Advertisement

ಕೋವಿಡ್‌ 19ನಿಂದ ಸಾವಾಗದಂತೆ ಎಚ್ಚರ ವಹಿಸಿ: ನವೀನ್‌ರಾಜ್‌

06:22 AM May 21, 2020 | Lakshmi GovindaRaj |

ಹಾಸನ: ಜಿಲ್ಲೆಯಲ್ಲಿ ಕೋವಿಡ್‌ 19 ವೈರಸ್‌ ದೃಢಪಟ್ಟಿರುವವರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಬೇಕು. ಕೋವಿಡ್‌ 19ದಿಂದ ಸಾವು ಸಂಭವಿಸದಂತೆ ಎಚ್ಚರ ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿ ನವೀನ್‌ರಾಜ್‌ಸಿಂಗ್‌ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್‌ 19 ನಿಯಂತ್ರಣ ಕ್ರಮಗಳ ಕುರಿತು ಸಭೆ ನಡೆಸಿದ ಅವರು, ಕೋವಿಡ್‌ 19 ಚಿಕಿತ್ಸೆಗೆ ವೈದ್ಯರ ತಂಡ ವಿಶೇಷ ಮುತುವರ್ಜಿ ವಹಿಸ ಬೇಕು.

Advertisement

65 ವರ್ಷ ಮೇಲ್ಪಟ್ಟ  ವೃದ್ಧರು, ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಹಾಗೂ 10 ವರ್ಷದೊಳಗಿನ ಮಕ್ಕಳ ಆರೈಕೆ ಬಗ್ಗೆ ವಿಶೇಷ ನಿಗಾ ವಹಿಸಬೇಕು ಎಂದರು. ತಂದೆ-ತಾಯಿ ಕೋವಿಡ್‌ 19 ಸೋಂಕಿತ ರಾಗಿದ್ದರೆ, ಅವರ 10  ವರ್ಷದೊಳಗಿನ ಮಕ್ಕಳಲ್ಲಿ ನೆಗೆಟಿವ್‌ವರದಿ ಬಂದಿದ್ದರೆ ಆ ಮಕ್ಕಳ ಆರೈಕೆಗೆ ಕೋವಿಡ್‌ 19 ಆಸ್ಪತ್ರೆಯಲ್ಲಿ 10 ಹಾಸಿಗೆಗಳ ವಿಶೇಷ ವಾರ್ಡ್‌ ಸ್ಥಾಪಿಸಿ ಅಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಪೂರಕ ವಾತಾವರಣ ಕಲ್ಪಿಸಬೇಕು ಎಂದರು.

ಹೊರ ರಾಜ್ಯಗಳಿಂದ ಹಾಸನಕ್ಕೆ  ಬರುತ್ತಿವವರ ನಿಗಾ ವಹಿಸಿ ಅವರನ್ನು ಚೆಕ್‌ ಪೋಸ್ಟ್‌ಗಳಲ್ಲಿಯೇ ತಡೆದು, ಕ್ವಾರಂಟೈನ್‌ ಕೇಂದ್ರಗಳಿಗೆ ದಾಖಲಿಸಿ ತಪಾಸಣೆ ನಡೆಸಬೇಕು. ಆಸ್ಪತ್ರೆ ಮತ್ತು ಕ್ವಾರಂಟೈನ್‌ ಕೇಂದ್ರಗಳಲ್ಲಿ ಮೂಲ ಸೌಕರ್ಯ  ಕಲ್ಪಿಸಬೇಕು. ಆಸ್ಪತ್ರೆಯಲ್ಲಿ ರುವ ಕೋವಿಡ್‌ 19 ಸೋಂಕಿತರಿಗೆ ಪ್ರತಿನಿತ್ಯ ವಿವಿಧ ಬಗೆಯ ತಿಂಡಿ ಊಟ ನೀಡಬೇಕು. ಸೋಂಕಿತರು ಸಮಯ ಕಳೆಯಲು ಪುಸ್ತಕ ಮತ್ತು ದಿನ ಪತ್ರಿಕೆಗಳನ್ನು ನೀಡಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ  ಆರ್‌.ಗಿರೀಶ್‌ ಮಾತ  ನಾಡಿ ಹಾಸನದ ಕೋವಿಡ್‌ 19 ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇವೆ ಎಂದರು. ಎಸ್ಪಿ ಶ್ರೀನಿವಾಸ್‌ ಗೌಡ, ಜಿಪಂ ಸಿಇಒ ಬಿ.ಎ.ಪರಮೇಶ್‌, ಅಪರ ಜಿಲ್ಲಾ ಧಿಕಾರಿ ಕವಿತಾ ರಾಜಾರಾಂ, ಉಪ  ವಿಭಾಗಾಧಿಕಾರಿ ಡಾ.ನವೀನ್‌ ಭಟ್‌, ಡಿಎಚ್‌ಒ ಡಾ.ಸತೀಶ್‌ಕುಮಾರ್‌, ಜಿಲ್ಲಾ ಶಸOಉ ಚಿಕಿತ್ಸಕ ಡಾ.ಕೃಷ್ಣಮೂರ್ತಿ, ಹಿಮ್ಸ್‌ ನಿರ್ದೇಶಕ ಡಾ.ರವಿಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next