Advertisement

ನೊಂದವರ ಧ್ವನಿಯಾಗಲಿ ಸಂಘಟನೆ

02:56 PM Jan 16, 2022 | Shwetha M |

ದೇವರಹಿಪ್ಪರಗಿ: ಪ್ರತಿಯೊಂದು ಸಂಘಟನೆ ಗಳು ನೊಂದವರ ಧ್ವನಿಯಾಗಿ, ಸಮಾಜ ಪರವಾಗಿ ಕಾರ್ಯನಿರ್ವಹಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಸಮಿತಿಯ ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ ಹೇಳಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೊಂದವರಿಗೆ ನೆರವಾಗಲು ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯ ಮಾಡಲಿ. ಸಮಾಜದಲ್ಲಿ ಶೋಷಿತ ವರ್ಗವನ್ನು ಮೇಲೆತ್ತುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಸಂಘಟನೆಗೆ ನಿಜವಾದ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಕಿವಿಮಾತು ಹೇಳಿದರು.

ಜಿಲ್ಲಾ ಸಂಘಟನಾ ಸಂಚಾಲಕ ಹೂಯೋಗಿ ತಳ್ಳೊಳಿ ಪ್ರಾಸ್ತಾವಿಕ ಮಾತನಾಡಿ, ಸಮಿತಿ ಸಮಾಜದ ಎಲ್ಲ ವರ್ಗಗಳ ನೊಂದವರ ಧ್ವನಿಯಾಗಿ ನ್ಯಾಯ ಕೊಡಿಸುವಲ್ಲಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದೇವೆ. ಇದು ಕೇವಲ ದಲಿತರಿಗೆ ಸೀಮಿತವಾಗಿಲ್ಲ. ಎಲ್ಲ ವರ್ಗಗಳ ನೊಂದವರ ಧ್ವನಿಯಾಗಿ ಕೆಲಸ ಮಾಡುತ್ತ ಬಂದಿರುವ ತನ್ನದೇ ಆದ ಇತಿಹಾಸ ಹೊಂದಿದೆ. ಆ ನಿಟ್ಟಿನಲ್ಲಿ ಡಾ| ಬಾಬಾಸಾಹೇಬರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಅವರ ಆಶಯದಂತೆ ಸಮಾಜ ಸುಧಾರಿಸುವಲ್ಲಿ ಶ್ರಮ ವಹಿಸುತ್ತೇವೆ ಎಂದರು.

ಎಇ ಎಂ.ಎನ್‌. ಪಾಟೀಲ, ವಿಭಾಗೀಯ ಸಂಘಟನಾ ಸಂಚಾಲಕ ರಾವುತ್‌ ತಳಕೇರಿ, ದೇವೆಂದ್ರ ಹಾದಿಮನಿ, ಜಿಲ್ಲಾ ಸಂಘಟನಾ ಸಂಚಾಲಕ ಗುರುರಾಜ ಗುಡಿಮನಿ, ಚಿನ್ನು ಕಟ್ಟಿಮನಿ, ಸಿದ್ದು ಮೇಲಿನಮನಿ, ವಿದ್ಯಾರ್ಥಿ ಒಕ್ಕೂಟದ ನಾಗೇಶ ಕಟ್ಟಿಮನಿ, ಕಾಶೀನಾಥ ತಳಕೇರಿ ಮಾತನಾಡಿದರು. ಪಪಂ ನೂತನ ಸದಸ್ಯರಾದ ಬಶೀರಶೇಠ ಬೇಪಾರಿ, ಉಮೇಶ ರೂಗಿ, ಪ್ರಕಾಶ ಮಲ್ಹಾರಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಈಶ್ವರ ಚಲವಾದಿ, ಈಶ್ವರ ಬಡಿಗೇರ, ರಮೇಶ ಮ್ಯಾಕೇರಿ ಸೇರಿದಂತೆ ಮತ್ತಿತರರು ಇದ್ದರು.

Advertisement

ದೇವರಹಿಪ್ಪರಗಿ ತಾಲೂಕು ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಬಸವರಾಜ ತಳಕೇರಿ ತಾಲೂಕು ಸಂಚಾಲಕರಾಗಿ ನೇಮಕವಾಗಿದ್ದಾರೆ. ಅದರಂತೆ ಸಂಘಟನಾ ಸಂಚಾಲಕರಾಗಿ ಶಿವಾನಂದ ವಾಲೀಕಾರ, ಶಿವಾನಂದ ಇಂಗಳಗಿ, ಸಾಹೆಬಣ್ಣ ದಳಪತಿ, ಖಜಾಂಚಿಯಾಗಿ ಪ್ರಕಾಶ ಖಾದ್ರಿ, ಪ್ರಕಾಶ ರೊಟ್ಟಿ ಹಾಗೂ ಸಿದ್ದಾರ್ಥ ತಳಕೇರಿ ಕಾರ್ಯ ನಿರ್ವಾಹಕ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next