Advertisement

ಮಕ್ಕಳು ಮೊಬೈಲ್‌ ಗೇಮ್‌ಗೆ ತುತ್ತಾಗದಂತೆ ಎಚ್ಚರ ವಹಿಸಿ

06:10 AM Dec 09, 2018 | Team Udayavani |

ಬೆಂಗಳೂರು : ವಿದ್ಯಾರ್ಥಿಗಳು ಬ್ಲೂ-ವೇಲ್‌, ಪಬ್‌ಜಿ ಮೊದಲಾದ ಇಂಟರ್‌ನೆಟ್‌ ಹಾಗೂ ಮೊಬೈಲ್‌ ಗೇಮ್‌ ಬಳಸದಂತೆ ಪಾಲಕ, ಪೋಷಕರಿಗೆ ಜಾಗೃತಿ ಮೂಡಿಸಿ, ಶಾಲಾವರಣದಲ್ಲೂ ಇದರ ಬಗ್ಗೆ ಎಚ್ಚರವಹಿಸುವಂತೆ ಕರ್ನಾಟಕ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆಡಳಿತ ಮಂಡಳಿ ಒಕ್ಕೂಟ(ಕ್ಯಾಮ್ಸ್‌) ಖಾಸಗಿ ಶಾಲೆಗಳಿಗೆ ಸಲಹೆ ನೀಡಿದೆ.

Advertisement

ಅಪಾಯಕಾರಿ ಆಟದಿಂದಾಗಿ ವಿದ್ಯಾರ್ಥಿಗಳು ಖನ್ನತೆ, ಮಾನಸಿಕ ಅಸಮಾತೋಲನ, ಆತ್ಮಹತ್ಯೆ ಪ್ರವೃತ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಶೈಕ್ಷಣಿಕ ಸಮಸ್ಯೆ ಜತೆಗೆ ನಿಮ್ಹಾನ್ಸ್‌ನಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಸೃಷ್ಟಿಸಿದೆ. ಹೀಗಾಗಿ ಕ್ಯಾಮ್ಸ್‌ ವ್ಯಾಪ್ತಿಯ ಎಲ್ಲ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಮತ್ತು ಪಾಲಕ, ಪೋಷಕರು ಮಕ್ಕಳ ಬಗ್ಗೆ ಜಾಗೃತಿ ವಹಿಸುವಂತೆ ಸೂಚಿಸಿದೆ.

ಅಂತರ್ಜಾಲದ ದುರ್ಬಳಕೆ ಮಾಡದಂತೆ ಮಕ್ಕಳಿಂದ ಸ್ವಘೋಷಿತ ಮುತ್ಛಳಿಕೆ ಪತ್ರ ಬರೆಸಿಕೊಳ್ಳುವುದು ಸೂಕ್ತ. ಪಾಲಕರು ಈ ಬಗ್ಗೆ ವಿಶೇಷ ಗಮನ ಹರಿಸಬೇಕು. ಮಕ್ಕಳ ಜಾಗೃತಿಯ ಕುರಿತು ತಜ್ಞರ ಮೂಲಕ ಮಾರ್ಗದರ್ಶನ ನೀಡಬೇಕು. ಶಾಲಾವರಣದಲ್ಲಿ ಕಂಡು ಬಂದಲ್ಲಿ ಕ್ಯಾಮ್ಸ್‌ ಗಮನಕ್ಕೆ ತಂದು ಪರಿಹಾರ ಹಾಗೂ ಸಲಹೆ ಪಡೆದುಕೊಳ್ಳಬಹುದು ಎಂದು ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next