ದೇವನಹಳ್ಳಿ: ಬೇಸಿಗೆ ಬರುತ್ತಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡುವುದರ ಬದಲಿಗೆ ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಿ ಜನರಿಗೆ ನೀರಿನ ಸಮಸ್ಯೆ ಬರದಂತೆ ಎಚ್ಚರ ವಹಿಸಿ ಎಂದು ತಾಪಂ ಅಧ್ಯಕ್ಷೆ ಭಾರತಿ ಅಧಿಕಾರಿಗಳಿಗೆೆ ಸೂಚಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬರಗಾಲ ಘೋಷಣೆಯಾಗಿರುವುದರಿಂದ ದನ, ಕರುಗಳಿಗೆ ಮೇವಿನ, ಕುಡಿಯುವ ನೀರು, ರೈತರಿಗೆ ಬೆಳೆ ಪರಿಹಾರ ಹಾಗೂ ಸರ್ಕಾರದಿಂದ ಬರ ಪರಿಹಾರದ ಅನುದಾನದ ಬಗ್ಗೆ ಸಂಬಂಧಿಸಿದಂತೆ ಕ‌್ರಮಗಳನ್ನು ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಬರದಂತೆ ಎಚ್ಚರ ವಹಿಸಬೇಕು. ಈ ಕೂಡಲೇ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದರು.
ನೀರಿನ ವ್ಯವಸ್ಥೆ ಕಲ್ಪಿಸಿ: ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ ಮಾಲೀಕರನ್ನು ಸಂಪರ್ಕಿಸಿ ನೀರಿನ ವ್ಯವಸ್ಥೆ ಕಲ್ಪಿಸಿ ಕೊಡಬೇಕು. ಸರ್ಕಾರದ ಕಾರ್ಯಕ್ರಮಗಳು ಪ್ರತಿ ಜನರಿಗೆ ತಲುಪುವಂತೆ ಆಗಬೇಕು. ಸರ್ಕಾರಿ ಕಚೇರಿಗಳ ಕಟ್ಟಡಗಳು ಒಂದು ವರ್ಷಕ್ಕೆ ರಿಪೇರಿ ಬಂದರೆ ಗುತ್ತಿಗೆದಾರರು ಯಾವ ರೀತಿ ಗುಣಮಟ್ಟದಲ್ಲಿ ಕಟ್ಟಿರುತ್ತಾರೆ ಎಂದು ತಿಳಿಯುತ್ತದೆ. ಬಿದಲೂರು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಡಶಾಲೆಯಲ್ಲಿ ಸ್ವಚ್ಛತೆ ಇಲ್ಲದ ಕಾರಣ ಮಕ್ಕಳಿಗೆ ಜ್ವರ ಕಾಣಿಸಿಕೊಂಡಿರುವುದ ಬಗ್ಗೆ ಆರೋಗ್ಯಾಧಿಕಾರಿಗಳು ಗಮನಕ್ಕೆ ತಂದಿರು ವುದರಿಂದ ಕ್ಷೇತ್ರದ ಶಿಕ್ಷಣಾಧಿಕಾರಿಗಳು ಅಲ್ಲಿನ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸ್ವಚ್ಛ ಮಾಡಬೇಕು: ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಯ್ ಮಾತನಾಡಿ, ಬಿದಲೂರು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸ್ವಚ್ಛತೆ ಯಿಲ್ಲದ ಕಾರಣ ಮಕ್ಕಳಿಗೆ ಜ್ವರ ಕಾಣಿಸಿಕೊಂಡಿರುವುದರಿಂದ ರಕ್ತ ಪರೀಕ್ಷೆ ಮಾಡಿ ಲ್ಯಾಬ್ ಗೆ ಕಳುಹಿಸಲಾಗಿದೆ ಯಾವ ಜ್ವರ ಬಂದಿದೆ ಎಂಬುದರ ಬಗ್ಗೆ ವರದಿ ಬಂದ ನಂತರ ತಿಳಿಯುತ್ತದೆ. ಅಡುಗೆ ಕೋಣೆಯಲ್ಲಿ ಸರಿಯಾದ ಸ್ವಚ್ಛತೆಯಿಲ್ಲ ಅಡುಗೆ ಮಾಡುವವರು ಸರಿಯಾದ ರೀತಿ ಸ್ನಾನ ಮಾಡುತ್ತಿದ್ದಾರೆಯೇ ಎಂದೂ ಸಹ ತಿಳಿಯುತ್ತಿಲ್ಲ. ನೀರಿನ ಸಂಪು ಮತ್ತು ಟ್ಯಾಂಕರ್‌ಗಳನ್ನು 15 ದಿನಗಳಿಗೊಮ್ಮೆ ಸ್ವಚ್ಛ ಮಾಡಬೇಕು. ಹೀಗೆ ಹಲವಾರು ಸಮಸ್ಯೆಗಳು ಇವೆ ಎಂದು ಸಭೆಯ ಗಮನಕ್ಕೆ ತಂದರು.
ರೈತರ ಖಾತೆ ನೇರ ಹಣ: ಕೃಷಿ ಇಲಾಖೆಯ ಸಹಾ ಯಕ ನಿರ್ದೇಶಕಿ ಎಂ.ಎನ್.ಮಂಜುಳಾ ಮಾತ ನಾಡಿ, ರೈತರ ಬೆಳೆ ನಷ್ಟದ ಬಗ್ಗೆ ಈಗಾಗಲೇ ತಾಲೂಕು ಕಂದಾ ಯ ಇಲಾಖೆ ಮತ್ತು ಕೃಷಿ ಇಲಾಖೆ ಜಂಟಿ ಸರ್ವೆ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಕೇಂದ್ರ ಸರ್ಕಾರ ದಿಂದ ಅನುದಾನ ಬಂದ ಕೂಡಲೇ ರೈತರ ಖಾತೆಗಳಿಗೆ ನೇರವಾಗಿ ಹೊಗಲಿದೆ. ಹಿಂಗಾರಿನಲ್ಲಿ ಹುರುಳಿ 85 ಹೆಕ್ಟೇರ್ ಬೆಳೆಯಲಾಗಿದೆ ಎಂದು ಹೇಳಿದರು.
ತೋಟಗಾರಿಕಾ ಬೆಳೆಗಳ ಬಗ್ಗೆ ಮಾಹಿತಿ: ತಾಲೂಕು ತೋಟಗಾರಿಕ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿ ನಾಗನಾಯಕನ ಹಳ್ಳಿ ಹತ್ತಿರದಲ್ಲಿ ಬಾಳೆ ಮಾಗಿಸುವ ಕೇಂದ್ರವನ್ನು ತೆಗೆಯ ಲಾಗಿದೆ. ಬೂದಿಗೆರೆಯಲ್ಲಿ ರೈತರ ಉತ್ಪಾದಕರ ಸಹ ಕಾರ ಸಂಘವನ್ನು ತೆರೆಯಲಾಗಿದ್ದು 22 ಲಕ್ಷ ರೂಗಳನ್ನು ಯಾಂತ್ರೀಕರಣ ಖರೀದಿಸಲು ಕೊಡಲಾಗಿದೆ. ಜೇನು ಕೃಷಿ ಯ ಬಗ್ಗೆ ತರಬೇತಿಗಳನ್ನು ರೈತರಿಗೆ ನೀಡಲಾಗಿದೆ ಹಾಗೂ ತಾಂತ್ರಿಕ ತೋಟಗಾರಿಕೆಗಳ ಬೆಳೆಗಳನ್ನು ಬೆಳೆಯಲು ಮಾಹಿತಿ ನೀಡಲಾಗುತ್ತಿದೆ ಎಂದರು.
ತಾಪಂ ಉಪಾಧ್ಯಕ್ಷೆ ನಂದಿನಿ, ಸಾಮಾಜಿಕ ನ್ಯಾಯಾ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ತಾಪಂ ಕಾರ್ಯ ನಿರ್ವಣಾಧಿಕಾರಿ ಮುರುಡಯ್ಯ ಇದ್ದರು.