Advertisement

ಆಗಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಆಡಲು ಸಾಧ್ಯವಿಲ್ಲ

12:15 PM May 23, 2020 | keerthan |

ಮುಂಬೈ: ಕೋವಿಡ್-19 ಲಾಕ್ ಡೌನ್ ಕಾರಣದಿಂದ ಸ್ಥಬ್ಧವಾಗಿರುವ ಕ್ರಿಕೆಟ್ ಜಗತ್ತು ಮುಂದೆ ಯಾವಾಗ ಆಟ ಆರಂಭವಾಗುತ್ತದೆ ಎಂದು ಕಾಯುತ್ತಿದೆ. ಇದೇ ವೇಳೆ ಆಗಸ್ಟ್ ತಿಂಗಳಲ್ಲಿ ಟೀಂ ಇಂಡಿಯಾ ವಿರುದ್ಧ ಟಿ20 ಸರಣಿ ಆಡುವ ಬಗ್ಗೆ ದಕ್ಷಿಣ ಆಫ್ರಿಕಾ ಉತ್ಸುಕತೆ ತೋರಿಸಿದ್ದು, ಆದರೆ ಅಂಥಹ ಯಾವುದೇ ಮಾತಕತೆ ನಡೆಸಿಲ್ಲ ಎಂದು ಬಿಸಿಸಿಐ ಹೇಳಿಕೊಂಡಿದೆ.

Advertisement

ಮೂರು ಟಿ20 ಪಂದ್ಯಗಳ ಸರಣಿಯನ್ನಾಡಲು ಭಾರತ ಇಪ್ಪಿಕೊಂಡಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ನಿರ್ದೇಶಕ ಗ್ರೇಮ್ ಸ್ಮಿತ್ ಮತ್ತು ಸಿಇಒ ಜ್ಯಾಕ್ ಫೌಲ್ ಹೇಳಿಕೊಂಡಿದ್ದರು. ಆದರೆ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ನಿರಾಕರಿಸಿದ್ದಾರೆ.

ಕೋವಿಡ್-19 ಕಾರಣದಿಂದ ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ರದ್ದಾದಾಗ ಮುಂದೆ ಸರಣಿಯನ್ನು ನಡೆಸುವ ಬಗ್ಗೆ ಮಾತುಕತೆ ನಡೆಸಿದ್ದೆವು. ಆದರೆ ಆಗಸ್ಟ್ ನಲ್ಲಿ ಪ್ರವಾಸ ನಡೆಸುವ ಕುರಿತು ಎಲ್ಲೂ ಹೇಳಿಕೊಂಡಿಲ್ಲ ಎಂದು ಧುಮಾಲ್ ಹೇಳಿಕೊಂಡಿದ್ದಾರೆ.

ಭಾರತ ಸರಕಾರ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅನುವು ಮಾಡಿಕೊಡದ ಹೊರತು ಬಿಸಿಸಿಐ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಧುಮಾಲ್ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next