Advertisement

ಕ್ರೀಡಾ ನಿಯಮಗಳಿಗೆ ಬದ್ಧರಾಗಿ

08:40 AM Aug 03, 2017 | |

ಸೈದಾಪುರ: ಕ್ರೀಡಾಪಟುಗಳು ಸೋತಾಗ ಮಾನಸಿಕವಾಗಿ ಕುಗ್ಗದೆ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಜಿಪಂ ಸದಸ್ಯೆ ಶಶಿಕಲಾ ಬಿ. ಪಾಟೀಲ ಕ್ಯಾತನಾಳ ಸಲಹೆ ನೀಡಿದರು. 

Advertisement

ಬದ್ದೇಪಲ್ಲಿ ಗ್ರಾಮದಲ್ಲಿ ನಡೆದ ಸೈದಾಪುರ ಹೊಬಳಿ ಮಟ್ಟದ ಪ್ರಾಥಮಿಕ ಹಾಗೂ ಪೌಢಶಾಲಾ ಕ್ರೀಡಾ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅವರು ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಬದಲಿಗೆ ಎಲ್ಲಾ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳು ಹಾಗೂ ನಿರ್ಣಯಕರು  ಕ್ರೀಡಾ ನಿಯಮಗಳಿಗೆ ಬದ್ಧರಾಗಿರಬೇಕು ಎಂದು ಹೇಳಿದರು. ಕಾರ್ಯಕ್ರಮದ ಧ್ವಜಾರೋಹಣವನ್ನು ತಾಪಂ ಉಪಾಧ್ಯಕ್ಷೆ ರಾಮಲಿಂಗಮ್ಮ ಬಿ. ಕವಡೆ ನೆರವೇರಿಸಿದರು.

ಕ್ರೀಡಾ ಜ್ಯೋತಿಯನ್ನು ಗ್ರಾಪಂ ಅಧ್ಯಕ್ಷೆ ರತ್ನಮ್ಮ ಸ್ವೀಕರಿಸಿದರು. ದೈಹಿಕ ಶಿಕ್ಷಕ ಸಣ್ಣೆಕಪ್ಪ ಅವರ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ಜರುಗಿರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರಿ ಉಪನಿರ್ದೇಶಕರಾದ ಡಿ.ಎಂ. ಹೊಸ್ಮನಿ, ಬಿಇಒ ರುದ್ರುಗೌಡ ಪಾಟೀಲ, ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಭಿಮಣ್ಣಗೌಡ ಕ್ಯಾತನಾಳ, ಗ್ರಾಪಂ ಸದಸ್ಯರಾದ ಅಭಿಮನ್ಯು ಯಾದವ, ಶರಣಬಸವ ಸ್ವಾಮಿ, ಶಂಕರ ಯಾದವ, ಬಾಲಕೃಷ್ಣ ಖಾನಾಪುರ, ಮಹಿಮೂದ, ವಿಶ್ವನಾಥ ರಾಠೊಡ, ಸುಭಾಷ ಯಾದವ, ಡಿ.ತಾಯಪ್ಪ, ಮರಿಲಿಂಗಪ್ಪ, ಇಸಿಒ ಮಹಿಬೂಬ ಐಸಾಕಿ, ಸಿಆರ್‌ಪಿಗಳಾದ ಲಿಂಗನಗೌಡ, ಸೈಯ್ಯದ್‌ ಶೇರ್‌ ಅಲಿ, ರವಿಕುಮಾರ, ತಾಲೂಕ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತ ಹೊಸಮನಿ,
ವಿಷಯ ಪರಿವೀಕ್ಷಕ ವೆಂಕೋಬ, ಬಸಣ್ಣಗೌಡ ಬಿರಾದರ, ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಂದಸಾಬ ವಹಿಸಿದ್ದರು.

ಇದೇ ವೇಳೆ ಬದ್ದೇಪಲ್ಲಿ ಗ್ರಾಮದ ವಿವಿಧ ಸಂಘಟನೆಗಳ ಮುಖ್ಯಸ್ಥರು, ಯುವಕರು, ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next