Advertisement

ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಚಿವರಿಂದ ಬ್ಯೂಟಿ ಕ್ಲಾಸ್‌ 

06:50 AM Aug 12, 2018 | Team Udayavani |

ಮೈಸೂರು: ಇತ್ತೀಚೆಗೆ ಕಾಲೇಜು ಕಾರ್ಯಕ್ರಮದಲ್ಲಿ ಪ್ರೀತಿ ಪಾಠ ಮಾಡಿದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಶನಿವಾರ ವಿದ್ಯಾರ್ಥಿನಿಯರಿಗೆ ಸೌಂದರ್ಯದ ಪಾಠ ಮಾಡಿ ಗಮನ ಸೆಳೆದರು.  

Advertisement

ನಗರದ ಕಾಲೇಜೊಂದರಲ್ಲಿ ಶನಿವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹೆಣ್ಣು ಮಕ್ಕಳು ನೋಡಲು ಚೆಂದವಾಗಿದ್ದರೂ, ಹೆಚ್ಚಾಗಿ ಮೇಕಪ್‌ ಮೇಲೆ ಅವಲಂಬಿಸಿದ್ದಾರೆ. ಆದರೆ, ಮೇಕಪ್‌ಗ್ೂ ಮೊದಲು ಹೆಣ್ಣು ಮಕ್ಕಳು ಅರಿಶಿಣ, ಕುಂಕುಮ ಇಟ್ಟುಕೊಳ್ಳುತ್ತಿದ್ದರು. ಅದು ನೈರ್ಸಗಿಕವಾಗಿ ಚರ್ಮಕ್ಕೂ ಆರೋಗ್ಯವಾಗಿತ್ತು. ಈಗ ವಿವಿಧ ಬಗೆಯ ಮೇಕಪ್‌ ವಸ್ತುಗಳು ಬಂದಿದ್ದು, ನಿಮ್ಮ ಸೌಂದರ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೀರ. ಹೀಗಾಗಿ ಹೆಣ್ಣು ಮಕ್ಕಳು ನೈರ್ಸಗಿಕ ಸೌಂದರ್ಯದ ಬಗ್ಗೆ ಗಮನ ಹರಿಸಿ ಎಂದು ಸಲಹೆ ನೀಡಿದರು.

ಉಪನ್ಯಾಸಕರ ನೇಮಕ:
ರಾಜ್ಯದ ಬಹುತೇಕ ಕಾಲೇಜುಗಳಿಗೆ ಕಳೆದ ಹಲವು ವರ್ಷಗಳಿಂದ ಉಪನ್ಯಾಸಕರ ನೇಮಕವಾಗಿಲ್ಲ. ಇದರಿಂದಾಗಿ ಹಲವು ಉಪನ್ಯಾಸಕರು ತಮ್ಮ ವಿಷಯವನ್ನು ಹೊರತುಪಡಿಸಿ, ಇತರ ವಿಷಯಗಳ ಬೋಧನೆ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಉನ್ನತ ಶಿಕ್ಷಣ ಹೇಗೆ ಸಿಗುತ್ತದೆ?. ಹೀಗಾಗಿ, ಹಲವು ವರ್ಷಗಳಿಂದ ಖಾಲಿ ಇರುವ 10 ಸಾವಿರ ಉಪನ್ಯಾಸಕರ ಹುದ್ದೆಗಳ ಪೈಕಿ ಸದ್ಯ 4 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next