Advertisement
ಸ್ಕ್ರಬ್ಓಟ್ಸ್ ಚರ್ಮಕ್ಕೆ ಮೃದುತ್ವವನ್ನು ನೀಡಿ ಮಲಿನವನ್ನು ತೊಲಗಿಸುತ್ತದೆ. ಒಂದು ಚಮಚ ಓಟ್ಸ್ ಮತ್ತು ಒಂದು ಚಮಚ ಸಕ್ಕರೆ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ ಮಿಶ್ರಣ ಮಾಡಿ ಈ ಮಿಶ್ರಣದಿಂದ ಮುಖಕ್ಕೆಲ್ಲಾ ಹಚ್ಚಿ ಪ್ಯಾಕ್ ಮಾಡಬೇಕು. 30 ನಿಮಿಷದ ನಂತರ ಬಿಸಿನೀರಿನಲ್ಲಿ ಮುಖವನ್ನು ಶುಭ್ರವಾಗಿ ತೊಳೆದುಬಿಡಬೇಕು.
ಓಟ್ಸ್, ಜೇನು, ಆಲಿವ್ ಎಣ್ಣೆ, ಮೊಸರು ಎಲ್ಲವನ್ನೂ ಸಮಪಾಲಿನಲ್ಲಿ ಬೆರೆಸಿ ಆ ಮಿಶ್ರಣವನ್ನು ಮುಖಕ್ಕೆ ಲೇಪಿಸಿ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ಶುಭ್ರವಾಗಿ ತೊಳೆಯಿರಿ. ಹೀಗೆ ಆಗಾಗ ಮಾಡುವುದರಿಂದ ಮುಖದ ಮೇಲಿರುವ ಸುಕ್ಕು ನಿವಾರಣೆಯಾಗುತ್ತದೆ. ಚೆನ್ನಾಗಿ ಕಳಿತ ಅರ್ಧ ಬಾಳೆಹಣ್ಣನ್ನು ಮೆತ್ತಗೆ ಮಾಡಿ ಅದಕ್ಕೆ ಎರಡು ಚಮಚ ಓಟ್ಸ್ , ಹಾಲು, ಕ್ರೀಮ್, ಚಿಟಿಕೆ ದಾಲಿcನ್ನಿ , ಚಕ್ಕೆ ಪುಡಿ ಎರಡು ಚಮಚ, ಗೋಧಿಹಿಟ್ಟು ಬೆರೆಸಿ ಪೇಸ್ಟಿನಂತೆ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 10 ನಿಮಿಷ ಬಿಡಿ. ನಂತರ ನೀರಿನಿಂದ ತೊಳೆಯಿರಿ. ತಾಜಾತನಕ್ಕೆ
ದೇಹವು ತಾಜಾ ಅನಿಸಲು ಅರ್ಧ ಕಪ್ ಓಟ್ಸ್ , ಕಾಲು ಕಪ್ ಹಾಲಿನಪುಡಿ, 2 ಚಮಚ ಜೇನನ್ನು ತೆಳುವಾದ ಬಟ್ಟೆಯಲ್ಲಿ ಸುತ್ತಿ ಸ್ನಾನ ಮಾಡುವ ನೀರಿನಲ್ಲಿ ಇದನ್ನು ಮುಳುಗಿಸಿ ಇಡಿ. ಅರ್ಧ ಗಂಟೆ ಬಿಟ್ಟು ತೆಗೆಯಿರಿ. ಮೂರು ಪದಾರ್ಥಗಳ ಸತ್ವವನ್ನು ಬೆರೆಸಿಕೊಂಡ ನೀರಿನಿಂದ ಸ್ನಾನ ಮಾಡಿ. ದೇಹವು ತಾಜಾ ಆಗಿ ಹಾಯಾಗಿ ಇರುತ್ತದೆ.
Related Articles
Advertisement
ಸುಮ, ಚಿಟ್ಪಾಡಿ ಉಡುಪಿ