Advertisement

ಸಮಗ್ರ ಕೃಷಿ ಲಾಭದಾಯಕ: ಡಿಸಿ

10:30 AM Oct 28, 2018 | Team Udayavani |

ಬ್ರಹ್ಮಾವರ: ರೈತರು ಒಂದೇ ಬೆಳೆಗೆ ಸೀಮಿತರಾಗದೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದರು.

Advertisement

ಅವರು ಶನಿವಾರ ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿ.ವಿ., ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರ, ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರ, ಡಿಪ್ಲೊಮಾ ಕೃಷಿ ಮಹಾ ವಿದ್ಯಾಲಯ ಬ್ರಹ್ಮಾವರ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆ, ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುತ್ತಿರುವ ಕೃಷಿ ಮೇಳ-2018 ಉದ್ಘಾಟಿಸಿ ಮಾತನಾಡಿದರು.

ರೈತರು ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು, ಆಧುನಿಕ ಕೃಷಿ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸಿ ಕೃಷಿ ನಡೆಸಿದರೆ ಖಂಡಿತವಾಗಿ ಲಾಭದಾಯಕವಾಗಲಿದೆ. ಕೃಷಿ ವಿ.ವಿ. ನೆರವು ಪಡೆದು ಕೃಷಿಯಲ್ಲಿ ತೊಡಗು
ವಂತೆ, ಸಮಸ್ಯೆಗಳಿದ್ದಲ್ಲಿ ಕೃಷಿ ವಿಜ್ಞಾನಿಗಳಿಂದ ಅಗತ್ಯ ಸಲಹೆ ಪಡೆಯುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು. ಕೃಷಿ ಸಂಶೋಧನೆಗಳನ್ನು ರೈತರಿಗೆ ತಲುಪಿಸುವಂತೆ ವಿಜ್ಞಾನಿಗಳಿಗೆ ಕರೆ ನೀಡಿದರು.

ವಿವಿಧ ವಸ್ತು ಪ್ರದರ್ಶನ ಮಳಿಗೆ ಹಾಗೂ ಪ್ರಾತ್ಯಕ್ಷಿಕೆ ತಾಕುಗಳನ್ನು ಅವರು ಉದ್ಘಾಟಿಸಿದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿ.ವಿ. ಕುಲಪತಿ ಡಾ| ಎಂ.ಕೆ. ನಾಯ್ಕ ಮಾತನಾಡಿ, ನಿರಂತರ ಆದಾಯ ನೀಡುವ ಉಪಬೆಳೆಗಳು ಕೃಷಿಗೆ ಪೂರಕ. ಕೃಷಿ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸಬೇಕು ಎಂದರು.

ಆದಾಯ ದ್ವಿಗುಣ
ತಂತ್ರಜ್ಞಾನ ಅಳವಡಿಕೆಯಿಂದ ಮಾತ್ರ ಆದಾಯ ದ್ವಿಗುಣಗೊಳ್ಳಲು ಸಾಧ್ಯ. ಕೃಷಿಯನ್ನು ಉದ್ದಿಮೆಯಾಗಿ ಸ್ವೀಕರಿಸಬೇಕು. ಯುವಕರು ವೈಜ್ಞಾನಿಕ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎಂದು ಬೆಂಗಳೂರಿನ ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನ ಕೇಂದ್ರದ ಡಾ| ಎಂ.ಜೆ. ಚಂದ್ರೇಗೌಡ ಹೇಳಿದರು.

Advertisement

ವಿ.ವಿ. ವಿಸ್ತರಣಾ ನಿರ್ದೇಶಕ ಡಾ| ಟಿ.ಎಚ್‌. ಗೌಡ, ಸಂಶೋಧನ ನಿರ್ದೇಶಕ ಡಾ| ಬಿ.ಆರ್‌. ಗುರುಮೂರ್ತಿ, ಡಾ| ಎಸ್‌.ಯು. ಪಾಟೀಲ್‌, ಡಾ| ಸುಧೀರ್‌ ಕಾಮತ್‌, ಡಾ| ಧನಂಜಯ ಬಿ., ಡಾ| ಶಂಕರ್‌ ಎಂ., ಇಲಾಖೆಯ ಅಧಿಕಾರಿಗಳು, ಪ್ರಗತಿಪರ ಕೃಷಿಕರು ಉಪಸ್ಥಿತರಿದ್ದರು.

ಆಕರ್ಷಣೆಗಳು
ವಿವಿಧ ಭತ್ತದ ತಳಿ ಮತ್ತು ಬೀಜೋತ್ಪಾದನೆ, ಚಾಪೆ ನೇಜಿ ತಯಾರಿ ಮತ್ತು ಶ್ರೀ ಪದ್ಧತಿ ಬೇಸಾಯ, ಬಹುಬೆಳೆ ಯೋಜನೆ ಮತ್ತು ಪೋಷಕಾಂಶಗಳ ನಿರ್ವಹಣೆ, ಹೈಡ್ರೋಫೋನಿಕ್ಸ್‌ ವಿಧಾನದಲ್ಲಿ ಮೇವು ಉತ್ಪಾದನೆ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. ಅಧಿಕ ಇಳುವರಿಗಾಗಿ ಗೇರು, ಕೋಕೋ, ಕಾಳುಮೆಣಸು ಮತ್ತು ಇತರ ತೋಟಗಾರಿಕೆ ಬೆಳೆಗಳಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿ ಕುರಿತು ಗೋಷ್ಠಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next