Advertisement

ಜಾನಪದ ಕಲೆ ನಶಿಸದಂತೆ ಎಚ್ಚರವಹಿಸಿ: ಶಿವಕುಮಾರ್‌

05:07 PM Nov 11, 2018 | |

ಚಿಕ್ಕಮಗಳೂರು: ಅತಿ ವೇಗವಾಗಿ ಬೆಳೆಯುತ್ತಿರುವ ಟಿವಿ ಮತ್ತು ಸಿನೆಮಾ ಮಾಧ್ಯಮದಿಂದ ಜನಪದ ಕಲೆಗಳು ನಶಿಸದಂತೆ ಎಚ್ಚರವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ್‌ ಸಲಹೆ ಮಾಡಿದರು.

Advertisement

ಸಮೀಪದ ಅಂಬಳೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಸಂಯುಕ್ತವಾಗಿ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ತಮಟೆ ನುಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಜನರ ಬಾಯಿಂದ ಬಾಯಿಗೆ ಬೆಳೆದು ಬಂದ ಜೀವಂತ ಕಲೆ ಜನಪದ. ಆಧುನಿಕತೆಯ ಶರವೇಗದಲ್ಲಿ ಮುನ್ನಡೆಯುತ್ತಿರುವ ಟಿವಿ ಮತ್ತು ಸಿನೆಮಾ ಜಗತ್ತಿನೊಂದಿಗೆ ಪೈಪೋಟಿ ನಡೆಸಬೇಕಾಗಿದೆ. ಜನರ ಬದುಕಿನ ಜೀವಂತ ಕಲೆಯಾಗಿರುವ ಜನಪದ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದರು. 

 ಅಧ್ಯಕ್ಷತೆ ವಹಿಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕುಂದೂರು ಅಶೋಕ ಮಾತನಾಡಿ, ನೆಲ, ಜಲ ಮತ್ತು ಜನ್ಮಕೊಟ್ಟ ತಾಯಿಋಣವನ್ನು ತೀರಿಸಲು ಈ ನೆಲದ ಜನರು ಕೆಲಸ ಮಾಡಬೇಕು ಎಂದು ಹೇಳಿದರು.

ತಮಟೆ ಕಲಾವಿದ ಎ.ಜೆ.ರಂಗಯ್ಯ ಅವರನ್ನು ಪರಿಚಯಿಸಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹಿರೇಮ ಗಳೂರು ಪುಟ್ಟಸ್ವಾಮಿ,ಸತತ 55 ವರ್ಷಗಳಿಂದ ತಮಟೆ ನುಡಿಸುವ ಮೂಲಕ ಕುಟುಂಬಕ್ಕೆ ಆಸರೆಯಾಗಿಕೊಂಡಿರುವ 65 ವರ್ಷದ ಎ.ಜೆ.ರಂಗಯ್ಯ ಅವರ ಕಲಾ ಸೇವೆ ಅಪರೂಪದ್ದಾಗಿದೆ.  ಅವರನ್ನು ಜಿಲ್ಲಾ ಮಟ್ಟದಲ್ಲಿ ಗುರುತಿಸಿ ಗೌರವಿಸುತ್ತಿರುವುದು ಪರಿಷತ್‌ಗೆ ಗೌರವ ಬಂದಿದೆ ಎಂದು ತಿಳಿಸಿದರು.

Advertisement

ಅಶ್ವಿ‌ನಿ ದೇವತೆ ಎಂದೇ ಖ್ಯಾತಿ ಪಡೆದಿರುವ ಡಾ|ಎ.ಆರ್‌. ಕೃಷ್ಣಶಾಸ್ತ್ರಿ ಅವರ ಜನ್ಮಸ್ಥಳ ಅಂಬಳೆಯಲ್ಲಿ ಅವರ ಹೆಸರಿನಲ್ಲಿ ಭವನ ನಿರ್ಮಾಣಕ್ಕೆ ಸರ್ಕಾರ 1.4 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಭವನ ನಿರ್ಮಾಣಕಾರ್ಯ ನನೆಗುದಿಗೆ ಬಿದ್ದಿದೆ. ಜಿಲ್ಲಾಡಳಿತ ಗಮನಹಿಸಿ ಜನರ ಬೇಡಿಕೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
 
ಕನ್ನಡ ಮತ್ತು ಸಂಸ್ಕೃತಿಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಎಂ.ಎಸ್‌.ಚಂದ್ರಪ್ಪ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಎ.ಟಿ.ಉಮೇಶ್‌, ಪಿಡಿಒ ಶಾಂತಾ ಮಾತನಾಡಿದರು. ಗ್ರಾಪಂ ಸದಸ್ಯ ಹರೀಶ್‌, ಲಕ್ಷ್ಮಣ ಗೌಡ, ಅಂಬೇಡ್ಕರ್‌ ಯುವಕ ಸಂಘ ಅಧ್ಯಕ್ಷ ಚಿದಾನಂದ್‌, ಉಪಾಧ್ಯಕ್ಷ ನವೀನ್‌ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next