Advertisement

ಮಂಜಿನ ನಗರಿಯ ಸುಂದರ ನೆನಪು

03:38 PM Apr 19, 2018 | |

ಬೆಳಗ್ಗೆ 4 ಗಂಟೆ. ಮಂಗಳೂರು ವಿ.ವಿ. ಕ್ಯಾಂಪಸ್‌ನಿಂದ ಒಟ್ಟು 8 ಮಂದಿ ಸ್ನೇಹಿತರಿದ್ದ ನಮ್ಮ ತಂಡ ನಾಲ್ಕು ಬೈಕ್‌ಗಳಲ್ಲಿ ಕಾಸರಗೋಡು ರಸ್ತೆಯಾಗಿ ತಲಕಾವೇರಿಯತ್ತ ಹೊರಟಿತು. ರಸ್ತೆ ಹದಗೆಟ್ಟಿದ್ದರೂ ಪ್ರಕೃತಿಯ ಸೊಬಗಿನ ನಡುವೆ ಅದು ಗೊತ್ತಾಗಲಿಲ್ಲ. ದಾರಿ ಮಧ್ಯೆ ಜಲಪಾತದ ದರ್ಶನ ಪಡೆದು ಮುಂದುವರಿದೆವು.

Advertisement

ತಲಕಾವೇರಿ ತಲುಪಿದಾಗ ಗಂಟೆ 9.15 ಸೂಚಿ  ಸು ತ್ತಿ ತ್ತು. ಬೈಕ್‌ನಿಂದ ಇಳಿಯುತ್ತಿದ್ದಂತೆ ಮಂಜಿನ ಸ್ವಾಗತ. ದೇವರ ದರ್ಶನ ಮಾಡಿ, ದೇವಸ್ಥಾನಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ಹೊರಬಂದೆವು. ಅಲ್ಲಿಂದ ನೇರ ಮಡಿಕೇರಿಯತ್ತ ನಮ್ಮ ಪ್ರಯಾಣ. ಸರಿಸುಮಾರು ಸೂರ್ಯ ನಡುನೆತ್ತಿಗೆ ಬಂದಾಗ ನಾವು ಅಬ್ಬಿ ಜಲಪಾತ ತಲುಪಿದೆವು.

ಮಡಿಕೇರಿಯಿಂದ 8 ಕಿ.ಮೀ. ದೂರದಲ್ಲಿ ಕಾಫಿ ತೋಟದ ಮಧ್ಯೆ, ಕಾವೇರಿ ನದಿಯು ಕಪ್ಪು ಬಂಡೆಗಳ ಮೇಲೆ ಹರಡಿಕೊಂಡು, ಸುಮಾರು 50 ಅಡಿ ಎತ್ತರದಿಂದ ಧುಮ್ಮಿಕ್ಕಿ ಅಬ್ಬಿ ಜಲಪಾತದ ಸೌಂದರ್ಯ ನೋಡುವುದೇ ಕಣ್ಣಿಗೆ ಹಬ್ಬ. ಜಲಪಾತಕ್ಕೆ ಎದುರಾಗಿರುವ ತೂಗುಸೇತುವೆಯಲ್ಲಿ ನಿಂತು ಜಲಪಾತದ ಸೌಂದರ್ಯವನ್ನು ಸವಿಯಬಹುದು. ಹೆಚ್ಚಿನ ಪ್ರವಾಸಿಗರಿದ್ದುದರಿಂದ ಸಾಕಷ್ಟು ಹೊತ್ತು ಇಲ್ಲಿ ನಿಂತು ಸೆಲ್ಫಿಗಾಗಿ ತಡಕಾಡಬೇಕಾಯಿತು. ಸಾಕಷ್ಟು ಹೊತ್ತು ಇಲ್ಲಿ ಕಳೆದು ಮಡಿ ಕೇರಿಗೆ ಬಂದು ಊಟ ಮುಗಿಸಿ, ಮಡಿಕೇರಿಯ ಕೋಟೆಯತ್ತ ಹೊರ ಟೆವು. ನಾಲ್ಕೂ ಸುತ್ತಲೂ ಆವೃತವಾದ ಭದ್ರಕೋಟೆಯನ್ನು ವೀಕ್ಷಿಸಿ ಹೊರ ಬರು ತ್ತಿ ದ್ದಾಗ ಬಾನಂಚಿನಲ್ಲಿ ಅಸ್ತಮಿಸಲು ಕಾಯುತ್ತಿದ್ದ ಸೂರ್ಯನನ್ನು ನೋಡಿ ಬೇಗ ಬೇಗನೇ ರಾಜ್‌ ಸೀಟ್‌ನತ್ತ ಹೊರಟೆವು.

ಸುಂದರ ಉದ್ಯಾನವನ
ಹಸುರು ಉದ್ಯಾನವನ, ಸುತ್ತಲಿನ ಪರ್ವತ ಶ್ರೇಣಿ, ವಿಶಾಲವಾದ ಗದ್ದೆ, ಕಾಫಿ ತೋಟಗಳು ಕಣ್ಮನ ಸೂರೆಗೊಳಿಸುವಂತಿವೆ. ಹಿತವಾದ ತಂಗಾಳಿಗೆ ಮೈಯೊಡ್ಡಿ ಕುಳಿತರೆ ಏಳಲು ಮನಸ್ಸೇ ಬರುವುದಿಲ್ಲ. ರಾತ್ರಿ ಹೊತ್ತಿನ ವರ್ಣಮಯ ವಿದ್ಯುತ್‌ ಅಲಂಕಾರ ನೋಡು ವುದೇ ಚಂದ. ಪ್ರಕೃತಿಯ ರಸದೌತಣ ಸವಿಯುತ್ತಿದ್ದ ನಮ್ಮ ತಂಡಕ್ಕೆ ಸೂರ್ಯ ಮರೆಯಾಗಿ ಬಾನಂಗಳಕ್ಕೆ ಚಂದ್ರನ ಆಗಮನವಾದದ್ದು ತಿಳಿಯಲೇ ಇಲ್ಲ. ಹೀಗಾಗಿ ಅಲ್ಲಿಂದ ಬೇಗ ಬೇಗ ಹೊರಟು ಕುಶಾಲನಗರಕ್ಕೆ ಬಂದೆವು, ಮೊದಲೇ ಬುಕ್‌ ಮಾಡಿದ್ದ ಲಾಡ್ಜ್ನಲ್ಲಿ ರಾತ್ರಿ ವಿಶ್ರಾಂತಿ ಪಡೆದು ಮಾರನೇ ದಿನ ಬೆಳಗ್ಗೆ ಬೇಗ ನಮ್ಮ ಸವಾರಿ ಚಿಕ್ಲಿಹೊಳೆಯತ್ತ ಸಾಗಿತು.

ಹೊಳೆಯಲ್ಲಿ ಅಷ್ಟೊಂದು ನೀರು ಇರಲಿಲ್ಲ. ಹೀಗಾಗಿ ನೀರಲ್ಲಿ ಇಳಿದು ಕೈಕಾಲು ಮುಖ ತೊಳೆದು ಫ್ರೆಶ್‌ ಆಗಿ, ಒಂದು ಬದಿ ಹೊಳೆ ಇನ್ನೊಂದು ಬದಿ ಅರಣ್ಯದಿಂದ ಅವೃತವಾಗಿರುವ ಹಚ್ಚ ಹಸುರಿನ ಮರಗಳ ಸಾಲುಗಳನ್ನು ನೋಡುತ್ತಾ ಕುಳಿತೆವು. ಬೈಕ್‌ ಮೇಲೆ, ಡ್ಯಾಮ್‌ ಹತ್ತಿ ಫೋಟೋಶೂಟ್‌ಗಾಗಿ ಸಾಕಷ್ಟು ಸರ್ಕಸ್‌ ಮಾಡಿ ದೆವು. ಬಳಿಕ ಅಲ್ಲೇ ಹತ್ತಿರದಲ್ಲಿದ್ದ ಹೊಟೇಲ್‌ ನಲ್ಲಿ ಬೆಳಗ್ಗಿನ ತಿಂಡಿ ಮುಗಿಸಿ ನಮ್ಮ ತಂಡದ ಬೈಕ್‌ ದುಬಾರೆ ಆನೆ ಶಿಬಿರದತ್ತ ಮುಖಮಾಡಿತು.

Advertisement

ದುಬಾರೆಯಲ್ಲಿ ಫ‌ುಲ್‌ ಮಸ್ತಿ
ಮಡಿಕೇರಿಯಿಂದ ಕುಶಾಲನಗರಕ್ಕೆ ಸಾಗುವ ದಾರಿ ಮಧ್ಯೆ ಸಿಗುವ ನಂಜರಾಯಪಟ್ಟಣದಿಂದ ದುಬಾರೆ ಆನೆ ಶಿಬಿರಕ್ಕೆ 5 ಕಿ.ಮೀ. ದೂರ. ಬೆಳಗ್ಗೆ 8 ರಿಂದ 5.30ರ ವರೆಗೆ ಪ್ರವಾಸಿಗರಿ ಗಾಗಿ ತೆರೆದಿರುತ್ತದೆ. ಇಲ್ಲಿ ಹರಿದು ಹೋಗುವ ಸಣ್ಣ ಕಾವೇರಿ ನದಿಯ ಮತ್ತೂಂದು ತುದಿಯಲ್ಲಿದೆ ಆನೆ ಶಿಬಿರ. ಇಲ್ಲಿಗೆ ಬೋಟ್‌ ವ್ಯವಸ್ಥೆಯೂ ಇದೆ. ಹಾಗೇ ರಿವರ್‌ ರಾಫ್ಟಿಂಗ್‌, ಆನೆ ಸಫಾರಿ ಇಲಿನ ಪ್ರಮುಖ ಆಕರ್ಷಣೆ. ನಾವು ತಲುಪಿದಾಗ ಫ‌ುಲ್‌ ರಶ್‌ ಆಗಿತ್ತು. ಬೋಟಿಂಗ್‌ಗೆ ಟಿಕೆಟ್‌ ಮಾಡಲು ಸಾಕಷ್ಟು ಹೊತ್ತು ಕ್ಯೂನಲ್ಲಿ ನಿಲ್ಲಬೇಕಾಯಿತು.

ಟಿಕೆಟ್‌ ಪಡೆದು ಹೊಳೆ ದಾಟಿ ಆನೆ ಶಿಬಿರಕ್ಕೆ ತಲುಪಿದೆವು. ಮಧ್ಯಾಹ್ನವಾದ್ದ ರಿಂದ ನಾಲ್ಕೈದು ಆನೆಗಳು ಮಾತ್ರ ಕಾಣಸಿಕ್ಕಿದ್ದವು. ಉರಿ ಬಿಸಿಲಿಗೆ ಬಾಡಿದ ನಮ್ಮ ಮುಖ ಅಲ್ಲಿನ ಹೊಳೆಗೆ ಇಳಿದಾಗಲೇ ಅರಳಿದ್ದು. ಬಂಡೆಯಿಂದ ಹಾರಿ ನೀರಿಗೆ ಜಿಗಿತ, ಸ್ವಿಮ್ಮಿಂಗ್‌ ರೇಸ್‌, ಫ‌ೂಲ್‌ ಮಸ್ತಿ ಯಾರಿಗೂ ನೀರು ಬಿಟ್ಟು ಮೇಲೆ ಬರಲು ಮನಸ್ಸೇ ಬರಲಿಲ್ಲ. ಆದ್ರೆ ಇನ್ನು 2- 3 ಸ್ಥಳಕ್ಕೆ ಹೋಗಬೇಕಿದ್ದರಿಂದ ದುಬಾರೆಯಿಂದ ನಿರ್ಗಮನ ಅನಿವಾರ್ಯವಾಗಿತ್ತು.

ಗೋಲ್ಡನ್‌ ಟೆಂಪಲ್‌ನತ್ತ ಪಯಣ
ಅದಾಗಲೇ ಮಧ್ಯಾಹ್ನವಾದ್ದ ರಿಂದ ಹೊಟ್ಟೆ ತಾಳಹಾಕಲು ಶುರು ಮಾಡಿ ತ್ತು. ಹೊಟೇಲ್‌ ವೊಂದಕ್ಕೆ ನುಗ್ಗಿ ಊಟ ಮುಗಿಸಿ ಗೋಲ್ಡನ್‌ ಟೆಂಪ ಲ್‌ಗೆ ಬಂದೆ ವು. ಸಂಪೂರ್ಣ ಭಿನ್ನವಾದ ವಾತಾ ವರಣ. ಇಲ್ಲಿನ ಕಟ್ಟಡ ಶೈಲಿ, ವಿಗ್ರಹ, ಆಚಾರ-ವಿಚಾರ ಎಲ್ಲವೂ ಭಿನ್ನವಾಗಿತ್ತು, ನಾವೆಲ್ಲೋ ಟಿಬೆಟ್‌ನಂತಹ ಸ್ಥಳಕ್ಕೆ ಬಂದಿದ್ದೇವಾ ಎಂಬ ಅನುಮಾನ ಕಾಡತೊಡಗಿತು. ಅಲ್ಲಿನ ಸಂತರ ಜತೆ, ಮಂದಿರದ ಎದುರು ಫೋಟೋ ಕ್ಲಿಕ್ಕಿಸಿ ಮತ್ತೆ ಬೈಕ್‌ ಚಾಲು ಮಾಡಿ ಹೊರಟೆವು. ದಾರಿ ಮಧ್ಯೆ ಬೈಕ್‌ನ ಹೊಟ್ಟೆ ಯನ್ನೂ ಪೆಟ್ರೋಲ್‌  ನಿಂದ ತುಂಬಿಸಿದೆವು.

ಬಳಿಕ ನಾವು ಬಂದಿದ್ದು ಕಾವೇರಿ ನಿಸರ್ಗ ಧಾಮಕ್ಕೆ. 35 ಎಕರೆ ಸುಂದರ ಪರಿಸರದಲ್ಲಿರುವ ನಿಸರ್ಗ ಧಾಮದಲ್ಲಿ ಬಿದಿರಿನ ಮರಗಳ ಮೇಲೆ ಕಟ್ಟಿದ ಮನೆಗಳು, ಆನೆ ಸವಾರಿ, ಜಿಂಕೆ ವನ, ಕಾಡಿನಲ್ಲಿ ನಡಿಗೆ, ದೋಣಿ ವಿಹಾರ ಖುಷಿ ಕೊಡುತ್ತದೆ. ಸತತ ಎರಡು ದಿನದ ಬೈಕ್‌ ರೈಡ್‌ನಿಂದಾಗಿ ಸಹಜವಾಗಿಯೇ ಎಲ್ಲರಿಗೂ ದಣಿವಾಗಿತ್ತು. ಹೀಗಾಗಿ ಎಂಟ್ರಿ ಟಿಕೆಟ್‌ ಪಡೆದ ನಮ್ಮ ತಂಡ ನಿಸರ್ಗ ಧಾಮದಲ್ಲಿ ಒಂದು ರೌಂಡು ಹಾಕಿ ಸ್ವಲ್ಪ ವಿಶ್ರಾಂತಿ ಪಡೆಯಿತು.

ನಮ್ಮ ಪ್ರವಾಸದ ಕೊನೆಯ ಸ್ಥಳ ಹಾರಂಗಿ ಹಿನ್ನೀರು (ಡ್ಯಾಮ್‌) ಭೇಟಿ ಮಾತ್ರ ಬಾಕಿ ಇತ್ತು. ಅಲ್ಲಿಗೆ ತಲುಪಿದಾಗ ಸಂಜೆ 6ರ ಹೊತ್ತು. ಅತ್ಯಂತ ಸುಂದರ ಸ್ಥಳ. ಹಸುರು ಹಾಸಿನ ನೆಲ. ಮತ್ತೂಂದು ಭಾಗದಲ್ಲಿ ಹರಿಯುವ ಹಿನ್ನೀರು, ಸುತ್ತ ನೀಲಿ ಕೆಂಪು ಮಿಶ್ರಿತ ಬಾನು. ಫೋಟೋ ಶೂಟ್‌ಗೆ ಹೇಳಿಮಾಡಿಸಿದ ಸ್ಥಳ. ರಾತ್ರಿ 8ರವರೆಗೆ ಅಲ್ಲೇ ಬೀಡು ಬಿಟ್ಟು. ಕೊನೆಗೆ ಮಡಿಕೇರಿಗೆ ವಿದಾಯ ಹೇಳಿ ಸಂಪಾಜೆ ಘಾಟಿಯಾಗಿ ವಿ.ವಿ. ಕಡೆ ಬಂದಾಗ ಮಧ್ಯ ರಾತ್ರಿ ಕಳೆದಿತ್ತು.

ರೂಟ್‌ಮ್ಯಾಪ್‌
.ಮಂಗಳೂರು- ತಲಕಾವೇರಿ (148 ಕಿ.ಮೀ. ಕಾಸರಗೋಡು, ಮುಲಿಯಾರ್‌, ಪನತೂರ್‌ ಮಾರ್ಗವಾಗಿ), ತಲಕಾವೇರಿ- ಮಡಿಕೇರಿ 45 ಕಿ.ಮೀ., ಕುಶಾಲನಗರದಿಂದ ಚಿಕ್ಕಿಳಿಹೊಳೆ 15 ಕಿ.ಮೀ. ಇಲ್ಲಿಂದ ದುಬಾರೆಗೆ 5 ಕಿ.ಮೀ.

.ಹತ್ತಿರದಲ್ಲೇ ಇದೆ ರಾಜಾ ಸೀಟ್‌, ಗೋಲ್ಡನ್‌ ಟೆಂಪಲ್‌, ಕಾವೇರಿ ನಿಸರ್ಗ ಧಾಮ, ಹಾರಂಗಿ.

.ಊಟ, ವಸತಿಗೆ ತೊಂದರೆಯಿಲ್ಲ. ಪ್ರವಾಸಿ ತಾಣಗಳಿಗೆ ವಾಹನಗಳ ವ್ಯವಸ್ಥೆಯೂ ಸಾಕಷ್ಟಿದೆ. 

ಕಾರ್ತಿಕ್‌ ಚಿತ್ರಾಪುರ

Advertisement

Udayavani is now on Telegram. Click here to join our channel and stay updated with the latest news.

Next