Advertisement
ಈ ನಿಟ್ಟಿನಲ್ಲಿ ಇಂದು ಬೀಚ್ ಪ್ರವಾಸೋದ್ಯಮದ ಅಭಿವೃದ್ಧಿ ಕೂಡ ಸರಕಾರದ ಆದ್ಯತೆಯಾಗಿ ಪರಿಣಮಿಸಿದೆ. ಹೀಗಾಗಿ ಬೀಚ್‌ಗಳನ್ನು ಸ್ವಚ್ಛ, ಸುಂದರ ಮತ್ತು ಅತ್ಯಾಧುನಿಕವಾಗಿ ನಿರ್ಮಿಸಲು ಪಣ ತೊಡಲಾಗುತ್ತಿದೆ. ಪ್ಲಾಸ್ಟಿಕ್ ನಿಷೇಧಕ್ಕೆ ಹೆಚ್ಚು ಗಮನಹರಿಸಬೇಕು. ಈ ಮೂಲಕ ಪ್ರತೀ ವರ್ಷ ಮಿಲಿಯಾಂತರ ಪ್ರಾಣಿ ಪಕ್ಷಿಗಳು ಸಾವನ್ನಪ್ಪುತ್ತಿರುವುದನ್ನು ತಡೆಯಬಹುದಾಗಿದೆ.
ಬೀಚ್‌ಗಳಿಗೆ ಮಳೆಗಾಲವೊಂದನ್ನು ಬಿಟ್ಟರೆ ಉಳಿದೆಲ್ಲ ಸಮಯದಲ್ಲೂ ಪ್ರವಾಸಿಗರ ಪ್ರಮಾಣ ಹೆಚ್ಚಾಗಿಯೇ ಇರುತ್ತದೆ. ಜನ ಹೆಚ್ಚು ಹೆಚ್ಚು ಭೇಟಿ ನೀಡುವಾಗ ಅಲ್ಲಿ ಕಸ, ಮಾಲಿನ್ಯದ ಪ್ರಮಾಣವೂ ಹೆಚ್ಚುತ್ತದೆ. ತಾಜ್ಯದ ನಿರ್ವಹಣೆಗೆ ಸರಕಾರ ಸರಿಯಾದ ಕ್ರಮ ತೆಗೆದುಕೊಳ್ಳುವುದು ಮುಖ್ಯವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ತಮ್ಮೊಂದಿಗೆ ತರುವಂಥ ಏಕ ಬಳಕೆಯ ಪ್ಲಾಸ್ಟಿಕ್ ಬಾಟಲಿ, ಚಾಕೊಲೇಟ್ ಹಾಳೆ, ಪ್ಲಾಸ್ಟಿಕ್ ಸ್ಟ್ರಾಗಳು ಹಗೂ ಇತರೆ ಪ್ಲಾಸ್ಟಿಕ್ ತಾಜ್ಯವನ್ನು ಬಿಸಾಡುವುದರಿಂದ ಬೀಚ್‌ಗಳಲ್ಲಿ ಟನ್‌ಗಟ್ಟಲೆ ಪ್ಲಾಸ್ಟಿಕ್ ತಾಜ್ಯ ಸೃಷ್ಟಿಯಾಗುತ್ತಿದೆ. ಇದರಿಂದ ಪರಿಸರ, ಬೀಚ್‌ನ ಸ್ವಚ್ಛತೆ ಮತ್ತು ಅಲ್ಲಿ ಜಲಚರ ಜೀವರಾಶಿಯ ಮೇಲೂ ಗಂಭೀರವಾದ ಪರಿಣಾಮ ಉಂಟಾಗುತ್ತಿದೆ. ಕಸದ ಬುಟ್ಟಿಗಳ ಅಲಭ್ಯತೆ
ನಗರದ ಅನೇಕ ಬೀಚ್‌ಗಳಲ್ಲಿ ಇಂದು ಎಷ್ಟು ದೂರಕ್ಕೆ ಪ್ರಯಾಣಿಸಿದರೂ ಕಸ ಹಾಕುವಂಥ ಬುಟ್ಟಿಗಳು ಕಾಣುವುದೇ ಇಲ್ಲ. ಇದು ಕಸ ಬಿಸಾಡುವವರಿಗೆ ಒಂದು ನೆಪ ಆಗಿ ಪರಿಣಮಿಸುತ್ತದೆ. ಹಾಗಾಗಿ ಬೀಚ್‌ಗಳಲ್ಲಿ ಕಸ ಹಾಕುವ ಬುಟ್ಟಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವತ್ತ ಅಲ್ಲಿನ ನಗರ ಪಾಲಿಕೆ ಅಥವಾ ಸಂಬಂಧಪಟ್ಟ ಆಡಳಿತ ವ್ಯವಸ್ಥೆ ಗಮನಹರಿಸಬೇಕಾಗಿದೆ.
Related Articles
ವಿಶ್ವ ಸಂಸ್ಥೆ ಬೀಚ್ ಮಾಲಿನ್ಯವನ್ನು ತಡೆಯುವ ಸಲುವಾಗಿ ಪ್ರತೀ ವರ್ಷ ಸೆ. 21ನ್ನು ಅಂತಾರಾಷ್ಟ್ರೀಯ ಬೀಚ್ ಸ್ವಚ್ಛತಾ ದಿನವನ್ನಾಗಿ ಅಚರಿಸುತ್ತದೆ. ವಿಶ್ವಾದ್ಯಂತ ಸುಮಾರು 40ಕ್ಕೂ ಹೆಚ್ಚು ರಾಷ್ಟ್ರಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಬೀಚ್ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿವೆ.
Advertisement
ಬೀಚ್ ಸ್ವಚ್ಛತೆಗೆ ಅನುಸರಿಸಬೇಕಾದ ಕ್ರಮಬೀಚ್ನ ಸ್ವಚ್ಛತೆಯನ್ನು ಕಾಪಾಡುವಲ್ಲಿ ಸಂಬಂಧಪಟ್ಟ ಇಲಾಖೆ ಕೆಲವೊಂದು ಕಟ್ಟುನಿ ಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ.
1 ತಿಂಗಳಿಗೆ ಒಂದು ಬಾರಿಯಾದರೂ ಅಲ್ಲಿನ ಜನಪ್ರತಿನಿಧಿಗಳು ಬೀಚ್ ಸ್ವಚ್ಛತಾ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಜನರು ಸಹ ಅದರಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು.
2 ಬೀಚ್‌ಗಳಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆಗೆ ನಿರ್ಬಂಧಸ ಹೇರುವುದು. ಅಲ್ಲಿನ ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸುವುದು.
3 ಸ್ವತ್ಛತೆಗೆ ಅಲ್ಲಲ್ಲಿ ಕಸದ ಬುಟ್ಟಿಗಳನ್ನು ಇರಿಸುವುದು ಮತ್ತು ಸಂಗ್ರಹವಾದ ತ್ಯಾಜ್ಯದ ಸಮರ್ಪಕ ನಿರ್ವಹಣೆ ಮಾಡುವುದು.
4 ಬೀಚ್ ನಿರ್ವಹಣೆ ಸಿಬಂದಿ ನೇಮಿಸುವುದು. ಭೇಟಿ ನೀಡುವ ಪ್ರವಾಸಿಗರು ಕಸ ಬಿಸಾಡಿದರೆ ಅಂಥವರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಜರಗಿಸುವುದು. ಶಿವಾನಂದ ಎಚ್.