Advertisement

ನಾಲ್ಕು ಭಾಷೆಗಳಲ್ಲಿ ಬ್ಯೂಟಿಫ‌ುಲ್‌ ಡೇಸ್‌

06:30 AM May 13, 2020 | Lakshmi GovindaRaj |

ಈ ಹಿಂದೆ ಕನ್ನಡದಲ್ಲಿ “ಕಮರೊಟ್ಟು ಚೆಕ್‌ಪೋಸ್ಟ್‌ ‘ ಚಿತ್ರ ನಿರ್ದೇಶಿಸಿದ್ದ ಪರಮೇಶ್‌ ಈಗ ಹೊಸ ಬಗೆಯ ಕಥೆ ಹೆಣೆದು ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಅಂದಹಾಗೆ, ಆ ಚಿತ್ರಕ್ಕೆ “ಬ್ಯೂಟಿಫ‌ುಲ್‌ ಡೇಸ್‌ ‘ ಎಂದು  ಹೆಸರಿಡಲಾಗಿದೆ. ಇದು ಕನ್ನಡ ಸೇರಿದಂತೆ ಹಿಂದಿ, ಮಲಯಾಳಂ, ತೆಲುಗು ಭಾಷೆಯಲ್ಲಿ ತಯಾರಾಗುತ್ತಿದೆ. ಇಷ್ಟೊತ್ತಿಗಾಗಲೇ ಚಿತ್ರಕ್ಕೆ ಚಾಲನೆ  ದೊರೆಯಬೇಕಿತ್ತು.

Advertisement

ಕೊರೊನಾ ಎಫೆಕ್ಟ್ನಿಂದಾಗಿ ಮುಂದಕ್ಕೆ ಹೋಗಿದೆ. ಇನ್ನು, ಈ ಚಿತ್ರಕ್ಕೆ ಉತ್ಪಲ್‌ ನಾಯಕ. ಈ ಹಿಂದೆ ಇವರು, “ಕಮರೊಟ್ಟು ಚೆಕ್‌ಪೋಸ್ಟ್‌ ‘ ಚಿತ್ರದಲ್ಲಿ ನಟಿಸಿದ್ದರು. ಅದೇ ಕಾಂಬಿನೇಷನ್‌ನಲ್ಲಿ ಈಗ “ಬ್ಯೂಟಿಫ‌ುಲ್‌ ಡೇಸ್‌’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೂಪ ಕ್ರಿಯೇಟಿವ್‌ ಆ್ಯಡ್ಸ್‌ ಬ್ಯಾನರ್‌ನಲ್ಲಿ ಕಾಂತರಾಜ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ತಮ್ಮ ಸಿನಿಮಾ ಬಗ್ಗೆ ಹೇಳುವ ನಿರ್ದೇಶಕ ಪರಮೇಶ್‌, ಇಂದು ಪ್ರತಿಯೊಬ್ಬರೂ ಅವರದೇ ಆದ ಕೆಲಸಗಳಲ್ಲಿ  ಬಿಝಿಯಾಗಿದ್ದಾರೆ. ತಮ್ಮ ಫ್ಯಾಮಿಲಿಗೂ ಟೈಮ್‌ ಕೊಡಲ್ಲ. ಹಾಗೊಂದು ವೇಳೆ ಹಿಂದಿರುಗಿ ನೋಡಿದಾಗ, ಫ್ಯಾಮಿಲಿಗೆ ಸಮಯ ಕೊಡದಿರುವ ಬಗ್ಗೆ ಬೇಸರ ಆಗುತ್ತೆ. ಆದರೆ, ಮೀರಿದ ಸಮಯದ ಬಗ್ಗೆ ಯೋಚಿಸುವುದಕ್ಕಿಂತ, ಮುಂದೆ  ಇನ್ನೂ ಇರುವ ಸಮಯದ ಬಗ್ಗೆಯೋಚಿಸಿ, ಪ್ರತಿ ದಿನ ಕೂಡ ಫ್ಯಾಮಿಲಿ ಜೊತೆ ಬ್ಯೂಟಿಫ‌ುಲ್‌ ಡೇಸ್‌ ಕಳೆಯಬಹುದು ಎಂಬ ಸಣ್ಣ ಸಂದೇಶ ಇಲ್ಲಿದೆ ಎನ್ನುತ್ತಾರೆ.

ಚಿತ್ರದಲ್ಲಿ ಲಕ್ಷ್ಮೀ ಅನಂತ್‌ನಾಗ್‌ ಜೋಡಿಯನ್ನು ಕಾಣಿಸುವ ಯೋಚನೆ ಇದೆ. ಆ ಬಗ್ಗೆ ಮಾತುಕತೆ ನಡೆಯುತ್ತಿದೆ. ಉತ್ಪಲ್‌ಗೆ ಅರ್ಜುನ್‌ ಸರ್ಜಾ ಅವರ ಪುತ್ರಿ ಐಶ್ವರ್ಯಾ ನಾಯಕಿಯಾಗುವ ಕುರಿತೂ ಚರ್ಚೆ ನಡೆಯುತ್ತಿದೆ. ಇನ್ನೊಂದು ಕಡೆ ಕಿಶೋರ್‌ ಹಾಗೂ ಅನುಪ್ರಭಾಕರ್‌ ಜೋಡಿಯನ್ನೂ ಚಿತ್ರಕ್ಕೆ ಕರೆತರುವ ಯೋಚನೆ ಇದೆ.

ಇದೊಂದು ತ್ರಿಕೋನ ಕಥೆ ಹೊಂದಿರುವ ಸಿನಿಮಾ. ಇಲ್ಲಿ ಕಥೆಯೇ ಹೀರೋ ಎಂಬುದು ನಿರ್ದೇಶಕ ಮಾತು. ಚಿತ್ರಕ್ಕೆ  ವಿಲಿಯಮ್ಸ್‌ ಛಾಯಾಗ್ರಹಣವಿದೆ. ಮುಕ್ತರಾಜು ಸಂಕಲನವಿದೆ. ಸದ್ಯಕ್ಕೆ ಸ್ಕ್ರಿಪ್ಟ್ ರೆಡಿಯಾಗಿದೆ. ಲಾಕ್‌ಡೌನ್‌ ಬಳಿಕ ಚಿತ್ರೀಕರಣಕ್ಕೆ ಹೊರಡಲಿದೆ ಚಿತ್ರತಂಡ.

Advertisement
Advertisement

Udayavani is now on Telegram. Click here to join our channel and stay updated with the latest news.

Next