Advertisement

ಜಾರಿ ನಿರ್ದೇಶನಾಲಯದಿಂದ ಬಿಸಿಸಿಐ ಅಧಿಕಾರಿಗಳ ವಿಚಾರಣೆ

06:40 AM Mar 09, 2018 | Team Udayavani |

ಮುಂಬಯಿ: ಬಿಸಿಸಿಐ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಎಫ್ಇಎಂಎ) ಉಲ್ಲಂಘಿಸಿರುವ ಆರೋಪ ಎದುರಾಗಿದೆ. ಈ ಕುರಿತಂತೆ ಜಾರಿ ನಿರ್ದೇಶನಾಲಯ ಬಿಸಿಸಿಐ ಅಧಿಕಾರಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.

Advertisement

2009ರಲ್ಲಿ ಐಪಿಎಲ್‌ ವಿದೇಶದಲ್ಲಿ ನಡೆದಿತ್ತು. ಆಗ ಬಿಸಿಸಿಐ ಅಧ್ಯಕ್ಷರಾಗಿ ಶಶಾಂಕ್‌ ಮನೋಹರ್‌ ಇದ್ದರು. ಅವರು ಖರ್ಚಾಗಿಂತ ಕಡಿಮೆ ಹಣವನ್ನು ತೋರಿಸಲಾಗಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಐಪಿಎಲ್‌ ಕುರಿತಂತೆ ತೆಗೆದುಕೊಂಡ ನಿರ್ಧಾರಗಳಲ್ಲಿ ಎಷ್ಟೋ ವಿಷಯ ತನಗೆ ಗೊತ್ತೇ ಇರಲಿಲ್ಲ ಎಂದಿದ್ದಾರೆ. ಇದು ಪ್ರಕರಣಕ್ಕೆ ಟ್ವಿಸ್ಟ್‌ ನೀಡಿದೆ. ಒಟ್ಟಾರೆ ಹಣದ ದುರುಪಯೋಗ ನಡೆದಿದೆ ಎನ್ನುವ ಸಾಧ್ಯತೆ ದಟ್ಟವಾಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಸಿಸಿಐನ ಮುಖ್ಯ ಹಣಕಾಸು ನಿರ್ವಹಣಾ ಅಧಿಕಾರಿ ಪ್ರಸನ್ನ ಕಣ್ಣನ್‌, ಲಲಿತ್‌ ಮೋದಿ ಪರ ವಾದ ಮಾಡಿದ್ದ ವಕೀಲ ಸ್ವದೀಪ್‌ ಸಿಂಗ್‌ ಮತ್ತು ಅಭಿಷೇಕ್‌ ಸಿಂಗ್‌ ಅವರನ್ನು  ಜಾರಿ ನಿರ್ದೇಶನಾಲಯ ತೀವ್ರ ವಿಚಾರಣೆ ನಡೆಸುತ್ತಿದೆ. ಸದ್ಯ ಯಾವುದೇ ಮಾಹಿತಿಯೂ ಹೊರಬಿದ್ದಿಲ್ಲ. ಶ್ರೀನಿವಾಸನ್‌ ಆಗ ಬಿಸಿಸಿಐನಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದರು. ಲಲಿತ್‌ ಮೋದಿ ಐಪಿಎಲ್‌ನ ಸಂಸ್ಥಾಪಕರಾಗಿದ್ದರು. ಇವರಿಬ್ಬರೂ ಈಗ ಬಿಸಿಸಿಐನಿಂದ ಅಮಾನತುಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next