Advertisement
ಪ್ರೇಮಿಗಳ ದಿನದಂದು ಉಡುಗೊರೆ ನೀಡಬೇಕೆಂದು ಹಲವರು ಆಸೆ ಹೊಂದಿರುತ್ತಾರೆ. ಅಂತಹ ಆಸೆ ಮತ್ತು ಭಾವನೆಗಳನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಸೈಬರ್ ವಂಚಕರು, ನಕಲಿ ವೆಬ್‌ಸೈಟ್, ಆ್ಯಪ್‌ಗ್ಳು, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ರಿಯಾಯಿತಿ ದರದಲ್ಲಿ ಉಡುಗೊರೆಗಳು, ಬಹುಮಾನ, ರಿಯಾಯಿತಿ ದರದಲ್ಲಿ ಪಂಚತಾರ ಹೊಟೇಲ್‌ಗಳ ಬಾಡಿಗೆಗೆ ಹೀಗೆ ಹತ್ತಾರು ಮಾದರಿಯ ನಕಲಿ ಲಿಂಕ್‌ಗಳನ್ನು ಹರಿಬಿಟ್ಟು ವಂಚಿಸುತ್ತಾರೆ.
ವಂಚಕರು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟ್ರಾಗ್ರಾಂಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ಅದನ್ನು ಸ್ವೀಕರಿಸಿದ ವ್ಯಕ್ತಿ ಚಾಟಿಂಗ್ ಆರಂಭಿಸಿ ಕೆಲ ಆಮಿಷಗಳನ್ನೊಡ್ಡಿ ಅವರ ವೈಯಕ್ತಿಕ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಆ ವ್ಯಕ್ತಿ ತನ್ನ ಮೊಬೈಲ್ ನಂಬರ್, ಈಮೇಲ್ ವಿಳಾಸ ನೀಡಿದರೆ ಅವರ ಸಂಪೂರ್ಣ ದಾಖಲೆಗಳನ್ನು ಕಳವು ಮಾಡಿ, ನಂತರ ಅವರ ಬ್ಯಾಂಕ್ ಖಾತೆಯಿಂದ ಹಣ ದೋಚುತ್ತಾರೆ. ಇನ್ನು ಉಡುಗೊರೆ ಬಂದಿದೆ, ರಿಯಾಯಿತಿ ದರದಲ್ಲಿ ಪಂಚತಾರ ಹೋಟೆಲ್‌ನಲ್ಲಿ ಕೊಠಡಿ ಲಭ್ಯ, ನಗದು ಬಹುಮಾನ, ಲಾಟರಿ ಬಂದಿದೆ. ಪ್ರೇಮಿಗಳ ದಿನದ ವಿಶೇಷ ಕೊಡುಗೆ ನೀಡುವುದಾಗಿ ಕರೆ ಅಥವಾ ನಕಲಿ ವೆಬ್‌ಸೈಟ್‌ನ ಲಿಂಕ್ ಕಳುಹಿಸಿ ಕ್ಲೀಕ್ ಮಾಡುವಂತೆ ಕೋರುತ್ತಾರೆ. ಆ ಕೋರಿಕೆಗಳನ್ನು ಸ್ವೀಕರಿಸಿದ ಕೆಲವೇ ಹೊತ್ತಿನಲ್ಲಿ ಆ ವ್ಯಕ್ತಿಯ ಎಲ್ಲ ವೈಯಕ್ತಿಕ ಮಾಹಿತಿಗಳನ್ನು ವಂಚಕರು ಕದ್ದು ಮಾರುತ್ತಾರೆ. ಇಲ್ಲವೆ, ಆ್ಯಪ್‌ಗ್ಳ ಲಿಂಕ್‌ಗಳನ್ನು ಕಳುಹಿಸಿ, ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ವಂಚಿಸಲಾಗುತ್ತಿದೆ.
Related Articles
Advertisement
ಪ್ರೇಮಿಗಳ ದಿನ ಸೇರಿ ವಿಶೇಷ ದಿನಗಳಂದೇ ಸೈಬರ್ ವಂಚಕರು ನಾನಾ ರೀತಿಯ ಆಮಿಷವೊಡ್ಡಿ ಸಾರ್ವಜನಿಕರ ವಂಚಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು. ಜತೆಗೆ ಅಪರಿಚಿತ ವ್ಯಕ್ತಿಗಳ ಸಂದೇಶ, ಕರೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿ– ಅನೂಪ್ ಶೆಟ್ಟಿ , ಈಶಾನ್ಯವಿಭಾಗ ಡಿಸಿಪಿ -ಮೋಹನ ಭದ್ರಾವತಿ