Advertisement

ಆರು ತಿಂಗಳ ಬಳಿಕ ಸಿಇಒ ರಾಹುಲ್ ಜೊಹ್ರಿ ರಾಜೀನಾಮೆ ಅಂಗೀಕರಿಸಿದ ಬಿಸಿಸಿಐ

01:26 PM Jul 10, 2020 | keerthan |

ಮುಂಬೈ: ಬಿಸಿಸಿಐನ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ರಾಹುಲ್ ಜೊಹ್ರಿ ಅವರು ನೀಡಿದ್ದ ರಾಜೀನಾಮೆಯನ್ನು ಬಿಸಿಸಿಐ ಕಡೆಗೂ ಅಂಗೀಕರಿಸಿದೆ. ಕಳೆದ ವರ್ಷದ ಅಂತ್ಯದಲ್ಲಿ ಜೊಹ್ರಿ ತನ್ನ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಆರು ತಿಂಗಳ ಬಳಿಕ ಅಂಗೀಕರಿಸಲಾಗಿದೆ.

Advertisement

ರಾಹುಲ್ ಜೊಹ್ರಿಯವರ ರಾಜೀನಾಮೆ ಸ್ವೀಕರಿಸಲಾಗಿದೆ. ಈ ಹಿಂದೆ ಎಪ್ರಿಲ್ 30ರ ವರೆಗೆ ಅವರಿಗೆ ಅವಕಾಶ ವಿಸ್ತರಿಸಲಾಗಿತ್ತು. ಆದರೆ ಗುರುವಾರ ರಾಜೀನಾಮೆ ಅಂಗೀಕರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸಿಇಒ ಸ್ಥಾನಕ್ಕೆ ರಾಹುಲ್ ಜೊಹ್ರಿ ಡಿಸೆಂಬರ್ 27ರಂದು ರಾಜೀನಾಮೆ ನೀಡಿದ್ದರು. ಆದರೆ ಬಿಸಿಸಿಐ ಬಿಗ್ ಬಾಸ್ ಗಳು ಇದುವರೆಗೆ ರಾಜೀನಾಮೆಯನ್ನು ಪುರಸ್ಕರಿಸಿರಲಿಲ್ಲ.

2016ರಲ್ಲಿ ಬಿಸಿಸಿಐ ಗೆ ಸಿಇಒ ನೇಮಕ ಮಾಡಬೇಕೆಂದು ಆದೇಶಿಸಿದಾಗ ರಾಹುಲ್ ಜೊಹ್ರಿ ಆಯ್ಕೆ ಮಾಡಲಾಗಿತ್ತು. 2021ರವರೆಗೆ ಜೊಹ್ರಿಯ ಅಧಿಕಾರ ಅವಧಿ ಇತ್ತು. ಆದರೆ ಜೊಹ್ರಿ ಕಳೆದ ಡಿಸೆಂಬರ್ ಅಂತ್ಯದಲ್ಲಿ ರಾಜೀನಾಮೆ ನೀಡಿದ್ದರು. ಇಷ್ಟು ಸಮಯ ರಾಜೀನಾಮೆ ಸ್ವೀಕರಿಸಿದ ಬಿಸಿಸಿಐ ಈಗ ಒಮ್ಮೆಲೆ ಅಂಗೀಕರಿಸಿದ ಕಾರಣ ಇನ್ನೂ ನಿಗೂಢವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next