Advertisement

ಚಾಂಪಿಯನ್ಸ್‌ ಟ್ರೋಫಿಯನ್ನು ಟಿ20 ವಿಶ್ವಕಪ್‌ ಮಾಡಲು ಐಸಿಸಿ ಯತ್ನ

07:15 AM Apr 27, 2018 | Team Udayavani |

ಕೋಲ್ಕತಾ: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮತ್ತು ಭಾರತ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ನಡುವೆ ಮತ್ತೂಂದು ಸುತ್ತಿನ ಹಗ್ಗಜಗ್ಗಾಟ ಶುರುವಾಗಿದೆ. 2021ರಂದು ಭಾರತದಲ್ಲಿ ನಡೆಯಲಿರುವ ಏಕದಿನ ಚಾಂಪಿಯನ್ಸ್‌ ಟ್ರೋಫಿಯನ್ನು ಟಿ20 ವಿಶ್ವಕಪ್‌ ಎಂದು ಬದಲಾಯಿಸಲು ಐಸಿಸಿ ಹೊರಟಿದೆ. ಇದನ್ನು ಬಿಸಿಸಿಐ ಬಲವಾಗಿ ವಿರೋಧಿಸಿದೆ. ಇದರಿಂದ ತನಗೆ ಆರ್ಥಿಕ ನಷ್ಟವಾಗುತ್ತದೆ ಎನ್ನುವುದು ಬಿಸಿಸಿಐ ವಾದ.

Advertisement

ಈ ಮಾದರಿ ಬದಲಾಯಿಸುವುದರಿಂದ ತನಗೆ 200 ಕೋಟಿ ರೂ. ನಷ್ಟವಾಗುತ್ತದೆ ಎಂದು ಬಿಸಿಸಿಐ, ಐಸಿಸಿಯೊಂದಿಗೆ ನಡೆದ ಮಾತುಕತೆ ವೇಳೆ ಹೇಳಿಕೊಂಡಿದೆ. ಇದು ಎರಡೂ ಕ್ರಿಕೆಟ್‌ ಶಕ್ತಿಕೇಂದ್ರಗಳ ನಡುವೆ ಮತ್ತೂಂದು ತಿಕ್ಕಾಟ ಸೃಷ್ಟಿಸುವ ಸಾಧ್ಯತೆಯಿದೆ. ಶಶಾಂಕ್‌ ಮನೋಹರ್‌ ಐಸಿಸಿ ಅಧ್ಯಕ್ಷರಾದ ಅನಂತರ ಎರಡೂ ಸಂಸ್ಥೆಗಳ ನಡುವೆ ಸತತ ತಿಕ್ಕಾಟ ನಡೆಯುತ್ತಿದೆ ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಬಹಳ ವರ್ಷಗಳ ಹಿಂದೆಯೇ ಚಾಂಪಿಯನ್ಸ್‌ ಟ್ರೋಫಿಯನ್ನು ನಿಲ್ಲಿಸಬೇಕೆಂದು ಐಸಿಸಿ ಹೊರಟಿತ್ತು. ಆದರೂ 2017ರಲ್ಲಿ ಇಂಗ್ಲೆಂಡ್‌ನ‌ಲ್ಲಿ ಕೂಟ ನಡೆದು ಯಶಸ್ವಿಯಾಗಿತ್ತು. ಇದೀಗ 2021ರಲ್ಲಿ ನಡೆಸಬೇಕೆಂದು ಉದ್ದೇಶಿಸಲ್ಪಟ್ಟಿರುವ ಈ ಕೂಟವನ್ನು ಟಿ20 ವಿಶ್ವಕಪ್‌ ಎಂದು ಬದಲಿಸಲು ಐಸಿಸಿ ಯೋಚಿಸಿದೆ. ಇದಕ್ಕೆ ಹಲವು ಕಾರಣ ನೀಡಿ ಬಿಸಿಸಿಐ ವಿರೋಧಿಸಿದೆ. ಐಸಿಸಿ ಮಾಜಿ ಅಧ್ಯಕ್ಷ ಜಗಮೋಹನ್‌ ದಾಲಿ¾ಯಾ ಕಾಲದಲ್ಲಿ ಈ ಕೂಟ ಶುರುವಾಗಿದ್ದರಿಂದ ಅದನ್ನು ನಿಲ್ಲಿಸಬಾರದು. 2021ರಲ್ಲಿ ಆ ಕೂಟವನ್ನು ದಾಲಿ¾ಯಾ ಸ್ಮರಣಾರ್ಥವೇ ನಡೆಸಲಾಗುವುದು ಎಂದು ಬಿಸಿಸಿಐ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next