Advertisement

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಅತಂತ್ರ

11:05 PM Nov 26, 2021 | Team Udayavani |

ಕಾನ್ಪುರ: ನ್ಯೂಜಿಲ್ಯಾಂಡ್‌ ವಿರುದ್ಧದ ಸ್ವದೇಶಿ ಸರಣಿ ಮುಗಿದ ಬಳಿಕ ಭಾರತ ಕ್ರಿಕೆಟ್‌ ತಂಡ ದಕ್ಷಿಣ ಆಫ್ರಿಕಾಕ್ಕೆ ತೆರಳಬೇಕು.ಆದರೆ ದಕ್ಷಿಣ ಆಫ್ರಿಕಾದ ಉತ್ತರಭಾಗದಲ್ಲಿ ಏರುತ್ತಿರುವ ಕೊರೊನಾ ಪ್ರಮಾಣವನ್ನು ಗಮನಿಸುವಾಗ ಈ ಪ್ರವಾಸ ಅತಂತ್ರವೆನ್ನದೆ ವಿಧಿಯಿಲ್ಲ.

Advertisement

ಜೊಹಾನ್ಸ್‌ಬರ್ಗ್‌ ಹಾಗೂ ಪ್ರಿಟೋರಿಯದಲ್ಲಂತೂ ಆಡುವುದೇ ಕಷ್ಟ ಎಂಬ ಪರಿಸ್ಥಿತಿ ಇದೆ.ಇಂತಹ ಹೊತ್ತಿನಲ್ಲಿ ಬಿಸಿಸಿಐ ಏನು ತೀರ್ಮಾನಿಸಲಿದೆ ಎಂಬ ಪ್ರಶ್ನೆಯಿದೆ.

ಡಿಸೆಂಬರ್ 17 ರಿಂದ ಸರಣಿ ಆರಂಭ
ಭಾರತ ಕ್ರಿಕೆಟ್‌ ತಂಡ ಮುಂದಿನ ತಿಂಗಳಿನಿಂದ ದಕ್ಷಿಣ ಆಫ್ರಿಕಾದಲ್ಲಿ 3 ಟೆಸ್ಟ್ ಪಂದ್ಯಗಳು, 3 ಏಕದಿನ ಪಂದ್ಯಗಳು ಮತ್ತು 4 ಟಿ20 ಪಂದ್ಯಗಳ ಸರಣಿಯನ್ನು ಆಡಬೇಕಾಗಿದೆ.

ಇದನ್ನೂ ಓದಿ:ಇಬ್ಬಗೆ ನೀತಿ ಬಿಡಿ; ಕಿಡಿಗೇಡಿಗಳ ಶಿಕ್ಷಿಸಿ; ಪಾಕಿಸ್ತಾನ ವಿರುದ್ಧ ಕೇಂದ್ರದ ತರಾಟೆ

ಈ ಪ್ರವಾಸಕ್ಕಾಗಿ ಭಾರತ ತಂಡ ಡಿಸೆಂಬರ್ 8 ರಂದು ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ ಮತ್ತು ನಂತರ ಡಿಸೆಂಬರ್ 17 ರಿಂದ ಟೆಸ್ಟ್ ಪಂದ್ಯದೊಂದಿಗೆ ಸರಣಿಯು ಪ್ರಾರಂಭವಾಗಲಿದೆ.

Advertisement

ಈ ಪ್ರವಾಸಕ್ಕಾಗಿ ಭಾರತ ತಂಡ ಸುಮಾರು ಒಂದೂವರೆ ತಿಂಗಳ ಕಾಲ ದಕ್ಷಿಣ ಆಫ್ರಿಕಾದಲ್ಲಿ ಇರಲಿದೆ. ಈ ಪಂದ್ಯಗಳು ಜೋಹಾನ್ಸ್‌ಬರ್ಗ್, ಸೆಂಚುರಿಯನ್, ಪರ್ಲ್ ಮತ್ತು ಕೇಪ್ ಟೌನ್‌ನಲ್ಲಿ ನಾಲ್ಕು ಸ್ಥಳಗಳಲ್ಲಿ ನಡೆಯಲಿವೆ. ಆದರೆ  ಆಫ್ರಿಕನ್ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ ಇವು ಬದಲಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next