Advertisement

ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಎಚ್ಚ ರ ವಹಿಸಿ

08:46 PM Jan 08, 2022 | Team Udayavani |

ರಾಯಚೂರು: ಈಚೆಗೆ ಗ್ರಾಹಕರು ಆನ್‌ ಲೈನ್‌ ಶಾಪಿಂಗ್‌ ಹೆಚ್ಚು-ಹೆಚ್ಚು ಮಾಡುತ್ತಿದ್ದು, ಇಂಥ ವ್ಯವಹಾರ ನಡೆಸುವಾಗ ಬಹಳ ಎಚ್ಚರಿಕೆ ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ಕರೆ ನೀಡಿದರು.

Advertisement

ನಗರದ ಪ್ರಿನ್ಸಸ್‌ ಫಾತಿಮಾ ಇ.ಎಸ್‌ .ಐ.ಎನ್‌ ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ, ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ಆಯೋಗ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಗ್ರಾಹಕರ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಹಕರು ತಮ್ಮ ಹಕ್ಕುಗಳನ್ನು ತಿಳಿಯುವುದು ಅವಶ್ಯ. ಏನೇ ಖರೀದಿಸುವಾಗ ಗುಣಮಟ್ಟ ಮತ್ತು ತೂಕ ವಿಷಯದಲ್ಲಿ ಮೊಸವಾದರೆ ಗ್ರಾಹಕರ ಸಂರಕ್ಷಣಾ ಅ ಧಿನಿಯಮ 2019ರ ಅನ್ವಯ ಗ್ರಾಹಕರ ವ್ಯಾಜ್ಯ ಪರಿಹಾರದ ಆಯೋಗದ ಮೊರೆ ಹೋಗಿ ನ್ಯಾಯ ಪಡೆಯಬಹುದು.

ಸರಕು ಹಾಗೂ ಸೇವೆಗೆ ನೀಡಿದ ಬೆಲೆಯೊಂದಿಗೆ ಮಾನಸಿಕ ವೇದನೆ, ವ್ಯಾಜ್ಯ ಪರಿಹರಿಸಲು ಆದ ಖರ್ಚು ಸಹ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಮೂಲಕ ನ್ಯಾಯ ಪಡೆಯುವಾಗ ಸಿಗುತ್ತದೆ ಎಂದರು. ಹಿಂದಿನ ದಿನಗಳಲ್ಲಿ ಗ್ರಾಹಕರ ಹಕ್ಕುಗಳ ಕಾಯ್ದೆ ಜಾರಿಯಲ್ಲಿರಲಿಲ್ಲ, ಅಂದಿನ ದಿನಗಳಲ್ಲಿ ನಂಬಿಕೆಯ ಮೇಲೆ ವ್ಯವಹಾರ ನಡೆಯುತ್ತಿತ್ತು. ಆದರೆ, ಇಂದಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈ ಕಾರಣದಿಂದ ಮತ್ತು ಗ್ರಾಹಕರ ರಕ್ಷಣೆಗಾಗಿ ಕಾಯ್ದೆ ಜಾರಿಗೆ ಬಂದಿದೆ ಎಂದು ವಿವರಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಬಸವರಾಜ ಮಾತಾನಾಡಿ, ಗುಣಮಟ್ಟದ ವಿಷಯದಲ್ಲಿ ಅನ್ಯಾಯಕ್ಕೊಳಗಾದಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆ ಮೂಲಕ ನ್ಯಾಯ ಪಡೆಯಬಹು. ಅಂಗಡಿಗಳಲ್ಲಿ ಗ್ರಾಹಕರೇ ದೇವರು ಎಂದು ಬರೆದುಕೊಂಡಿರುತ್ತಾರೆ. ಆದರೆ, ದೇವರನ್ನೇ ಮೋಸ ಮಾಡುವ ಕಾಲ ಇದಾಗಿದ್ದು, ಗ್ರಾಹಕರ ರಕ್ಷಣೆಗಾಗಿ ಕಾಯ್ದೆ ಜಾರಿಗೆ ಬಂದಿದೆ. ಇಂದಿಗೂ ಕೂಡ ಜನರಿಗೆ ಕಾಯ್ದೆ ಬಗ್ಗೆ ತಿಳಿಯುತ್ತಿಲ್ಲ ಎಂದು ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ  ಕಾರದ ಸದಸ್ಯ ಕಾರ್ಯದರ್ಶಿ ಮಹಾಜನ್‌ ಆರ್‌.ಎ, ಕಾಲೇಜಿನ ಅಧ್ಯಕ್ಷ ಮಹ್ಮದ್‌ ಎಂ.ಪಟೇಲ್‌, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಪ್ರಭುದೇವ್‌ ಪಾಟೀಲ್‌, ಪ್ರಾಚಾರ್ಯ ರುಕ್ಸಾನಾ ಬೇಗಂ ಸೇರಿ ಇತರರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next