Advertisement

ಋತುಚಕ್ರ ಶುಚಿತ್ವದ ಅರಿವು ಮೂಡಿಸಿ

07:49 AM May 31, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಮಹಿಳೆಯರಲ್ಲಿ ಋತುಚಕ್ರವು ಒಂದು ಸಹಜ ಜೈವಿಕ ಪ್ರಕ್ರಿಯೆ. ಅದಿಲ್ಲದೇ ಮಾನವ ಸಂತತಿ ಮುಂದುವರಿಯಲಾರದು. ಋತುಚಕ್ರದ ಬಗ್ಗೆ ಜನರಲ್ಲಿ ರುವ ಮೂಢನಂಬಿಕೆ ಹಾಗೂ ತಪ್ಪು ಕಲ್ಪನೆಗಳನ್ನು ಹೋಗ ಲಾಡಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವ  ಹಣಾಧಿಕಾರಿ ಬಿ.ಫೌಝೀಯಾ ತರುನ್ನುಮ್‌ ತಿಳಿಸಿದರು.

Advertisement

ನಗರದ ಜಿಪಂನ ಡಾ.ಹೆಚ್‌.ನರಸಿಂಹಯ್ಯ ಮಿನಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮೀಣ ಕುಡಿಯುವ ನೀರು  ಮತ್ತು ನೈರ್ಮಲ್ಯ ಯೋಜನೆಯಡಿ ಮಹಿಳೆಯರಲ್ಲಿ ಋತುಚಕ್ರದ ಶುಚಿತ್ವದ ಅರಿವು ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ದರು. ಋತುಚಕ್ರದ ಶುಚಿತ್ವದಿಂದ ಲೈಂಗಿಕ ಸೋಂಕು ಇತರೆ ಗುಪ್ತರೋಗಗಳಿಂದ  ದೂರವಿರಬಹುದು ಎಂಬ ಅರಿವು ಗ್ರಾಮೀಣ ಜನಸಾಮಾನ್ಯರಲ್ಲಿ ಬರಬೇಕಾಗಿದೆ.

ಅರಿವು ಮೂಡಿಸುವ ಕಾರ್ಯವನ್ನು ನಾವು ನೀವು ಗಳು ಒಟ್ಟಾಗಿ ಮಾಡಬೇಕಾದ ಅಗತ್ಯವಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಈ ಕುರಿತು ಅರಿವು  ಮೂಡಿಸುವ ಕಾರ್ಯ ಆಗಬೇಕೆಂದರು. ಚಿಕ್ಕಬಳ್ಳಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುಳಾ ಮಾತನಾಡಿ, ಮಹಿಳೆಯರಿಗೆ ಋತುಚಕ್ರದ ಶುಚಿತ್ವದ ಅಗತ್ಯದ ಬಗ್ಗೆ ಹಾಗೂ ಸಪ್ತಾಹ ಆಚರಿಸುವ ಜೊತೆಗೆ ಜನಸಾಮಾನ್ಯರಲ್ಲಿ  ಅರಿವು ಮೂಡಿಸುವುದರ ಬಗ್ಗೆ ವಿವರಿಸಿದರು.

ಸಭೆಯಲ್ಲಿ ಜಿಪಂನ ಡಿ.ಆರ್‌.ಡಿ. ಎ .ಯೋಜನಾ ನಿರ್ದೇಶಕ ಗಿರಿಜಾಶಂಕರ್‌, ಮುಖ್ಯ ಲೆಕ್ಕಾಧಿ ಕಾರಿ ಅರ್ಚನಾ, ಬಿ.ಕಮಲನಾಭನ್‌, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ  ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next