Advertisement
“ಆಟಗಾರರ ಸುರಕ್ಷಾ ದೃಷ್ಟಿಯಿಂದ ಐಪಿಎಲ್ ಪಂದ್ಯಾವಳಿಯನ್ನು ಭಾರತದಲ್ಲಿ ಆಡಿಸುವುದು ಸೂಕ್ತ. ಇದು ನಮ್ಮ ಮುಂದಿರುವ ಮೊದಲ ಆಯ್ಕೆ. ಆದರೆ ಪರಿಸ್ಥಿತಿ ಸುಧಾರಿಸದೆ ಹೋದರೆ ನಾವು ಉಳಿದೆಲ್ಲ ಸಾಧ್ಯತೆಗಳನ್ನು ಪರಿಶೀಲಿಸಲಿದ್ದೇವೆ. 2020ರ ಕೂಟವನ್ನು ಭಾರತದಾಚೆ ನಡೆಸಲು ಪ್ರಯತ್ನಿಸಲಿದ್ದೇವೆ’ ಎಂಬುದಾಗಿ ವಿಶೇಷ ಸಂದರ್ಶನವೊಂದರಲ್ಲಿ ಅರುಣ್ ಧುಮಾಲ್ ಹೇಳಿದ್ದಾರೆ.
“ನಾವು ಈಗಾಗಲೇ ಎರಡು ಸಲ ಐಪಿಎಲ್ ಪಂದ್ಯಾವಳಿಯನ್ನು ವಿದೇಶದಲ್ಲಿ ನಡೆಸಿ ಯಶಸ್ಸು ಕಂಡಿದ್ದೇವೆ. ಮಹಾಚುನಾವಣೆಯ ಕಾರಣ 2009ರ ಇಡೀ ಕೂಟವನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. ಹಾಗೆಯೇ 2014ರಲ್ಲಿ ಒಂದು ಹಂತದ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು. ಆದರೆ ಈ ಬಾರಿಯೂ ಐಪಿಎಲ್ ವಿದೇಶದಲ್ಲಿ ನಡೆಸಬೇಕೆಂಬುದು ನಮ್ಮ ಇಚ್ಛೆಯಲ್ಲ, ಇಂಥದೊಂದು ಸಾಧ್ಯತೆ ಇದೆ, ಅಷ್ಟೇ…’ ಎಂಬುದಾಗಿ ಅವರು ಹೇಳಿದರು. ಆದರೆ ಅಂದಿನ ಮಹಾಚುನಾವಣೆ ಕೇವಲ ಭಾರತದ ಆಂತರಿಕ ವಿಷಯವಾಗಿತ್ತು. ಈ ವೇಳೆ ಕ್ರಿಕೆಟಿಗೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಕೂಟವನ್ನು ವಿದೇಶದಲ್ಲಿ ಆಯೋಜಿಸಲಾಗಿತ್ತು. ಆದರೆ ಈಗ ಕೋವಿಡ್-19 ವೈರಸ್ ಇಡೀ ಜಗತ್ತನ್ನೇ ವ್ಯಾಪಿಸಿರುವಾಗ ಐಪಿಎಲ್ ಪಂದ್ಯಾವಳಿಯನ್ನು ವಿದೇಶದಲ್ಲಿ ನಡೆಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವಿಸುತ್ತದೆ.
Related Articles
ಇದಕ್ಕೂ ಹಿಂದೊಮ್ಮೆ 2020ರ ಐಪಿಎಲ್ ಕೂಟವನ್ನು ನಡೆಸಲು ಶ್ರೀಲಂಕಾ ಮತ್ತು ಯುಎಇ ಮುಂದೆ ಬಂದಿದ್ದಾಗಿ ವರದಿ ಆಗಿತ್ತು. ಆದರೆ ಈಗ ಇಲ್ಲಿಯೂ ಕೋವಿಡ್-19 ಹಾವಳಿಯೇನೂ ಕಡಿಮೆಯಾಗಿಲ್ಲ.
Advertisement
“ಇದ್ದುದರಲ್ಲಿ ಶ್ರೀಲಂಕಾ ವಾಸಿ. ಆದರೆ ಇಲ್ಲಿಯೂ ಕಳೆದೆರಡು ದಿನಗಳಿಂದ ಕೋವಿಡ್-19 ಸೋಂಕು ಹೆಚ್ಚಿದೆ. ಇಲ್ಲಿಯೂ ಸಮಸ್ಯೆ ಇದೆ’ ಎಂಬುದಾಗಿ ಧುಮಾಲ್ ಹೇಳಿದರು.