Advertisement
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಆದರೆ, ಕರಾವಳಿ ಜಿಲ್ಲೆಯ ಯಾವೊಬ್ಬ ಶಾಸಕರಿಗೂ ಸಚಿವ ಸ್ಥಾನ ನೀಡಿಲ್ಲ. ಅಷ್ಟು ಮಾತ್ರವಲ್ಲದೆ, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹಿರಿಯ ಶಾಸಕರಾದ ಎಸ್.ಅಂಗಾರ ಮತ್ತು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಈ ಬಾರಿಯೂ ಕಡೆಗಣಿಸಲಾಗಿದೆ. “ಒಟ್ಟಿನಲ್ಲಿ ಪಕ್ಷ ಸಂಘಟನೆಗೆ ಕರಾವಳಿ, ಕರಾವಳಿಗರು ಬೇಕು. ಅಧಿಕಾರ ಹಂಚಿಕೆಯಲ್ಲಿ ಕರಾವಳಿಗರು ಬೇಕೆಂದಿಲ್ಲ ಎಂಬ ಮಾನಸಿಕತೆ ಬಿಜೆಪಿ ರಾಜ್ಯ ನಾಯಕರಲ್ಲೂ ಬಂದು ಬಿಟ್ಟಿದೆ.
Related Articles
Advertisement
21ರಲ್ಲಿ 18 ಬಿಜೆಪಿ ಶಾಸಕರು: ಉಡುಪಿ ಜಿಲ್ಲೆಯ ಐದು ಕ್ಷೇತ್ರದಲ್ಲಿ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನಿಲ್ ಕುಮಾರ್, ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಸುಕುಮಾರಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್.ಅಂಗಾರ, ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಸಂಜೀವ ಮಟ್ಟಂದೂರು, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ, ಹರೀಶ್ ಪುಂಜಾ ಶಾಸಕರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುನಿಲ್ ನಾಯ್ಕ, ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ವಿಶ್ವೇಶರ ಹೆಗಡೆ ಕಾಗೇರಿ (ಸ್ವೀಕರ್) ಹಾಗೂ ಕೊಡಗು ಜಿಲ್ಲೆಯಿಂದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್ ಬಿಜೆಪಿಯ ಶಾಸಕರಾಗಿ ದ್ದಾರೆ. ನಾಲ್ಕು ಜಿಲ್ಲೆಯ 21 ಕ್ಷೇತ್ರದಲ್ಲಿ ಸದ್ಯ ಇಬ್ಬರು ಮಾತ್ರ ಕಾಂಗ್ರೆಸ್ ಶಾಸಕರಿರುವುದು. ಯಲ್ಲಾಪುರದ ಶಿವರಾಮ್ ಹೆಬ್ಬಾರ್ ಈಗ ಅನರ್ಹಗೊಂಡಿದ್ದಾರೆ.
ಶಾಸಕ, ಸಂಸದರಿಗೆ ನಿರಂತರ ಫೋನ್ ಕರೆ: ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ಕರಾವಳಿಯ 18 ಬಿಜೆಪಿ ಶಾಸಕರು ಹಾಗೂ ಇಬ್ಬರು ಲೋಕಸಭಾ ಸದಸ್ಯರಿಗೆ ಕಾರ್ಯಕರ್ತರು ಮೇಲಿಂದ ಮೇಲೆ ದೂರವಾಣಿ ಕರೆ ಮಾಡಿ ಕರಾವಳಿಯನ್ನು ಯಾಕಿಷ್ಟು ಕಡೆ ಗಣಿಸುತ್ತಿದ್ದೀರಿ ಎಂದು ಪ್ರಶ್ನೆ ಮಾಡ ಲಾರಂಭಿಸಿದ್ದರು. ಹೈಕಮಾಂಡ್ ಕೊಟ್ಟಿರುವ ಪಟ್ಟಿ ಎಂದು ತೇಪೆಯ ಉತ್ತರ ವನ್ನು ಸಂಸದ, ಶಾಸಕರು ನೀಡಿದರೂ, ಕಾರ್ಯಕರ್ತರು ಸಮಾಧಾನ ಗೊಳ್ಳುತ್ತಿಲ್ಲ. ಶಾಸಕರಿಗೆ ಕಾರ್ಯಕರ್ತರು ಫೋನ್ ಮಾಡಿ ಬೈಯುತ್ತಿರುವ ಆಡಿಯೋಗಳು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿವೆ.
* ರಾಜು ಖಾರ್ವಿ ಕೊಡೇರಿ