದಲ್ಲಿ ಇಬ್ಬರು ಆತ್ಮೀಯರಾಗಿದ್ದರು. ಅಂದಿನಿಂದ ಇಬ್ಬರು ಸೀಕ್ರೆಟ್ ಆಗಿ ತಮ್ಮ ಸಂಬಂಧವನ್ನು ಮುಂದುವರೆಸಿದ್ದಾರೆ ಎಂದು ವರದಿಯಾಗಿದೆ.
ಇಬ್ಬರ ಕುಟುಂಬಗಳು ಈ ಸಂಬಂಧಕ್ಕೆ ಒಪ್ಪಿಗೆ ನೀಡಿವೆ ಎನ್ನಲಾಗಿದೆ. ದೀಪಾವಳಿ ಹಬ್ಬಕ್ಕೆ ವೈಷ್ಣವ್ ತೇಜ್ ಶ್ರೀಲೀಲಾ ಅವರಿಗೆ ವಿಶೇಷ ಉಡುಗೊರೆಯನ್ನು ಕಳುಹಿಸಿದ್ದಾರೆ. ವೈಷ್ಣವ್ ಸುಮಾರು 5 ಲಕ್ಷ ರೂಪಾಯಿ ಬೆಲೆಬಾಳುವ ವಜ್ರದ ನೆಕ್ಲೇಸ್ ನೀಡಿದ್ದಾರೆ ಎನ್ನಲಾಗಿದೆ.
ಸದ್ಯ ಈ ರಿಲೇಷನ್ ವಿಚಾರದ ಬಗ್ಗೆ ಶ್ರೀಲೀಲಾ , ವೈಷ್ಣವ್ ಇಬ್ಬರೂ ಕೂಡ ಬಹಿರಂಗವಾಗಿ ಎಲ್ಲೂ ಕೂಡ ಹೇಳಿಕೊಂಡಿಲ್ಲ.
ʼಪೆಲ್ಲಿ ಸನದ್ʼ ʼ ಸ್ಕಂದʼ, ʼಭಗವಂತ ಕೇಸರಿʼ, ʼಗುಂಟೂರು ಕರಂʼ, ʼಎಕ್ಸ್‌ಟ್ರಾ-ಆರ್ಡಿನರಿ ಮ್ಯಾನ್ʼ ಮುಂತಾದ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಮುಂದೆ ಪವನ್ ಕಲ್ಯಾಣ್ ಅವರ ‘ಉಸ್ತಾದ್ ಭಗತ್ ಸಿಂಗ್’ ಮತ್ತು ವಿಜಯ್ ದೇವರಕೊಂಡ ಅವರ ಹೊಸ ಚಿತ್ರದಲ್ಲಿ ಅವರು ನಟಿಸಲಿದ್ದಾರೆ.