Advertisement

ಲಾಕ್‌ಡೌನ್‌ ಸಡಿಲಿಕೆ ದುರುಪಯೋಗವಾಗದಂತೆ ನೋಡಿಕೊಳ್ಳಿ

03:36 PM May 02, 2020 | Suhan S |

ಅಳ್ನಾವರ: ಕಳೆದ ಒಂದು ತಿಂಗಳಿನಿಂದ ಲಾಕ್‌ ಡೌನ್‌ ಘೋಷಣೆಯಾಗಿ ಸ್ಥಗಿತಗೊಂಡಿದ್ದ ಅಗತ್ಯ ಕೆಲಸಗಳಿಗೆ ಸರ್ಕಾರ ಅನುಮತಿ ನೀಡಿದೆ. ದುಡಿಮೆಗಾರರು, ವ್ಯವಹಾರಸ್ಥರು ಹಾಗೂ ರೈತರಿಗೆ ಅನುಕೂಲವಾಗಲಿದೆ. ಆದರೂ ಸರ್ಕಾರದ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು

Advertisement

ಪಪಂದಲ್ಲಿ ಅಧಿಕಾರಿಗಳು, ಉದ್ಯಮಿಗಳು ಹಾಗೂ ವರ್ತಕರ ಸಭೆ ನಡೆಸಿ ಅವರು ಮಾತನಾಡಿದರು. ನಿಯಮಾವಳಿಗಳಲ್ಲಿ ಸ್ವಲ್ಪ ಮಟ್ಟಿಗೆ ಸಡಿಲಿಕೆ ಮಾಡಿ ಆರ್ಥಿಕ ಚಟುವಟಿಕೆ ಕೈಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಈ ಸಡಿಲಿಕೆಯು ಜನದಟ್ಟಣೆಗೆ ಕಾರಣವಾಗದಂತೆ ನೋಡಿಕೊಳ್ಳಬೇಕೆಂದರು.

ಹೆಚ್ಚಿನ ದರಕ್ಕೆ ವಸ್ತುಗಳನ್ನು ಮಾರಾಟ ಮಾಡುವುದು ಕಂಡುಬಂದರೆ ಅಂತಹವರ ಮೇಲೆ ಕ್ರಮ ಕೈಕೊಳ್ಳಬೇಕು. ಅವಶ್ಯ ವಸ್ತುಗಳು ಜನರಿಗೆ ಸರಾಗವಾಗಿ ಸಿಗುವಂತೆ ನೋಡಿಕೊಳ್ಳಬೇಕು. ಕೆಲಸಕ್ಕೆ ಹೊರಗಿನಿಂದ ಕಾರ್ಮಿಕರನ್ನು ಕರೆತರಬಾರದು. ರೈತರು ಕೃಷಿ ಚಟುವಟಿಕೆಗಳಿಗೆ ಹೊಲಗಳಿಗೆ ಓಡಾಡಲು ಅಡಚಣೆ ಮಾಡಬಾರದೆಂದು ಹೇಳಿದರು.

ತಹಶೀಲ್ದಾರ್‌ ಅಮರೇಶ ಪಮ್ಮಾರ, ಪಪಂ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಪಿಎಸ್‌ಐ ಎಸ್‌.ಆರ್‌. ಕಣವಿ, ಎಂಎಸ್‌ ಐಎಲ್‌ ನಿರ್ದೇಶಕ ಶಿವಾಜಿ ಡೊಳ್ಳಿನ, ಸರ್ಕಾರಿ ಆಸ್ಪತ್ರೆ ವೈದ್ಯ ಡಾ| ಎನ್‌.ಎಸ್‌. ಪಾಟೀಲ, ಲಿಂಗರಾಜ ಮೂಲಿಮನಿ, ನಾರಾಯಣ ಮೋರೆ, ಉದ್ದಿಮೆದಾರ ಎಂ.ಸಿ.ಹಿರೇಮಠ, ಬಸವೇಶ ಹಟ್ಟಿಹೋಳಿ, ಯಲ್ಲಾರಿ ಹುಬ್ಬಳಿಕರ, ಸುನಂದಾ ಕಲ್ಲು, ರಾಜೇಶ ಬೈಕೇರಿಕರ,ಪ್ರತಾಪ ಕಲಾಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next