Advertisement
ಬಿಸಿಜಿ ಲಸಿಕೆ ಬಳಕೆಯಿಂದ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ ಎಂಬ ಅಂಶವನ್ನು ಉತ್ತರ ಪ್ರದೇಶದ ಕೋವಿಡ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ರೇಣು ಅಗರ್ ವಾಲ್ ತಿಳಿಸಿದ್ದಾರೆ. ಮಾತ್ರವಲ್ಲದೆ ಈ ಅಂಶವನ್ನು ಸಂಶೋಧನಾ ವರದಿಯಲ್ಲಿ ಕೂಡ ಉಲ್ಲೇಖಿಸಿಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Related Articles
Advertisement
ತರುವಾಯ 130 ಜನ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ಎರಡನೇ ಗುಂಪಿನಲ್ಲಿ ಆಗಸ್ಟ್ 24 ರಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಗಿತ್ತು. ಇದರಲ್ಲಿ 50 ಮಂದಿಗೆ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ಯಾರೊಬ್ಬರಲ್ಲಿಯೂ ಸೋಂಕು ಕಂಡುಬಂದಿಲ್ಲ ಎನ್ನಲಾಗಿದೆ. ನಿಯಂತ್ರಣ ಗುಂಪಿನಲ್ಲಿದ್ದ ಇತರ 80 ಜನರನ್ನು ಗಮನಿಸಿದಾಗ, 20 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ ಎನ್ನಲಾಗಿದೆ.
ಸ್ವತಃ ಡಾ.ರೇಣು ಅಗರ್ ವಾಲ್ ಕೂಡ ಕೋವಿಡ್ ನಿಂದ ಪಾರಾಗಲು ಈ ಲಸಿಕೆಯ ಪ್ರಯೋಗಕ್ಕೆ ಒಳಪಟ್ಟಿದ್ದರು. ಈ ಲಸಿಕೆ ಪ್ರಯೋಗಕ್ಕೆ ಒಳಪಟ್ಟ ಬಹಳಷ್ಟು ಮಂದಿ ಮಧುಮೇಹ, ಉಸಿರಾಟದ ತೊಂದರೆ ಸೇರಿದಂತೆ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದು ಯಾರಿಗೂ ಸಹ ಅಡ್ಡಪರಿಣಾಮಗಳಾಗಿಲ್ಲ ಹಾಗೂ ಯಾರೊಬ್ಬರಲ್ಲೂ ಸೋಂಕು ಕಂಡುಬಂದಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಪತ್ನಿಯನ್ನು ತೊರೆದ ಪತಿ! ತಿಂಗಳಿಗೆ 1.5 ಲಕ್ಷ ರೂ. ಪರಿಹಾರ ನೀಡಲು ಪತಿಗೆ ಕೋರ್ಟ್ ಆದೇಶ!
ಡಾ. ರೇಣು ಅಗರವಾಲ್ ಹೇಳುವಂತೆ, ಭಾರತದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗತೊಡಗಿದಾಗ, ಅಮೆರಿಕ, ಯುಕೆ, ಇಂಗ್ಲೆಂಡ್, ಇಟಲಿ ಮುಂತಾದ ದೇಶಗಳ ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ ಬಿಸಿಜಿ ಲಸಿಕೆ ನೀಡಲಾರಂಭಿಸಿದರು. ಇದರಿಂದ ಸ್ಪೂರ್ತಿ ಪಡೆದು, ಸಂಶೋಧನೆ ಆರಂಭಿಸಲಾಗಿತ್ತು. ಈ ಕುರಿತ ವರದಿ ಕೂಡ ನವೆಂಬರ್ 4 ರಂದು ಪ್ರಕಟವಾಗಿದೆ ಎಂದು ತಿಳಿಸಿದ್ದಾರೆ.
ಅದಾಗ್ಯೂ ಈ ವೈದ್ಯಕೀಯ ಸಂಶೋಧನೆಯನ್ನು, ಯಾವುದೇ ಕಾರಣಕ್ಕೂ ಕೋವಿಡ್ ವೈರಸ್ ಗೆ ಲಸಿಕೆ ಸಿಕ್ಕಿತೆಂಬುದಾಗಿ ಪರಿಗಣಿಸಲಾಗುವುದಿಲ್ಲ. ಸೋಂಕಿಗೆ ತುತ್ತಾದವರು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಹೇಳಿದ್ದಾರೆ.
ಇದನ್ನೂ ಓದಿ: ಕುಪ್ವಾರದಲ್ಲಿ ಗುಂಡಿನ ದಾಳಿ :ಇಬ್ಬರು ಯೋಧರು, ಓರ್ವ BSF ಸಿಬ್ಬಂದಿ ಹುತಾತ್ಮ! ಉಗ್ರನ ಹತ್ಯೆ