Advertisement
ಪೂರ್ಣಗೊಂಡ ಬಳಿಕ ಕುಕ್ಕುಂದೂರು ಗ್ರಾಮ ಪಂಚಾಯತ್‌ಗೆ ಹಸ್ತಾಂತರಗೊಂಡು ಅವರು ನಿರ್ವಹಿಸಲಿದ್ದಾರೆ. ಮುಂದಿನ 1 ವರ್ಷದೊಳಗೆ ಪಾರ್ಕ್ ನಿರ್ಮಾಣವಾಗಲಿದೆ. ಕಾರ್ಕಳಕ್ಕೆ ಸೌಭಾಗ್ಯ ಮಂಗಳೂರಿನ ಎಂಆರ್‌ಪಿಎಲ್ ಸಂಸ್ಥೆ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಿಗೆ ಯಂತ್ರೋಪಕರಣ, ಕಟ್ಟಡ, ಶೌಚಾಲಯ ಹೀಗೆ ಹತ್ತಾರು ಸಮಾಜಮುಖೀ ಕಾರ್ಯಗಳಿಗೆ ಸಿಎಸ್‌ಆರ್ ಫಂಡ್ ನಿಂದ ಅನುದಾನ ಒದಗಿಸುತ್ತಿದೆ. ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ವಿವಿಧ ಕಾರ್ಯಗಳಿಗೆ ಅನುದಾನ ನೀಡಿದ್ದು, ಸಣ್ಣಪುಟ್ಟ ಪಾರ್ಕ್ ನಿರ್ಮಾಣಕ್ಕೂ ಆರ್ಥಿಕ ನೆರವು ನೀಡುತ್ತ ಬಂದಿದೆ. ಆದರೆ ಇದೇ ಮೊದಲ ಬಾರಿಗೆ ಸಂಸ್ಥೆ ದೊಡ್ಡ ಮಟ್ಟದಲ್ಲಿ ಕಾರ್ಕಳ ಪಾರ್ಕ್‌ಗೆ ಹಣ ನೀಡುತ್ತಿದೆ.
Related Articles
Advertisement
ಕಾರ್ಕಳ ಪ್ರವಾಸೋದ್ಯಮವಾಗಿ ಅಭಿವೃದ್ಧಿ ಕಡೆಗೆ ಸಾಗುತ್ತಿದೆ. ಆನೆಕೆರೆಯಲ್ಲಿ ಈಗಾಗಲೇ ಪಾರ್ಕ್ ಇದ್ದರೂ ಅದು ಸಣ್ಣ ಪಾರ್ಕ್ ಆಗಿದೆ. ತಾ| ಕಚೇರಿ ಬಳಿ ನಿರ್ಮಾಣವಾಗುತ್ತಿರುವುದು ದೊಡ್ಡ ಪ್ರಮಾಣದ ಪಾರ್ಕ್ ಆಗಲಿ.
ಎಲ್ಲಿ ಪಾರ್ಕ್ ನಿರ್ಮಾಣ?
ಬೈಪಾಸ್ ರಸ್ತೆ ಹಾದುಹೋಗುವ ಸರ್ವಜ್ಞ ವೃತ್ತದ ಬಳಿಯಿರುವ ತಾ| ಕಚೇರಿ, ತಾ.ಪಂ ಕಚೇರಿ, ತೋಟಗಾರಿಕೆ, ಕೃಷಿ ಇಲಾಖೆ, ಹತ್ತಿರದಲ್ಲೆ ಡಿವೈಎಸ್ಪಿ, ಸರ್ಕಲ್, ನಗರ, ಗ್ರಾಮಾಂತರ ಠಾಣೆ, ಮೆಸ್ಕಾಂ ಸಹಿತ ಆಸುಪಾಸಿನಲ್ಲಿ ವಿವಿಧ ಇಲಾಖೆಗಳ ಕಚೇರಿಗಳಿವೆ. ಈ ಎಲ್ಲ ಕಚೇರಿಗಳಿರುವ ಸನಿಹದಲ್ಲೆ ಪಾರ್ಕ್ ನಿರ್ಮಾಣವಾಗುತ್ತಿದೆ. ಸರ್ವಜ್ಞ ವೃತ್ತದಿಂದ ತಾ| ಕಚೇರಿಗೆ ತೆರಳುವ ಮಾರ್ಗದ ಬದಿಯಿಂದ ಪ್ರವೇಶ ಬಾಗಿಲು ಇರಲಿದೆ. ಪಕ್ಕದಲ್ಲೆ ಕುಕ್ಕುಂದೂರು ಗ್ರಾ.ಪಂ. ಕೂಡ ಇದ್ದು ಹುಡ್ಕೊ ಕಾಲನಿಯಂತಹ ಜನವಸತಿ ಪ್ರದೇಶಗಳಿವೆ. ನಗರ ಮತ್ತು ಗ್ರಾಮೀಣ ಭಾಗದ ಗಡಿಭಾಗದಲ್ಲಿ ಪಾರ್ಕ್ ನಿರ್ಮಾಣವಾಗುತ್ತಿರುವುದರಿಂದ ಎಲ್ಲ ದೃಷ್ಟಿಯಿಂದಲೂ ಅನುಕೂಲವಾಗಲಿದೆ.
ದೊಡ್ಡ ಬಜೆಟ್‌ನಲ್ಲಿ ಪಾರ್ಕ್
ಎಂಆರ್‌ಪಿಎಲ್ ಸಂಸ್ಥೆಯು ತನ್ನ ಸಿಎಸ್‌ಆರ್ ಫಂಡ್ ಸಾಮಾಜಿಕ ಕಾರ್ಯದಲ್ಲಿ ಹಿಂದಿನಿಂದಲೂ ತೊಡಗಿಸಿಕೊಂಡು ನೆರವು ನೀಡುತ್ತ ಬಂದಿದೆ. ಸಣ್ಣ ಪುಟ್ಟ ಪಾರ್ಕ್ ನಿಮಾಣಕ್ಕೆ ಆರ್ಥಿಕ ನೆರವನ್ನು ಈ ಹಿಂದೆ ನೀಡಿದ್ದೆವು. ಆದರೆ ಇದೆ ಮೊದಲ ಬಾರಿಗೆ ಪಾರ್ಕ್ ನಿರ್ಮಾಣಕ್ಕೆಂದೇ ದೊಡ್ಡ ಮೊತ್ತವನ್ನು ಈ ಬಾರಿ ನೀಡುತ್ತಿದ್ದೇವೆ. -ಮಾಲತೇಶ್, ಜನರಲ್ ಮ್ಯಾನೇಜರ್, ಸಿಎಸ್‌ಆರ್ ಫಂಡ್ ವಿಭಾಗ, ಎಂಆರ್‌ಪಿಎಲ್, ಮಂಗಳೂರು