ಬೆಂಗಳೂರು: ಬಿಡಿಎ ಆಯುಕ್ತರ ವರ್ಗಾವಣೆಗಾಗಿ ಮುಖ್ಯಮಂತ್ರಿಗಳ ಮೇಲೆ ನಾನು ಯಾವುದೇ ಒತ್ತಡ ಹೇರಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ಹೇಳಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುಕ್ತರ ಬದಲಾವಣೆಗೆ ಯಾವುದೇ ಒತ್ತಡ ಹೇರಿಲ್ಲ. ಬದಲಾಗಿ ಕಾಯಂ ಆಯುಕ್ತರೊಬ್ಬರನ್ನು ಪ್ರಾಧಿಕಾರಕ್ಕೆ ನೇಮಿಸುವಂತೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು.
ರಾಮಲಿಂಗಂ ನಿರ್ಮಾಣ ಸಂಸ್ಥೆ ಪರ ನಾನು ಒತ್ತಡಹಾಕಿಲ್ಲ. ಈ ಹಿಂದೆ ಮಂಜೂರು ಆಗಿದ್ದ ಟೆಂಡರ್‌ಗೆ ಕಾರ್ಯಾದೇಶ ಕೂಡಿ ಎಂದು ಹೇಳಿದ್ದೇನೆ. ರಾಮಲಿಂಗಂ ಕಂಪನಿ ಕಪ್ಪು ಪಟ್ಟಿಯಲ್ಲಿ ಇಲ್ಲ. ಒಂದು ವೇಳೆ ಕಪ್ಪು ಪಟ್ಟಿಯಲ್ಲಿ ಆ ಕಂಪನಿ ಇದಿದ್ದರೆ ಆಯುಕ್ತರು ನನಗೆ ಮಾಹಿತಿ ಕೊಡಬೇಕಾಗಿತ್ತು. ರಾಮಲಿಂಗಂ ಕಂಪನಿಗೂ ಮತ್ತು ನನಗೂ ಯಾವುದೇ ಆಪ್ತತೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹತ್ತು ಕಡತಗಳ ವಿಲೇವಾರಿ ಮಾಡಲು ಖಾಸಗಿ ಹೋಟೆಲ್‌ನಲ್ಲಿ ರೂಮ್ ಮಾಡಿ ಕೊಂಡಿದ್ದರು. ಅಲ್ಲಿಯೇ ದಾಖಲೆ ತರಿಸಿಕೊಂಡು ಪರಿಶೀಲಿಸುತ್ತಾರೆ. ತಮ್ಮ ಏಜೆಂಟ್ ಮೂಲಕ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ವರದಿಯೂ ಆಗಿದೆ ಎಂದು ಆರೋಪಿಸಿದರು.
ರಾಕೇಶ್‌ಸಿಂಗ್ ನಡೆಸಿರುವ ಅವ್ಯವಹಾರದ ಬಗ್ಗೆ ನನ್ನ ಬಳಿ ದಾಖಲೆಗಳಿವೆ.ಅಗತ್ಯ ಬಂದರೆ ಅವುಗಳನ್ನು ಬಿಡುಗಡೆ ಮಾಡುತ್ತೇನೆ.ಆ ದಾಖಲೆಗಳ ಬಿಡುಗಡೆ ಮುನ್ನಾ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಿ ಮುಂದುವರಿಯುವುದಾಗಿ ತಿಳಿಸಿದರು.
ಚಿತ್ರನಟಿಯ ಕೆಲಸ ಮಾಡುತ್ತಾರೆ: ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಮೇಲೆ ಬಂದ ಆರೋಪದ ಸಂಬಂಧ ಸರ್ಕಾರಕ್ಕೆ ದೂರು ಕೊಟ್ಟಿದ್ದೆ. ಆ ಹಿನ್ನೆಲೆಯಲ್ಲಿಯೇ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ.ಯಾವುದೇ ಕೆಲಸವನ್ನು ಹಾಲಿ ಆಯುಕ್ತರು ಮಾಡುತ್ತಿಲ್ಲ. ಅವರ ವಿರುದ್ಧ ಮಾತನಾಡಿದರೆ ಯಾವ ಕೆಲಸವನ್ನು ಮಾಡೋದಿಲ್ಲ.ಅವರು ಮಾಡೋದು ಚಿತ್ರನಟಿಯೊಬ್ಬರ ಕೆಲಸ ಮಾತ್ರ ಎಂದು ಬಿಡಿಎ ಅಧ್ಯಕ್ಷ ಎಸ್.ಟಿ ಸೋಮಶೇಖರ ದೂರಿದರು.