Advertisement
ಹೃದಯ ರೋಗವು ದಿನ ಬೆಳಗಾಗುವುದರೊಳಗೆ ಉಂಟಾಗುವುದಿಲ್ಲ. ಹೃದ್ರೋಗ ಇರುವವರಲ್ಲಿ ಮುಂಚಿತವಾಗಿ ಕೆಳಗಿನ ಲಕ್ಷಣಗಳು ಕಂಡು ಬರಬಹುದು.
Related Articles
Advertisement
ಅಪಧಮನಿಗಳು ಪೆಡಸಾದಾಗ, ಸಂಕುಚಿತಗೊಂಡು ಅವುಗಳಲ್ಲಿ ರಕ್ತದ ಒತ್ತಡ ಹೆಚ್ಚಾದಾಗ ಅವು ಒಡೆಯುವ ಸಾಧ್ಯತೆಗಳಿರುತ್ತವೆ. ಹೀಗಾದಾಗ ವ್ಯಕ್ತಿ ಒಂದೋ ಪಾರ್ಶ್ವವಾಯುವಿಗೆ ತುತ್ತಾಗಬಹುದು ಅಥವಾ ಸಾವಿಗೀಡಾಗಬಹುದು.
ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ವಯಸ್ಕರು ಸಾಮಾನ್ಯವಾಗಿ ಬೆಳಗ್ಗಿನ ಉಪಹಾರದ ಬದಲಿಗೆ ಜ್ಯೂಸ್ ಅಥವಾ ಕಾಫಿ ಮಾತ್ರ ಸೇವಿಸುತ್ತಾರೆ. ಸರಿಯಾದ ಸಮಯಕ್ಕೆ ಸರಿಯಾದ ಆಹಾರ ಸೇವಿಸದಿದ್ದರೆ ಹೃದಯ ಸಂಬಂಧಿ ರೋಗಗಳು ಬರುತ್ತವೆ. ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯಿಂದ ದೂರವಿರಿ. ಜಂಕ್ ಫುಡ್, ಕರಿದ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು. ಸ್ಟ್ರಾಬೆರಿ ಮತ್ತು ಬ್ಲೂಬೇರಿ ಹಣ್ಣುಗಳು, ಟೊಮೇಟೊ, ಬೆಳ್ಳುಳ್ಳಿ, ಜೀವಸತ್ವ ಇರುವ ಧಾನ್ಯಗಳು, ಗೋಧಿ, ರಾಗಿ ಇವೆಲ್ಲವು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ನಿಯಮಿತ ವ್ಯಾಯಾಮ ಉತ್ತಮ. ಉಪ್ಪು, ಕೊಬ್ಬಿನಾಂಶವಿರುವ ಸಕ್ಕರೆ ಮತ್ತು ಆಹಾರಗಳನ್ನು ಮಿತವಾಗಿ ಬಳಸಬೇಕು.
ಅಧಿಕ ಒತ್ತಡಕ್ಕೊಳಗಾಗಬಾರದು. ಸಣ್ಣಪುಟ್ಟ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸದಿರಿ. ಯಾವಾಗಲೂ ಮನಸ್ಸು ಪ್ರಶಾಂತತೆಯಿಂದ ಕೂಡಿರಬೇಕು. ತರಕಾರಿಗಳು, ಮೊಳಕೆ ಕಾಳುಗಳನ್ನು ಸೇವಿಸಬೇಕು.
ಹೃದಯಾಘಾತ ಆಗುವ ಸಂದರ್ಭದಲ್ಲಿ ಎದೆಯು ಬಿಗಿಯಾದಂತೆ, ಹಿಸುಕಿದ ಅನುಭವ ಅಥವಾ ಭಾರವಾದಂತೆ ಅನುಭವವಾಗುತ್ತದೆ. ಹೃದಯಾಘಾತ ಸಂಭವಿಸುವ ಮುನ್ನ ಎಚ್ಚರಿಕೆ ಗಂಟೆಯಂತೆ ಈ ನೋವು 15 ನಿಮಿಷದಿಂದ ಒಂದು ಗಂಟೆಗಳ ಕಾಲ ಕಾಣಿಸಿಕೊಳ್ಳುತ್ತದೆ. ನಿರ್ಲಕ್ಷಿಸದೆ ತಕ್ಷಣ ಹೃದಯ ತಜ್ಞರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.
-ರೇಣುಕಾರಾಜ್
ಹಾರನಹಳ್ಳಿ