Advertisement

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

03:41 PM Apr 16, 2024 | Team Udayavani |

ನವದೆಹಲಿ: ಐಪಿಎಲ್‌ ಪಂದ್ಯಗಳು ನಡೆಯುವ ದಿನ ಮೈದಾನದ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಬಿಸಿಸಿಐ ಸೂಚನೆ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Advertisement

ಪ್ರಸಾರ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂಬ ಕಾರಣಕ್ಕೆ ಈ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಐಪಿಎಲ್‌ನ ವೀಕ್ಷಕ ವಿವರಣೆಗಾರರು, ಆಟಗಾರರು, ಕಂಟೆಂಟ್‌ ತಂಡ ಮತ್ತು ಫ್ರಾಂಚೈಸಿಗಳಿಗೆ ಈ ಸೂಚನೆ ನೀಡಲಾಗಿದೆ.

ಐಪಿಎಲ್‌ ಪ್ರಸಾರಕ್ಕಾಗಿ ಸಂಸ್ಥೆಗಳು ಕೋಟ್ಯಂತರು ರು. ಹಣವನ್ನು ಪಾವತಿ ಮಾಡಿರುತ್ತವೆ. ಆದ್ದರಿಂದ ಮೈದಾನದ ವಿಡಿಯೋ ಫೋಟೋಗಳ ಮೇಲೆ ಈ ಸಂಸ್ಥೆಗಳು ಸಂಪೂರ್ಣ ಹಕ್ಕು ಹೊಂದಿರುತ್ತವೆ. ಉಳಿದವರು ಇವುಗಳನ್ನು ಹಂಚಿಕೊ ಳ್ಳುವುದು ಪ್ರಸಾರ ಹಕ್ಕಿನ ಉಲ್ಲಂಘನೆ ಯಾಗುತ್ತದೆ ಎಂದು ಬಿಸಿಸಿಐ ಹೇಳಿದೆ ಎಂದು ವರದಿ ತಿಳಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next