Advertisement
ಆನ್‌ಲೈನ್ ಮೂಲಕ ಸಾಲ ಕೊಡುವ ಆ್ಯಪ್‌ಗಳು ಕಳೆದೆರಡು ವರ್ಷಗಳಿಂದ ಚಾಲನೆಯಲ್ಲಿದ್ದರೂ ಅವು ಡಿಮ್ಯಾಂಡ್ ಪಡೆದುಕೊಂಡಿದ್ದು ಕೋವಿಡ್ ಲಾಕ್‌ಡೌನ್ ಕಾಲದಲ್ಲಿ. ಈಸಮಯದಲ್ಲಿ ಅಸಂಖ್ಯಾತ ಜನರ ಕೆಲಸಹೋಯಿತು. ಸಂಬಳ ಸರಿಯಾದ ಸಮಯಕ್ಕೆ ಬರುತ್ತಿರಲಿಲ್ಲ, ಬಾಡಿಗೆ ಕಟ್ಟುವುದರಿಂದ ಹಿಡಿದು ಯಾವ ಖರ್ಚುಗಳಿಗೂ ಲಾಕ್‌ಡೌನ್ ಇರಲಿಲ್ಲ. ಬಹುತೇಕ ಎಲ್ಲಾ ಬಿಸಿನೆಸ್‌ಗಳು ಸ್ಥಗಿತಗೊಂಡಿದ್ದವು. ಜನರ ಕೈಲಿ ಹಣವೇಇಲ್ಲದಿದ್ದಾಗ, ಅವರಿಗೆಲ್ಲಾ ಸುಲಭವಾಗಿ, ಕ್ಷಿಪ್ರಗತಿಯಲ್ಲಿ ಸಿಗುವ ಈ ಆನ್‌ಲೈನ್ ಸಾಲದ ಆ್ಯಪ್‌ಗಳು ಆಪತ್ಭಾಂಧವರಂತೆ ಕಂಡದ್ದು ಸುಳ್ಳಲ್ಲ.
Related Articles
Advertisement
ಅರ್ಧ ಗಂಟೆ ತಡವಾದರೆ ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರನ್ನೆಲ್ಲಾ ಒಂದು ವಾಟ್ಸಾಪ್ ಗ್ರೂಪ್ ಮಾಡಿ, ನಿಮ್ಮ ಫೋಟೋಹಾಕಿ, ನೀವು ಫ್ರಾಡ್/ ಮೋಸಗಾರರು ಅಂತ ಹೇಳಿ, ಮರ್ಯಾದೆ ಕಳೀತಾರೆ. ಅಷ್ಟೇ ಅಲ್ಲದೆ, ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಪ್ರತಿಯೊಬ್ಬರಿಗೂ- “ಅವರು ನಿಮ್ಮ ಸಾಲಕ್ಕೆ ಶ್ಯೂರಿಟಿಯಾಗಿದ್ದರು. ನೀವು ಸಾಲ ಕಟ್ಟದಿರುವ ಕಾರಣ, ಅವರ ಮನೆಬಾಗಿಲಿಗೆ ಸಾಲ ವಸೂಲಿ ಮಾಡಲು ಜನರನ್ನುಕಳಿಸುತ್ತೇವೆ’ ಎಂಬಂತೆ ಬೆದರಿಸುತ್ತಾರೆ. ಜೊತೆಗೆ ಅವರೆಲ್ಲರಿಗೂ ಕಾಲ್ ಮಾಡಿ, ಸಾಲಮರಳಿಸಲು ನಿಮ್ಮ ಗೆಳೆಯರಿಗೆ ಹೇಳಿ ಎಂದೂ ಸಲಹೆ ನೀಡುತ್ತಾರೆ!
ಅದು ಚಕ್ರವ್ಯೂಹ : ನಿಮಗೆ ಸಂಬಳ ಬರಲು ಇನ್ನೂ ಇಪ್ಪತ್ತು ದಿವಸಗಳ ಸಮಯವಿದೆ!ಸಂಬಳವೇ ಬರದೆ, ನೀವು ಹೇಗೆ ಹಣವಾಪಸ್ ಮಾಡಲು ಸಾಧ್ಯ? ಇಂಥಸಂದರ್ಭದಲ್ಲಿ ಮತ್ತದೇ ಆ್ಯಪ್‌ಗ್ಳುನಿಮ್ಮ ಸಹಾಯಕ್ಕೆ ಬರುತ್ತವೆ. ನೀವುಇನ್ನೆರಡು ಆ್ಯಪ್‌ಗ್ಳನ್ನು ಡೌನ್ ಲೋಡ್ ಮಾಡಿಕೊಳ್ಳಿ, ಅವುಗಳಿಂದಸಾಲ ಪಡೆಯಿರಿ, ಮೊದಲನೆಯದನ್ನು ತುಂಬಿ ಎಂಬ ಸಲಹೆ ಬರುತ್ತದೆ!ಹೀಗೆ ನಡೆಯುತ್ತದೆ ಈ ಆನ್‌ಲೈನ್‌ಮೂಲಕ ಸಾಲ ಕೊಡುವ ಆ್ಯಪ್‌ಗ್ಳ ಹಗಲು ದರೋಡೆ ಕೆಲಸ. ತಿಂಗಳ ಶುರುವಿನಲ್ಲಿ ನೀವು ಪಡೆದ ಹತ್ತುಸಾವಿರ ಸಾಲ, ತಿಂಗಳಕೊನೆಯಾಗುವ ಹೊತ್ತಿಗೆಕಡಿಮೆಯೆಂದರೂ ನಲವತ್ತುಸಾವಿರವಾಗಿರುತ್ತದೆ! ಹಾಗೂ,ಮೊದಲ ಹತ್ತು ಸಾವಿರವನ್ನು ಹೊರತು ಪಡಿಸಿ, ಉಳಿದ ಹಣವನ್ನೆಲ್ಲಾ, ನೀವು ಈ ಸಾಲ ತೀರಿಸಲೆಂದೇ ಪಡೆದಿರುತ್ತೀರಿ! ಇದೆಲ್ಲವೂ ಪೂರ್ತಿ ಅರ್ಥವಾಗುವ ಹೊತ್ತಿಗೆ ಲೋನ್ ಆ್ಯಪ್‌ಗಳ ಚಕ್ರವ್ಯೂಹಕ್ಕೆ ಸಿಲುಕಿರುತ್ತೀರಿ!
ಆಮಿಷಕ್ಕೆ ಮರುಳಾಗಬೇಡಿ… : RBI ಮತ್ತು ಕರ್ನಾಟಕ Money Lenders Rules ಪ್ರಕಾರ ವರ್ಷಕ್ಕೆ 16% ಗಿಂತ ಜಾಸ್ತಿ ಬಡ್ಡಿಯನ್ನು ಯಾರಾದರೂ ತೆಗೆದುಕೊಂಡರೆ ಅದನ್ನು ಅಪರಾಧ ಎಂದೇ ಪರಿಗಣಿಸಲಾಗುತ್ತದೆ. ಇದರ ನಿಯಂತ್ರಣಕ್ಕಾಗಿ ಸಿಸಿಬಿ ಯವರಿದ್ದಾರೆ.ಯಾರಾದರೂ ಇಂತಹ ಲೋನ್ ಆ್ಯಪ್‌ಗ್ಳಲ್ಲಿಸಿಲುಕಿಬಿದ್ದಿದ್ದರೆ ಸಿಸಿಬಿಯವರನ್ನು ಸಂಪರ್ಕಿಸಿ.ಈ ಆ್ಯಪ್‌ಗಳ ಆಮಿಷಕ್ಕೆ ಮರುಳಾಗಿ ಪೂರ್ತಿ ವಿವರ ತಿಳಿಯದೆ ಸಾಲ ಮಾಡಿ, ನಂತರ ಆ ಸಾಲ ತೀರಿಸಲು ಮತ್ತಷ್ಟು ಸಾಲ ಮಾಡಿ ನೆಮ್ಮದಿ, ಜೀವನ, ಜೀವ ಕಳೆದುಕೊಳ್ಳದಿರಿ.
ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ! :
ನಾನೀಗ ಕಟ್ಟುತ್ತಾ ಇರುವ ಬಡ್ಡಿಯ ಮೊತ್ತವೇ ಜಾಸ್ತಿ ಆಗಿದೆ. ಆ ಕಾರಣಕ್ಕೆ ಇನ್ನುಮುಂದೆ ನಾನು ಹಣ ಕೊಡುವುದಿಲ್ಲ ಎಂದು ಸಾಲ ಪಡೆದವರು ಹೇಳಲು ಸಾಧ್ಯವಾಗುವುದಿಲ್ಲ. ಕಾರಣ, ಇದು ಆನ್ ಲೈನ್ ಸಾಲ ಆಗಿರುವುದರಿಂದ, ಈ ಬಗ್ಗೆ ಯಾರ ಬಳಿಯೂ ಮಾತಾಡಲು ಆಗುವುದಿಲ್ಲ. ಎಲ್ಲವೂ ಆ್ಯಪ್‌ಗ್ಳ ನಿಯಂತ್ರಣದಲ್ಲಿ ಇರುತ್ತದೆ. ನಾವು ಸಾಲ ವಾಪಸ್ ಕೊಡದೇ ಹೋದರೆ, ಅದೇ ಸಂದೇಶ ನಮ್ಮ ಫ್ರೆಂಡ್ ಲಿಸ್ಟ್ ನಲ್ಲಿ ಇರುವ ಎಲ್ಲರ ಮೊಬೈಲ್‌ಗೂ ಹೋಗಿಬಿಡುತ್ತದೆ! ಆನ್‌ಲೈನ್ ಆ್ಯಪ್‌ಗಳ ಮೂಲಕ ಸಾಲ ಪಡೆದು, ಸಕಾಲದಲ್ಲಿ ತೀರಿಸಲು ಆಗದೆ, ಫ್ರೆಂಡ್‌ಗಳ ಮುಂದೆ ಮರ್ಯಾದೆ ಹೋಗಿದ್ದಕ್ಕೆ ಹೆದರಿ ಹೈದರಾಬಾದ್ ಮತ್ತು ತೆಲಂಗಾಣದಲ್ಲಿ ಐದಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ! ಅಂದಮೇಲೆ, ಈ ಆ್ಯಪ್‌ಗ್ಳ ಮೂಲಕ ಸಾಲ ಕೊಟ್ಟವರ ಕಿರಿಕಿರಿ ಹೇಗಿರಬಹುದೋ ಅಂದಾಜು ಮಾಡಿಕೊಳ್ಳಿ.
– ರೂಪ ಲಕ್ಷ್ಮೀ