Advertisement

ಚಿತ್ರೀಕರಣ ವೇಳೆ ಎಚ್ಚರ ವಹಿಸಿ: ಸಾ.ರಾ.ಗೋವಿಂದು

06:35 AM May 31, 2018 | |

ಬೆಂಗಳೂರು: ದಕ್ಷಿಣ ಕನ್ನಡದ ಬೆಳ್ತಂಗಡಿ ಸಮೀಪದ ಎರ್ಮಾಯಿ ಜಲಪಾತದಲ್ಲಿ ಕಾಲು ಜಾರಿ ಬಿದ್ದು, ಬುಧವಾರ
ಮುಂಜಾನೆ ಮೃತಪಟ್ಟ ನಿರ್ದೇಶಕ ಸಂತೋಷ್‌ ಶೆಟ್ಟಿ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಸಂತಾಪ ಸೂಚಿಸಿದೆ.

Advertisement

ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಸಂತೋಷ್‌ ಶೆಟ್ಟಿ ಅವರ ಘಟನೆ ಆಕಸ್ಮಿಕ.

ಅವರು ಇನ್ನೂ ಯುವಕರಾಗಿದ್ದು, ಚಿತ್ರರಂಗದಲ್ಲಿ ಸಾಧನೆ ಮಾಡಬಹುದಿತ್ತು. ಆದರೆ, ಅವರ “ಕನಸು’ ಈಡೇರಿಲ್ಲ.
ಚಿತ್ರರಂಗದ ಯಾರೇ ಇರಲಿ ಚಿತ್ರೀಕರಣಕ್ಕೆ ಹೋದಾಗ ಅಥವಾ ಫೋಟೋ ಶೂಟ್‌ ನಡೆಸುವ ಸಂದರ್ಭದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.

ಸಂತೋಷ್‌ ಶೆಟ್ಟಿ, ಈ ಹಿಂದೆ “ಕನಸು’ ಚಿತ್ರ ನಿರ್ದೇಶಿಸಿದ್ದರು. ಈಗ ಹೊಸ ಚಿತ್ರವೊಂದಕ್ಕೆ ತಯಾರಿ ನಡೆಸಿದ್ದರು.

ಅದರ ಸಲುವಾಗಿ ಅವರು ಫೋಟೋ ಶೂಟ್‌ ನಡೆಸಲು ಮುಂಜಾನೆ ಎರ್ಮಾಯಿ ಫಾಲ್ಸ್‌ಗೆ ತೆರಳಿದ್ದರು.ಈ ವೇಳೆ ಈ ಅವಘಡ ಸಂಭವಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next